ಶಿಗ್ಗಾವ್

ವಿವಿಧ ಕ್ರೀಡೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ

ವಿವಿಧ ಕ್ರೀಡೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ


ಲೋಕದರ್ಶನ ವರದಿ 

ಶಿಗ್ಗಾವಿ 16: ತಾಲೂಕಿನ ಬಂಕಾಪುರ ಪಟ್ಟಣದ ಸೆಂಟ್ ಥಾಮಸ್ ನ್ಯೂಲೈಪ್ ಕಾನ್ವೆಂಟ ಸ್ಕೊಲ್ಕ್‌ 2022-23ನೆ ಸಾಲಿನ ಸರಸ್ವತಿ ಪೂಜೆ ಮತ್ತು ವಿವಿಧ ಕ್ರೀಡೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಿತು. 

ಸಮಾರಂಭ ಉದ್ಘಾಟಿಸಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ವಿದ್ಯಾರ್ಥಿಗಳು ಆಟ, ಪಾಠದೊಂದಿಗೆ ಕ್ರಿಯಾ ಶೀಲರಾಗಬೇಕು. ಶಿಕ್ಷಕರು ಪ್ರಾಥಮಿಕ ಹಂತದಿಂದಲೇ ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರ ಬೆಳೆಸಬೇಕು ಎಂದರು. 

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅತ್ಯುತ್ತಮ  ಶಿಕ್ಷಕಿ ಪ್ರಶಸ್ತಿ ವಿಜೇತ ಜಿ.ಎಸ್‌.ದೇಸಾಯಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ದೇಸಾಯಿ, ಕೋವಿಡ್ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಕುಂಠಿತಗೊಳ್ಳಲು ಕಾರಣವಾಗಿದೆ. ಬರುವ ದಿನಗಳಲ್ಲಿ ಸುಧಾರಿಸುವತ್ತ ನಮ್ಮಲ್ಲರ ಚಿತ್ತವಾಗಿದೆ ಎಂದರು. 

ಸಂಸ್ಥೆ ಅಧ್ಯಕ್ಷ ವಿರಣ್ಣ ಕೂಲಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸುರೇಶಗೌಡ್ರ ಪಾಟೀಲ, ಕಾರ್ಯದರ್ಶಿ ಬಸವರಾಜ ಬೇಟಗೆರಿ, ಸಹ ಕಾರ್ಯದರ್ಶಿ ನಿಂಗಪ್ಪ ರಾಣೋಜಿ, ಖಜಾಂಚಿ ಈರಯ್ಯ ಹೀರೆಮಠ, ನಿರ್ದೆಶಕರಾದ ಅನುಸೂಯಾ ಗುಡಿಮನಿ, ಶಾಲೆ ಮುಖ್ಯೊಪಾಧ್ಯಯಿ ಕಿರಣಕುಮಾರಿ ಕೊಳಲ, ಶಾಂತಾ ಹಾವಜಿ, ರೇಖಾ ರಾಣೋಜಿ, ನಿಂಗಮ್ಮ ಪಾಟೀಲ, ಶೃತಿ ರಾಣೋಜಿ, ದೀಪಾ ತೇಲಕರ, ದೀಪಾ  ಮೊಟೆಬೆನ್ನುರ, ಗೀತಾ ಸಪ್ಪಣವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