ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಅಧಿಕಾರಿಗಳು ವಿಫಲ
ಬೈಲಹೊಂಗಲ 24: ಮತಕ್ಷೇತ್ರದ ಮರಕುಂಬಿ ಗ್ರಾಮ ಪಂಚಾಯತ ವ್ಯಾಪ್ತಿಯ ಜನತೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲು ಗ್ರಾಪಂ ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದಾರೆ ಎಂದು ನಾಗರೀಕರ ವಲಯದಲ್ಲಿ ಬಲವಾಗಿ ಕೇಳಿ ಬರುತ್ತಿದ್ದರು ಮೇಲಾಧಿಕಾರಿಗಳು ಸರಿಯಾಗಿ ಗಮನ ಹರಿಸದ ಕಾರಣ ನಾಗರಿಕರ ಕೆಂಗೆಣ್ಣಿಗೆ ಗುರಿಯಾಗುತ್ತಿದ್ದಾರೆ. ಮರಕುಂಬಿ ಗ್ರಾಮ ಪಂಚಾಯತ ವ್ಯಾಪ್ತಿಗೆ ಮರಕುಂಬಿ, ಹಿರೇಕೊಪ್ಪ, ಚಿಕ್ಕೂಪ್ಪ ಗ್ರಾಮಗಳು ಬರುತ್ತಿದ್ದು ಸುಮಾರು 7 ಸಾವಿರ ಜನಸಂಖ್ಯೆ ಹೊಂದಿದೆ, ಸರ್ಕಾರ ಒಂದು ಕಡೆ ಗ್ರಾಮೀಣ ಅಭಿವೃದ್ಧಿಗೋಸ್ಕರ ಕೊಟ್ಯಾಂತರ ರೂ ಅನುದಾನ ಬಿಡುಗಡೆ ಮಾಡುತ್ತಿದ್ದರು ಸಹ ಈ ಗ್ರಾಪಂ ಅಧಿಕಾರಿಗಳ ಬೇಜಾಬ್ದಾರಿತನದಿಂದ ಯಾವುದೇ ಅನುದಾನ ಸಮರ್ಪಕವಾಗಿ ಸದ್ಭಳಕೆವಾಗುತ್ತಿಲ್ಲವೆಂದು ಗ್ರಾಮಸ್ಥರು ದೂರುತ್ತಿದ್ದಾರೆ. ಕಳೆದ ಹತ್ತಾರು ವμರ್Àಗಳಿಂದ ಕಣ್ಣಿಗೆ ಕಾಣುವಂತಾ ಅಭಿವೃದ್ಧಿ ಕಾಮಗಾರಿ ಜನತೆ ಕಂಡಿಲ್ಲ. ಗ್ರಾಮದ ಜನತೆ ತಮ್ಮ ಸಮಸ್ಯೆಗಳ ಕುರಿತು ಗ್ರಾಪಂಗೆ ಅರ್ಜಿ ಸಲ್ಲಿಸಲು ಹೋದರೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಅರ್ಜಿ ಸ್ವೀಕರಿಸುವ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಅರ್ಜಿ ಕೊಟ್ಟರು ಅದಕ್ಕೆ ಪ್ರತ್ಯುತ್ತರ ಬರುವುದು ವಿರಳವಾಗಿದೆ. ಈಗಾದರೆ ಅಭಿವೃದ್ದಿ ಕಾಣುವುದು ಯಾವಾಗ ಎಂದು ಜನತೆ ಮಾತನಾಡಿಕೊಳ್ಳುವಂತಾಗಿದೆ. ಸುಮಾರು ವμರ್Àಗಳಿಂದ ಈ ಗ್ರಾಪಂ ವ್ಯಾಪ್ತಿಯಲ್ಲಿ ಯಾವದೇ ರೀತೀಯ ಅಭಿವೃದ್ಧಿ ಆಗುತ್ತಿಲ್ಲ ಎಂದು ಕಾರಣ ಹುಡುಕುವ ಮೇಲಾಧಿಕಾರಿಗಳ ಅವಶ್ಯಕತೆ ಇದೇ ಎಂದು ಜನರು ಪ್ರಶ್ನಿಸುವಂತಾಗಿದೆ. ಕೇಂದ್ರ ಸರ್ಕಾರವು ನೇರವಾಗಿ ಗ್ರಾಮೀಣ ಅಭಿವೃದ್ದಿಗಾಗಿ ಅನುದಾನ ಹಂಚಿಕೆ ಮಾಡುತ್ತಿದ್ದರು ಸಹ ಈ ಪಂಚಾಯತ ಏಕೆ ಬಳಕೆ ಮಾಡಿಕೊಳ್ಳುತ್ತಿಲ್ಲ ಯಾಕೆ ಎಂದು ಜನತೆಯನ್ನು ಯಕ್ಷ ಪ್ರಶ್ನಿಯಾಗಿ ಕಾಡುತ್ತಿದೆ. ಸರ್ಕಾರ ಯೋಜನೆ ಕುರಿತು ಪ್ರತಿ ತಿಂಗಳ ಸಾಮಾನ್ಯ ಸಭೆ ಕುರಿತು ಡಂಗುರ ಸಾರಿ ಸಬೆ ನಡೆಸಿ ಜನತೆಗೆ ಜಾಗೃತಿ ನೀಡಬೇಕು ಎಂದು ಕಡ್ಡಾಯವಿದ್ದರು ಈ ನಿಯಾಮಾವಳಿಗಳು ಕೇವಲ ಕಾಗದ ಪತ್ರದಲ್ಲಿ ಮಾತ್ರ ಉಳಿದಿವೆ.
