ರಾಣೆಬೆನ್ನೂರ

ಸಮಾಜದಲ್ಲಿ ಸಮಾನತೆಗೆ ಸಂಘ ಸಂಸ್ಥೆಗಳ ಸೇವೆ ಪ್ರಮುಖ: ಪೂಜಾರ

ಸಮಾಜದಲ್ಲಿ ಸಮಾನತೆಗೆ ಸಂಘ ಸಂಸ್ಥೆಗಳ ಸೇವೆ ಪ್ರಮುಖ: ಪೂಜಾರ

ರಾಣೇಬೆನ್ನೂರು 09: ಸಮಾಜದಲ್ಲಿ ಸಮಾನತೆ ಕಾಣಬೇಕಾದರೆ ಪ್ರತಿಯೊಂದು ಸಂಘ ಸಂಸ್ಥೆಗಳು ತಮ್ಮ ನಿಯೋಜಿತ ಯೋಜನೆಗಳನ್ನು ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನದ ಮೂಲಕ ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.  

ಅವರು ಇಲ್ಲಿನ ಮಾರುತಿ ನಗರದ ಕಾಕಿ ಜನ ಸೇವಾ ಟ್ರಸ್ಟ್‌ ಸಭಾಭವನದಲ್ಲಿ 2022ನೇ ಸಾಲಿನ ನೂತನ ಅಧ್ಯಕ್ಷ ವೆಂಕಟೇಶ ಕಾಕಿ ಮತ್ತು ಅವರ ಪದಾಧಿಕಾರಿಗಳ ತಂಡದ ಸೇವಾ ದೀಕ್ಷಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.  

ಸಂಘ ಸಂಸ್ಥೆಗಳು ಪ್ರಸ್ತುತ ದಿನಮಾನಗಳಲ್ಲಿ ಸರ್ಕಾರದ ಏಲ್ಲಾ ಕಾರ್ಯಯೋಜನೆಗಳು ಪರಿಪೂರ್ಣವಾಗಿ ಜಾರಿಗೆ ತರುವಲ್ಲಿ ಶ್ರಮಿಸುತ್ತಿವೆ. ಸಾಮಾಜಿಕ ಸೇವೆ ಮೂಲ ಉದ್ದೇಶವನ್ನು ಜಾರಿಗೆ ತರುವಲ್ಲಿ ನಿರಂತರ ಪ್ರಯತ್ನಿಸುತ್ತಿರುವುದು ಅತ್ಯಂತ ಶ್ಲ್ಯಾಘನೀಯ ಕಾರ್ಯವಾಗಿದೆ ಎಂದ ಪೂಜಾರ ಅವರು ಕೋವಿಡ್ ಸಂದರ್ಭದಲ್ಲಿ ಜೆಸಿ ಸಂಸ್ಥೆ ತಗೆದುಕೊಂಡ ನಿಲುವು ಮತ್ತು ಅವರ ಸೇವಾ ಕಾರ್ಯವು ಸಾರ್ವಜನಿಕರು ಮೆಚ್ಚುವಂತಾಗಿತ್ತು ಎಂದರು.  

2021 ನೇ ಸಾಲಿನ ಅಧ್ಯಕ್ಷ ಜೆಸಿ ಆರ್‌.ವಿ.ಪಾಟೀಲ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ, ನೂತನ ಅಧ್ಯಕ್ಷ ಜೆ.ಸಿ. ವೆಂಕಟೇಶ್ ಕಾಕಿ ಅವರ ತಂಡಕ್ಕೆ ಅಧಿಕಾರವನ್ನು ಹಸ್ತಾಂತರಿಸಿದರು.  ಇದೇ ಸಂದರ್ಭದಲ್ಲಿ ಭಾರತ ದೇಶದ ರಕ್ಷಣೆಯಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡಿರುವ ದೇಶದ ಯೋಧರಿಗೆ ತಮ್ಮ ಅಭಿನಂದನೆಗಳನ್ನು ಸಲ್ಲಿಸಿ, ಸೇವಾ ಕಾರ್ಯವನ್ನು ಶ್ಲ್ಯಾಘಿಸಿದರು. ವಲಯ 24ರ ಅಧ್ಯಕ್ಷೆ ಜೆಸಿ ದೀಪಿಕಾ ಬಿದರಿ ಅವರು ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರೆ, ವಲಯ ಉಪಾಧ್ಯಕ್ಷ ಗೌರಿಶ್ ಭಾರ್ಗವ್ ಅವರು ಕಾಕಿ ತಂಡದವರಿಗೆ ಸೇವಾ ದೀಕ್ಷೆ ನೀಡಿದರು.  

