ಎಲಬುರ್ಗ

ಗೆದಗೇರಿ ಸಮುದಾಯ ಆರೋಗ್ಯ ಕೇಂದ್ರದಿಂದ ಕ್ಷಯ ರೋಗ ಕುರಿತು ಮನೆ ಮನೆಗೆ ತೆರಳಿ ಅರಿವು ಮೂಡಿಸಿದರು

ಗೆದಗೇರಿ ಸಮುದಾಯ ಆರೋಗ್ಯ ಕೇಂದ್ರದಿಂದ ಕ್ಷಯ ರೋಗ ಕುರಿತು ಮನೆ ಮನೆಗೆ ತೆರಳಿ ಅರಿವು ಮೂಡಿಸಿದರು

ಯಲಬುರ್ಗಾ ಡಿಸೆಂಬರ್. 26 : ತಾಲೂಕು ಸಮೀಪದ ಗೆದಗೇರಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಆಶಾ ಕಾರ್ಯಕರ್ತೆಯರಿಂದ ಕ್ಷಯ ರೋಗ ಕುರಿತು ಮನೆ ಮನೆಗೆ ಭೇಟಿ ನೀಡಿ ಕ್ಷಯ ರೋಗ ಅರಿವು ಮೂಡಿಸುವ ಕಾರ್ಯಕ್ರಮ ನೆಡೆಯಿತು.

‘‘ಈ ರೋಗ ಮೈಕ್ರೋ ಬ್ಯಾಕ್ಟೀರಿಯ ದಿಂದ ಹರಡುತ್ತದೆ. ಇದು ಸಂಕ್ರಾಮಿಕ ರೋಗವಾಗಿದ್ದು. ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ರೋಗಕ್ಕೆ ತುತ್ತಾಗಿರುವ ವ್ಯಕ್ತಿ ಕೆಮ್ಮಿದಾಗ ಸೀನಿದಾಗ ಗಾಳಿ ಮೂಲಕ ರೋಗ ಹರಡುತ್ತದೆ. ಈಗಾಗಲೇ ಇಲಾಖೆ ವತಿಯಿಂದ ಕ್ಷಯ ರೋಗ ಕುರಿತು, ಗೆದಗೇರಿ ಆರೋಗ್ಯ ಕೇಂದ್ರ ವ್ಯಾಪ್ತಿಗೆ ಒಳಪಡುವ ಮದ್ಲೂರು, ಲಗಳೂರು, ಜಿ.ವೀರಾಪುರ, ಗ್ರಾಮಗಳಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿ ಮನೆಗಳಿಗೂ ಭೇಟಿ ನೀಡಿ ಸಕ್ರಿಯ ಕ್ಷಯ ರೋಗ  ಸರ್ವೆ ಮಾಡುವ ಮೂಲಕ ಜನರಿಗೆ ಅರಿವು ಮೂಡಿಸಲಾಗಿದೆ.

ರೋಗದ ಲಕ್ಷಣಗಳು: ಅತಿಯಾದ ಕೆಮ್ಮು, ಚಳಿ, ತೂಕದಲ್ಲಿ ವ್ಯತ್ಯಾಸ, ಸುಸ್ತು, ಕೆಮ್ಮಿದ ವೇಳೆಯಲ್ಲಿ ಬಾಯಿ ಯಿಂದ ರಕ್ತ ಬರುವುದು ಇವು ರೋಗದ ಲಕ್ಷಣಗಲಾಗಿವೆ.

ಆರೋಗ್ಯದಲ್ಲಿ ಏನಾದರು ಸಮಸ್ಯೆಗಳು ಉಂಟಾದ ಕೂಡಲೇ ಸ್ಥಳೀಯ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕು. ಕ್ಷಯ ರೋಗವನ್ನು ವರ್ಷದ ಎಲ್ಲ ದಿನವೂ ಚಿಕಿತ್ಸೆ ಪಡೆದು ಕೊಂಡರೇ ರೋಗವನ್ನು ಗುಣಪಡಿಸಬಹುದು. ಈ ರೋಗಕ್ಕೆ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ, ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಿರಿಯ ಮಹಿಳಾ ಆರೋಗ್ಯ ಅಧಿಕಾರಿ ಶ್ರೀದೇವಿ ತೋಟದ, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಸೇರಿದಂತೆ ಮಹಿಳೆಯರು ಹಾಜರಿದ್ದರು.

ಸುದ್ದಿ ಓದಿ