ಅಥಣಿ

ಅಥಣಿ ಕಾಶಿಲಿಂಗ ದೇವರ ಜಾತ್ರಾ ಮಹೋತ್ಸವ

ಅಥಣಿ ಕಾಶಿಲಿಂಗ ದೇವರ ಜಾತ್ರಾ ಮಹೋತ್ಸವ

ಅಥಣಿ 17: ಗ್ರಾಮೀಣ ಕ್ರೀಡೆಗಳಿಗೆ ಅದರಲ್ಲೂ ಕುಸ್ತಿ ಆಟಕ್ಕೆ ಹೆಚ್ಚು ಆಸಕ್ತಿ ವಹಿಸುವ ಮೂಲಕ ಸಪ್ತಸಾಗರ ಗ್ರಾಮದ ಕಾಶಿ ವಿಶ್ವೇಶ್ವರ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಕುಸ್ತಿ ಆಟ ಆಯೋಜಿಸಿರುವ ಡಾ.ಪದ್ಮಜಿತ ನಾಡಗೌಡ ಅವರ ಕಾರ್ಯವನ್ನು ಗ್ರಾಮೀಣ ಭಾಗದ ಜನರು ಶ್ಲಾಘಿಸಿದರು.        

ವೃತ್ತಿಯಿಂದ ನೇತ್ರ ತಜ್ಞರಾಗಿರುವ ಡಾ.ಪದ್ಮಜಿತ ನಾಡಗೌಡ ಸಪ್ತಸಾಗರದಂತಹ ಗ್ರಾಮೀಣ ಭಾಗದವರಾಗಿದ್ದರೂ ಕೂಡ ಅಥಣಿ ಹಾಗೂ ರಬಕವಿ ಪಟ್ಟಣಗಳಲ್ಲಿ ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಮೂಲಕ ತಮ್ಮ ಸೇವೆ ಒದಗಿಸುತ್ತಲೇ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹಿಸುತ್ತಿದ್ದಾರೆ.

ಡಾ.ಪದ್ಮಜಿತ ನಾಡಗೌಡ ಮಾತನಾಡಿ ಪೌರಾಣಿಕ ಪ್ರಸಿದ್ಧವಾದ ಸಪ್ತಸಾಗರ ಗ್ರಾಮದಲ್ಲಿ ಪ್ರತಿ ವರ್ಷ ನಡೆಯುತ್ತಿರುವ ಕಾಶಿಲಿಂಗ ದೇವರ ಜಾತ್ರಾ ಮಹೋತ್ಸವದಲ್ಲಿ ಎಲ್ಲ ಧರ್ಮ, ಜಾತಿಯ ಜನ ಸಾಮರಸ್ಯದಿಂದ ಪಾಲ್ಗೊಳ್ಳುವ ಈ ಜಾತ್ರೆಯಲ್ಲಿ ಕುಸ್ತಿ ಪಂದ್ಯಾವಳಿಗಳನ್ನು ಆಯೋಜಿಸುವ ಮೂಲಕ ದೇವರ ಸೇವೆ ಮತ್ತು ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹಿಸಿರುವೆ ಎಂದ ಅವರು ನಮ್ಮ ಸಪ್ತಸಾಗರ ಗ್ರಾಮದ ಕುಸ್ರಿ ಪಟು ರಾಜ್ಯ ಮಟ್ಟದಲ್ಲಿ ಹೆಸರು ವಾಸಿಯಾಗಿರುವುದು ನಮ್ಮ ಹೆಮ್ಮ ಮತ್ತು ಆ ಕಸ್ತಿ ಪಟು ನಮ್ಮ ಭಾಗದ ಯುವಕರಿಗೆ ಆದರ್ಶ ಎಂದರು.       

ಗ್ರಾಮದ ಮುಖಂಡ ಪರಶುರಾಮ ಕೋಳೆಕರ ಮಾತನಾಡಿ, ನೇತ್ರ ತಜ್ಞ ಡಾ.ಪದ್ಮಜಿತ ನಾಡಗೌಡ ಇವರು ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ತಮ್ಮ ಸ್ವಂತ ವೆಚ್ಚದಲ್ಲಿ ಕುಸ್ತಿ ಆಯೋಜಿಸಿದ್ದಾರಲ್ಲದೆ ಬಡ ನಿರ್ಗತಿಕರಿಗೆ ಉಚಿತವಾಗಿ ವೈದ್ಯಕೀಯ ಸೇವೆ ಕಲ್ಪಿಸುವ ಮೂಲಕ ಸದಾ ಸೇವೆಗೆ ಸನ್ನದ್ಧರಾಗಿರುತ್ತಾರೆ ಎಂದ ಅವರು ಡಾ.ಪದ್ಮಜಿತ ನಾಡಗೌಡ ನಮ್ನ ಗ್ರಾಮದ ಹೆಮ್ಮೆಯ ವ್ಯಕ್ತಿ ಎಂದರು.  

