ರಾಣೆಬೆನ್ನೂರ

ಲಯನ್ಸ್‌ ಅಧ್ಯಕ್ಷ, ಪದಾಧಿಕಾರಿಗಳ ಪದಗ್ರಹಣ

ಲಯನ್ಸ್‌ ಅಧ್ಯಕ್ಷ, ಪದಾಧಿಕಾರಿಗಳ ಪದಗ್ರಹಣ

ರಾಣೀಬೆನ್ನೂರ 14: ಇಲ್ಲಿನ ಮೇಡ್ಲೇರಿ ರಸ್ತೆಯ ಲಯನ್ಸ್‌ ಶಾಲಾ ಸಭಾ ಭವನದಲ್ಲಿ ಲಯನ್ಸ್‌ ಸೇವಾ ಸಂಸ್ಥೆಯ 2021-22ನೇ ಸಾಲಿನ ನೂತನ ಅಧ್ಯಕ್ಷ ವೀರಣ್ಣ ತೊಗರ್ಸಿಮಳೇಮಠ ಮತ್ತವರ ತಂಡದವರ ಸೇವಾ ದೀಕ್ಷಾ ಸಮಾರಂಭವು ಇತ್ತೀಚೆಗೆ ಜರುಗಿತು. ಜಿಲ್ಲಾ 317-ಬಿ ಲಯನ್ಸ್‌ ಉಪರಾಜ್ಯಪಾಲೆ ಸುಗ್ಗಲಾ ಯಳಮಲಿ ಅವರು ಪ್ರತಿಜ್ಞಾ ವಿಧಿಬೋಧಿಸಿದರು. ಇದೇ ಸಂದರ್ಭದಲ್ಲಿ ಯಳಮಲಿ ಅವರಿಗೆ ವಾಣಿಜ್ಯ ನಗರದ ಜನತೆಯ ಪರವಾಗಿ ಲಯನ್ಸ್‌ ಸಂಸ್ಥೆಯವರು ಅಭಿನಂದಿಸಿ ಸನ್ಮಾನಿಸಿದರು.  

ಅಧ್ಯಕ್ಷ ಟಿ.ವೀರಣ್ಣ, ಎಂ.ಎಸ್‌.ಅರಕೇರಿ, ಜಯಣ್ಣ ಮುಚಡಿ, ಅಮೋಘ ಬದಾಮಿ, ಟಿ.ಸಿ.ಪಾಟೀಲ, ಬಸವರಾಜ ಬಡಿಗೇರ, ಬಸವರಾಜ ಪಾಟೀಲ, ಶಿವಪ್ಪ ಗುರಿಕಾರ, ಎನ್‌.ಎಸ್‌.ಕುಲಕರ್ಣಿ, ಅಶೋಕ ಗಂಗನಗೌಡ್ರ, ಶಿವಾನಂದ ಸಂಗಾಪುರ  ಸೇರಿದಂತೆ   ಮತ್ತಿತರರು ಉಪಸ್ಥಿತರಿದ್ದರು.  ಲೋಕದರ್ಶನ ವರದಿ 


ಸುದ್ದಿ ಓದಿ