ಜಮಖಂಡಿ

ಸಾಧಕ ಕನ್ನಡ ಉಪನ್ಯಾಸಕ ಶಿಕ್ಷಕರಿಗೆ ಜೂ.25ರಂದು ಸನ್ಮಾನ ಸಮಾರಂಭ

ಸಾಧಕ ಕನ್ನಡ ಉಪನ್ಯಾಸಕ ಶಿಕ್ಷಕರಿಗೆ ಜೂ.25ರಂದು ಸನ್ಮಾನ ಸಮಾರಂಭ

ಜಮಖಂಡಿ: 23: ಎಸ್‌.ಎಸ್‌.ಎಲ್‌.ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಕನ್ನಡ ವಿಷಯಕ್ಕೆ ನೂರಕ್ಕೆ ನೂರರಷ್ಟು ಅಂಕ ಪಡೆದ ವಿದ್ಯಾರ್ಥಿಗಳ ಹಿಂದಿನ ಶಕ್ತಿಯಾಗಿ ಸೇವೆ ಸಲ್ಲಿಸುತ್ತಿರುವ ಕನ್ನಡ ಮಾಧ್ಯಮ ಸಾಧಕ ಕನ್ನಡ ಉಪನ್ಯಾಸಕ ಮತ್ತು ಶಿಕ್ಷಕರಿಗೆ ಜೂನ್ 25ರಂದು ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಡಾ. ಎಸ್‌.ಬಿ.ಮಟೋಳಿ ಹೇಳಿದರು. 

ನಗರದ ರಮಾನಿವಾಸ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರೇಶ್ವರ ಪ್ರಕಾಶನ ಹಾಗೂ ಸಾಹಿತ್ಯ ಸೌರಭ ವೇದಿಕೆ ಜಮಖಂಡಿ ಮತ್ತು ಬಸವೇಶ್ವರ ಶಿಕ್ಷಣ ಸಂಸ್ಥೆ ಕಡಪಟ್ಟಿ ಸಹಯೋಗದಲ್ಲಿ ಬಸವೇಶ್ವರ ಪದವಿಪೂರ್ವ ಕಾಲೇಜಿನ ಸಭಾಭವನದಲ್ಲಿ ಜೂ. 25ರಂದು ಬೆಳಿಗ್ಗೆ 9 ಗಂಟೆಗೆ ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ಸಾಧಕ ಉಪನ್ಯಾಸಕರು, ಶಿಕ್ಷಕರಿಗೆ ಅಭಿನಂದನಾ ಸಮಾರಂಭದಲ್ಲಿ ಅಂದಾಜು 75ಕ್ಕೂ ಹೆಚ್ಚು ಶಿಕ್ಷಕರಿಗೆ ಸನ್ಮಾನ ನಡೆಯಲಿದೆ ಎಂದರು. 

ಕೊಣ್ಣೂರ ಪಿ.ಯು ವಿಜ್ಞಾನ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಪ್ರೋ.ಬಿ.ಕೆ.ಕೊಣ್ಣೂರ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಹಾಲಿಂಗಪೂರ ಕೆ.ಎಲ್‌.ಇ. ಸಂಸ್ಥೆ ಪಿಯು ಕಾಲೇಜಿನ ಪ್ರೋ. ಶಿವಲಿಂಗ ಸಿದ್ಧಾಳ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.  ಬಸಣ್ಣವರ, ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಸಂತೋಷ ತಳಕೇರಿ, ನರಸಿಂಹ ಕಲ್ಲೋಳ್ಳಿ, ರವಿಂದ್ರ ತಳ್ಳಿ, ಷೋ. ರಾಜಶೇಖರ ಹೊಸಟ್ಟಿ, ಕಾರ್ಯಕ್ರಮ ಸಂಯೋಜಕ ಡಾ.ಎಸ್‌.ಬಿ.ಮಟೋಳಿ ಸಹಿತ ವಿಶೇಷ ಉಪನ್ಯಾಸ ಕಾರ್ಯಕ್ರಮಗಳು ನಡೆಯಲಿವೆ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಕಾನೂನು ಕಾಲೇಜಿನ ಪ್ರೋ.ರಾಜಶೇಖರ ಹೊಸಟ್ಟಿ ಇದ್ದರು. 


ಸುದ್ದಿ ಓದಿ