ವೇದಿಕೆಯಲ್ಲಿ ಡಾ. ಎಸ್‌.ಎಸ್‌.ಹಿತ್ತಲಮನಿ, ಪ್ರಕಾಶ ಗಚ್ಚಿನಮಠ, ಜಿ.ಡಿ.ಬಗಾಡಿ, ವಿ.ಎಸ್‌.ಹಿರೇಮಠ, ನಾರಾಯಣ ಬಿಸ್ಲಳ್ಳಿ, ಚೇತನಾ ಪಾಟೀಲ, ಲಕ್ಷ್ಮೀ ಕಾಕಿ, ಶ್ರೇಯಾ ಪಾಟೀಲ ತೇಜಶ್ವಿನಿ ಕಾಕಿ, ಪ್ರಕಾಶ ಬನ್ನಿಕೋಡ, ಶಿದ್ದಣ್ಣ ಅಥಡ್ಕರ್, ಲಕ್ಷ್ಮೀ ಅಡಕಿ, ಶಿವಯೋಗಿ ಗೌಳಿ, ಪ್ರಭು ಏಳೆಹೊಳೆ, ಪ್ರವೀಣ ಸುರಹೊನ್ನಿ, ಪ್ರಭುಲಿಂಗಪ್ಪ ಹಲಗೇರಿ, ಎಂ.ಎಂ.ಪಾಟೀಲ, ಮಂಜುನಾಥ್ ಗೋಂದ್ಕರ್, ಪುಷ್ಪಾ ಬದಾಮಿ, ಶ್ರೀನಿವಾಸ್ ಕಾಕಿ, ಡಾ. ಗಣೇಶ ದೇವಗಿರಿಮಠ, ಲಕ್ಷ್ಮಣ್ ಕಣಕಿ, ಇಸ್ಮಾಯಿಲ್ ಐರಣಿ, ಅಶೋಕ ದುರ್ಗದಶೀಮಿ, ಸರೋಜಾ ಕುಬಸದ, ಚಂದ್ರು ದೇವಾಂಗದ, ಪ್ರಕಾಶ ತಿಮ್ಲಾಪೂರ, ಬಸವರಾಜ ಕುಸನೂರು, ಪ್ರಕಾಶ ಹಿರೇಕೆರೂರು ಸೇರಿದಂತೆ ಮತ್ತಿತರ ಗಣ್ಯರು, ಪದಾಧಿಕಾರಿಗಳು, ನೂತನವಾಗಿ ಸಂಸ್ಥೆಗೆ ಸೇರೆ​‍್ಡಯಾದ ಚಂದನ್ ಹಿತ್ತಲಮನಿ, ಆಕಾಶ ಭಸ್ಮಾಂಗಿಮಠ, ಯುವರಾಜ ಭಾರಟಕ್ಕೆ, ವೆಂಕಟೇಶ ಮಲಕನಹಳ್ಳಿ ಮತ್ತಿತರನ್ನು ಪುಷ್ಮಗುಚ್ಚ ನೀಡಿ ಸ್ವಾಗತಿಸಲಾಯಿತು.  

ನೂತನ ಅಧ್ಯಕ್ಷ ವೆಂಕಟೇಶ್ ಕಾಕಿ ಅವರು ಮಾತನಾಡಿ, ತಮ್ಮ ಸಂಸ್ಥೆ ವ್ಯಕ್ತಿತ್ವ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ಮತ್ತು ಕ್ರಿಯಾಯೋಜನೆ ರೂಪಿಸಿದ್ದು, ಅದರ ಜೊತೆಗೆ ತಾವು ತಮ್ಮ ಅಧಿಕಾರದ ಅವಧಿಯಲ್ಲಿ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಾಮೂದಾಯಕ ಸೇವಾ ಯೋಜನೆಗಳ ಮೂಲಕ ಸೇವೆ ಸಲ್ಲಿಸುವ ಉದ್ದೇಶ ಹೊಂದಿರುವುದಾಗಿ ಘೋಷಿಸಿದರು. 


ಸುದ್ದಿ ಓದಿ