ಶಿಗ್ಗಾವ್

ಸಚಿವರು, ಶಾಸಕರ ಆಶ್ವಾಸನೆಗೆ ಮರಳಾಗ ಬೇಡಿರಿ : ವರುಣಗೌಡ ಪಾಟೀಲ

ಸಚಿವರು, ಶಾಸಕರ ಆಶ್ವಾಸನೆಗೆ ಮರಳಾಗ ಬೇಡಿರಿ : ವರುಣಗೌಡ ಪಾಟೀಲ

ಶಿಗ್ಗಾವಿ 09 :  ಉಪ ಚುನಾವಣೆ ಇರುವ ಕಾರಣ ಇಡಿ ಕರ್ನಾಟಕ ಸರಕಾರದ ಸಚಿವ ಸಂಪುಟ ಸದಸ್ಯರು, ಶಾಸಕರು, ಸಮಾಜದ ಪ್ರಮುಖರು ಎಲ್ಲರೂ ಬರುತ್ತಾರೆ ಹೋಗುತ್ತಾರೆ ಅನೇಕ ಬಗೆಯ ಆಶ್ವಾಸನೆ ಕೊಡುತ್ತಾರೆ ಅದಕ್ಕೆ ಮರಳಾಗ ಬೇಡಿರಿ ಎಂದು ಕ್ಷೇತ್ರದ ಜನತೆಗೆ ಹಸಿರು ಸೇನಾ ಕರ್ನಾಟಕ ಜಿಲ್ಲಾ ಅಧ್ಯಕ್ಷ ವರುಣಗೌಡ ಪಾಟೀಲ ಹೇಳಿದರು. 

ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೇಸ ಎಲ್ಲ ಸಚಿವರು ಕ್ಷೇತ್ರದ ಮನೆ ಮನೆಗೆ ತೆರಳಿ ಕಾಂಗ್ರೇಸ ಅಭ್ಯರ್ಥಿಪರ ಮತಯಾಚಿಸುತ್ತಿದ್ದಾರೆ ಆದರೆ ನವ್ಹಂಬರ 13 ರ ನಂತರ ಯಾರು ಬರುವುದಿಲ್ಲ, ಸಮಸ್ಯೆಗಳು ಸಮಸ್ಯೆಗಳಾಗಿ ಉಳಿಯುತ್ತವೆ ಆದ್ದರಿಂದ ಕ್ಷೇತ್ರದ ಜನತೆ ಬಣ್ಣದ ಮಾತಿಗೆ ಮರಳಾಗದೇ ನಿಮ್ಮ ಮತವನ್ನು ಸ್ಥಳಿಯ ಅಭ್ಯರ್ಥಿ ಭರತ ಬೊಮ್ಮಾಯಿಯವರಿಗೆ ನೀಡಬೇಕು ಎಂದು ಮನವಿ ಮಾಡಿದರು. 

ಭರತ ಬೊಮ್ಮಾಯಿಯವರಿಗೆ ಯಾಕೆ ಮತ ನೀಡಬೇಕೆಂದರೆ ಅವರು ಈಗಾಗಲೇ ಅನೇಕ ಪ್ಯಾಕ್ಟರಿಗಳ ಜೊತೆ ಪಾಲುದಾರರಿರುವ ಕಾರಣ ಅವರ ಮುಂದಿನ ದೂರದೃಷ್ಟಿ ಕ್ಷೇತ್ರದಲ್ಲಿ ಯುವಕರು ಮತ್ತು ಮಹಿಳೆಯರಿಗೋಸ್ಕರ ಟೆಕ್ಸಟೈಲ್ ಪ್ಯಾಕ್ಟರಿ ನಿರ್ಮಾಣ ಮಾಡಿ ಆ ಇಡಿ ಕುಟುಂಬ ಸ್ವಾವಲಂಬಿಯಾಗಿ ಇತರರಂತೆ ಬದುಕಬೇಕು ಎಂಬ ಭರತವರ ಆಸೆಯಾಗಿದೆ ಎಂದರು. 

ಈ ಸಂದರ್ಭದಲ್ಲಿ ವಿನಯ ಹೊನ್ನಣ್ಣವರ, ನಾಗರಾಜ ಕ್ಯಾಬಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