ಚಿಕ್ಕೋಡಿ

ಜಮಾದಾರ ಮೇಲೆ ಹಲ್ಲೆ:ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮನವಿ

ಜಮಾದಾರ ಮೇಲೆ ಹಲ್ಲೆ:ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮನವಿ

ಚಿಕ್ಕೋಡಿ 14: ಚಿಕ್ಕೋಡಿ ಗ್ರೇಡ-2 ತಹಶೀಲ್ದಾರ ಮೇಲೆ ಹಲ್ಲೆ ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕಂದಾಯ ನೌಕರರು ಉಪವಿಭಾಗಾಧಿಕಾರಿ ಯುಕೇಶಕುಮಾರ ಅವರಿಗೆ ಬುಧವಾರ ಮನವಿ ಸಲ್ಲಿಸಿದರು. 

ಕಳೆದ ಜುಲೈ 13 ರಂದು ಪಿಂಚಣಿ ವಿಷಯವಾಗಿ ಅಂಕಲಿ ಗ್ರಾಮದ ಸರೋಜನಿ ಕಿಳ್ಳಿಕೇತ ಮಕ್ಕಳು ಸೊಸೆಯಂದಿರು ಹಾಗೂ ಅವರೊಂದಿಗೆ ಬಂದಂತಹ ನಾಲ್ಕೈದು ಜನ ಕೂಡಿಕೊಂಡು ತಹಶೀಲ್ದಾರ ಕಚೇರಿಗೆ ನುಗ್ಗಿ ಕಾರ್ಯನಿರ್ವಹಿಸುತ್ತಿರುವ ಗ್ರೇಡ-2 ತಹಶೀಲ್ದಾರ ಡಿ.ಎಸ್‌.ಜಮಾದಾರ ಅವರ ಮೇಲೆ ತೀವ್ರವಾಗಿ ಹಲ್ಲೆ ಮಾಡಿರುತ್ತಾರೆ. ಇದರಿಂದ ಸರಕಾರಿ ನೌಕರರಿಗೆ ರಕ್ಷಣೆ ಇಲ್ಲದಂತಾಗಿದೆ. ಸೇವೆಯಲ್ಲಿ ಇದ್ದಾಗ ಏಕಾಏಕಿ ಬಂದು ಹಲ್ಲೆ ಮಾಡುವುದರಿಂದ ನೌಕರರಿಗೆ ತೀವ್ರ ಭಯ ಹುಟ್ಟಿಸಿದೆ. ಸೂಕ್ತ ರಕ್ಷಣೆ ಕೊಡಬೇಕೆಂದು ಕಂದಾಯ ನೌಕರರು ಒತ್ತಾಯಿಸಿದರು. 

ಪಿಂಚಣಿ ವಿಷಯಕ್ಕೆ ಜಮಾದಾರ ಅವರು ಮಹಿಳೆ ಜೊತೆ ಅಸಭ್ಯವಾಗಿ ವರ್ತನೆ ಮಾಡಿರುವ ಆರೋಪ ಕೇಳಿ ಬಂದಿದೆ. ಅದನ್ನು ಮೇಲಾಧಿಕಾರಿಗಳು ಸೂಕ್ತ ತನಿಖೆ ನಡೆಸುತ್ತಾರೆಂದು ತಹಶೀಲ್ದಾರ ಪ್ರವೀಣ ಜೈನ ಅವರು ಭರವಸೆ ನೀಡಿ ಕಳಿಸಿದ್ದರು. ಆದರೆ ಮಧ್ಯಾಹ್ನದ ಬಳಿಕ ಕುಟುಂಬ ಸಮೇತ ಆಗಮೀಸಿ ಗ್ರೇಡ-2 ತಹಶೀಲ್ದಾರ ಮೇಲೆ ಹಲ್ಲೆ ಮಾಡಿರುವ ಘಟನೆ ಖಂಡನೀಯವಾಗಿದೆ. ಇಡೀ ರಾಜ್ಯದಲ್ಲಿ ದೊಡ್ಡ ತಾಲೂಕು ಚಿಕ್ಕೋಡಿ ಆಗಿದ್ದರಿಂದ ಇಲ್ಲಿಯ ನೌಕರರಿಗೆ ರಕ್ಷಣೆ ನೀಡಬೇಕೆಂದು ಕಂದಾಯ ಇಲಾಖೆ ಅಧಿಕಾರಿಗಳು ಉಪವಿಬಾಗಾಧಿಕಾರಿ ಹಾಗೂ ತಹಶೀಲ್ದಾರ ಪ್ರವೀಣ ಜೈನ್ ಬಳಿ ಮನವಿ ಮಾಡಿದರು. 


ಸುದ್ದಿ ಓದಿ