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಗ್ರಾಮದ ಅಭಿವೃದ್ದಿಗೆ ಹಲವಾರು ಗ್ರಾಪಂಗಳು ಅನುದಾನವನ್ನು ಸಮರ್¥Àಕವಾಗಿ ಸದ್ಬಳಕೆ ಮಾಡಿಕೊಂಡು ಗಾಂಧೀಜಿ ಕಂಡು ಕನಸು ನನಸು ಮಾಡಲು ಮುಂದಾದಾರೆ ಈ ಗ್ರಾಪಂ ವ್ಯಾಪ್ತಿಯ ಗ್ರಾಮಗಳು ಕುಗ್ರಾಮವಾಗಿ ಸರ್ಕಾರದ ಯೋಜನೆಗಳನ್ನು ಜನತೆಯ ಮನೆಯ ಬಾಗಿಲಗೆ ಮುಟ್ಟಿಸಲು ಏಕೆ ಹಿಂದೇಟು ಹಾಕುತ್ತಿದೆ ? ಪ್ರತಿದಿನ ಸುಮಾರು ನೂರಾರು ಬಡ ಕೂಲಿ ಕಾರ್ಮಿಕರು ಕೆಲಸಕ್ಕೆ ಹಾಜರಾಗಿ ಕಾಲುವೆಗಳ, ಹಳ್ಳ, ಇಂಗು ಗುಂಡಿ, ಆನಿಗೋಳ ರಸ್ತೆ ಕಾಮಗಾರಿ, ಕೃಷಿ ಹೊಂಡ, ಹೊಲಕ್ಕೆ ಒಡ್ಡು ಹಾಕಿದ ಸಂಬಳ ನೀಡಿಲ್ಲ ಎನ್ನುವ ಮಾತುಗಳ ಸಹ ಕೇಳಿ ಬರುತ್ತಿವೆ. ಪ್ರತಿದಿನ ಒರ್ವ ನಿಗೆ ರೂ. 275 ನೀಡಬೇಕು. ಆದರೆ ಗಣಕಯಂತ್ರ ನಿರ್ವಾಹಕನಿಗೆ ಪ್ರತಿ ತಿಂಗಳ ವೇತನ ನೀಡದೇ ಮೂರು, ತಿಂಗಳಿಗೆ, ಆರು ತಿಂಗಳಿಗೆ ನೀಡುವುದರಿಂದ ಆತನ ಉಪಜೀವನ ಸಾಗಿಸುವುದೇ ಕμÀ್ಟವಾಗಿದೆ. ವೇತನ ಕುರಿತು ಪಿಡಿಓ ಅವರನ್ನು ವಿಚಾರಿಸಿದರೆ ಕೊಡುತ್ತೇನೆ ಎಂದು ಮಾತಿನ ಭರವಸೆ ನೀಡುತ್ತಾರೆ ವಿನಹ ಸಂಬಳ ಮಾತ್ರ ಕೇಳಬೇಡಿ ಎನ್ನುವಂತಾಗಿದೆ.
ವಿವಿಧ ವಸತಿ ಯೋಜನೆಗಳಲ್ಲಿ ಫಲಾನುಭವಿಗಳು ಮನೆ ನಿರ್ಮಿಸಿದ್ದು ಅವುಗಳಿಗೆ ಅನುದಾನ ಅರ್ಧಮರ್ದsÀ ಬಂದಿವೆ, ಕೆಲವು ಫಲಾನುಭವಿಗಳು ನಿತ್ಯ ಗ್ರಾಪಂ ಕಾರ್ಯಲಯಕ್ಕೆ ಎಡತಾಕಿ ಹಿಡಿಶಾಪ ಹಾಕುತ್ತಿದ್ದಾರೆ. ಕಂಪ್ಯೂಟರ ಉತಾರ, ಕ್ರೀಯಾ ಯೋಜನೆ, ಎನ್.ಎಂ.ಆರ್ ಸರಿಯಾಗಿ ನಿರ್ವಹಣೆ ಸಹ ಆಗುತ್ತಿಲ್ಲ. ಸಿಬ್ಬಂದಿಗಳ ಸಮರ್ಪಕವಾಗಿ ಕಾರ್ಯ ನಿವ ್ಹಿಸದೇ ಕಾರಣ ಜನತೆ ಸಂಕμÀ್ರಸ್ಥಿತಿ ಎದುರಿಸುವಂತಾಗಿದೆ. ಪಿಡಿಓ, ಕಾರ್ಯದಶಿ ್ಗಳು ಸರಿಯಾಗಿ ಬರುತ್ತಿಲ್ಲ ಎಂದು ಗ್ರಾಮದ ಜನತೆ ಬಲವಾಗಿ ಆರೋಪ ಕೇಳಿ ಬರುತ್ತಿದೆ. ಪಿಡಿಓ ಅವರಿಗೆ ಮೊಬೈಲನಲ್ಲಿ ಸಂಪರ್ಕಿಸಲು ಪ್ರಯತ್ನಿಸಿದರು ರಿಂಗ ಆದರು ರಿಸಿವ್ ಮಾಡುತ್ತಿಲ್ಲ.