ಜಾತ್ರಾ ಮಹೋತ್ಸವದಲ್ಲಿ ಕಬಡ್ಡಿ ಪಂದ್ಯಾವಳಿ,  ರಥೋತ್ಸವ, ಪಲ್ಲಕ್ಕಿ ಉತ್ಸವ  ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ, ಭೂ ನ್ಯಾಯ ಮಂಡಳಿ ಸದಸ್ಯ ಸಿದ್ಧಾರ್ಥ ಸಿಂಗೆ ಆಗಮಿಸಿ ಕುಸ್ತಿ ಪಟುಗಳನ್ನು ಪ್ರೋತ್ಸಾಹಿಸಿದರು.  

 ಜಾತ್ರಾ ಮಹೋತ್ಸವ ಸಮೀತಿಯ ಭಗವಂತ ಸವದಿ, ಭುಜಪ್ಪಾ ದುರದುಂಡಿ, ಅಣ್ಣಪ್ಪಾ ಯಂಗರಿ, ಅರುಣ ಅವಟಿ, ಚಂದು ಪರೀಟ್, ಮಹಾವೀರ ಬಿಲಕಲ್, ಬಸಗೌಡ ಚುನಾರ, ಅಣ್ಣಪ್ಪಾ ಕುಂಬಾರ, ಸದಾಶಿವ ಹನಗಂಡಿ, ತವನಪ್ಪಾ ಸಂಕ್ರಟ್ಟಿ, ಗಂಗಪ್ಪಾ ಮೋರೆ ನೇತೃತ್ವ ಮತ್ತು ಸಾನಿಧ್ಯವನ್ನು ಕೃಷ್ಣಾ ಕಿತ್ತೂರ ಗ್ರಾಮದ  ಗುರುದೇವ ಆಶ್ರಮದ ಬಸವೇಶ್ವರ ಮಹಾಸ್ವಾಮೀಜಿ ವಹಿಸಿದ್ದರು. 

ಸಪ್ತಸಾಗರ ಗ್ರಾಮದ ಗಣ್ಯರಾದ  ಅಪ್ಪಾಸಾಹೇಬ ನಾಡಗೌಡ, ಸಂಜಯ ನಾಡಗೌಡ, ಆರ್‌.ಎ.ಪಾಟೀಲ, ಗ್ರಾ.ಪಂ ಅಧ್ಯಕ್ಷ ಬಸವರಾಜ ಹನಗಂಡಿ, ನಾರಾಯಣ ಘೋರೆ​‍್ಡ, ಪರಮಾನಂದ ತೇಲಿ, ರಾಮು ಕುಂಬಾರ, ಹಾರುನ ಮುಲ್ಲಾ, ಪರಶುರಾಮ ಕೋಳೆಕರ, ಜಿನ್ನಪ್ಪಾ ಹಳ್ಳೂರ, ಬಾಳೇಶ ಹೊಸುರ, ಪಾರೀಸ್ ಬೊಮ್ಮಣ್ಣವರ,  ರಾಮು ಗಸ್ತಿ, ಅಪ್ಪಾಸಾಹೇಬ ಕಾಂಬಳೆ, ರಮೇಶ ಕಾಂಬಳೆ, ಮಹೇಂದ್ರ ಸಲಾರೆ, ಯಲ್ಲಪ್ಪ ಕಾಂಬಳೆ, ಪ್ರವೀಣ ನಾಡಗೌಡ, ಭುಜಪ್ಪಾ ಹಳ್ಳೂರ, ಭೀಮಾ ಘೋರೆ​‍್ಡ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಗ್ರಾಮೀಣ ಕ್ರೀಡಾಭಿಮಾನಿಗಳು ಪಾಲ್ಗೊಂಡು ಕುಸ್ತಿ ಪಟುಗಳನ್ನು ಪ್ರೋತ್ಸಾಹಿಸಿದರು. 


ಸುದ್ದಿ ಓದಿ