ಹಳಿಯಾಳ ವಕೀಲರ ಮೇಲೆ ಹಲ್ಲೆ: ಮುಂಡಗೋಡದಲ್ಲಿ ಪ್ರತಿಭಟನೆ
ಲೋಕದರ್ಶನ ವರದಿ
ಮುಂಡಗೋಡ 15: ಹಳಿಯಾಳದಲ್ಲಿ ವಕೀಲರ ಸಂಘದ ಅಧ್ಯಕ್ಷರ ಮೇಲೆ ಹಲ್ಲೆ ನಡೆಸಿದವರನ್ನು ಕೂಡಲೆ ಬಂಧಿಸಬೇಕು ಹಾಗೂ ವಕೀಲರ ರಕ್ಷಣೆ ಕಾಯ್ದೆಯನ್ನು ಜಾರಿಗೊಳಿಸುವಂತೆ ವಕೀಲರ ಸಂಘದವರು ತಹಶೀಲ್ದಾರ ಮೂಲಕ ಮುಖ್ಯಮಂತಿಗೆ ಮನವಿ ಸಲ್ಲಿಸಿದರು.
ಹಳಿಯಾಳ ತಾಲೂಕಿನ ವಕೀಲರ ಸಂಘದ ಅಧ್ಯಕ್ಷರ ಮೇಲೆ ಆಗಿರುವ ಹಲ್ಲೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ, ಹಲ್ಲೆ ನಡೆಸಿದ ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಹಾಗೂ ವಕೀಲರ ಮೇಲೆ ಪದೇ ಪದೇ ಹಲ್ಲೆಗಳು ನಡೆಯುತ್ತಿದ್ದು, ಆದ್ದರಿಂದ ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತರಬೇಕು ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ವಕೀಲರ ಸಂಘಟನೆಗಳು ಉಗ್ರ ಹೋರಾಟ ಮಾಡುತ್ತೇವೆ ಎಂದು ಅವರು ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.
ಈ ವೇಳೆ ವಕೀಲರಾದ ಎಸ್.ಪಿ.ಸಮಸಗಿ, ಜಿ.ಎಸ್.ಕಾತೂರ, ಬಿ.ಎಸ್, ಪೂಜಾರ, ಅನ್ನಪೂರ್ಣ ಭಟ್, ನಟರಾಜ ಕಾತೂರ, ರಾಜಶೇಖರ ಹುಬ್ಬಳ್ಳಿ, ಹಂಚಿನಮನಿ, ನಿಂಬಾಯಿ, ಗೀತಾ ಮಂಜುನಾಥ ರಾಯ್ಕರ ಸೇರಿದಂತೆ ಇತರರಿದ್ದರು