ಅಧ್ಯಕ್ಷೆಯಾಗಿ ಅಶ್ವಿನಿ, ಉಪಾಧ್ಯಕ್ಷಯಾಗಿ ಆನಂದಬಾಬುಗೌಡ ಆಯ್ಕೆ
ತಾಳಿಕೋಟೆ03: ತಾಲೂಕಿನ ಕೊಡಗಾನೂರ ಗ್ರಾಮ ಪಂಚಾಯತ ನೂತನ ಅಧ್ಯಕ್ಷೆಯಾಗಿ ಜೆಡಿಎಸ್ ಬೆಂಬಲಿತ ಅಶ್ವಿನಿ ಸಾಹೇಬಗೌಡ ಬಿರಾದಾರ(ಗಡಿಸೋಮನಾಳ) ಹಾಗೂ ಉಪಾಧ್ಯಕ್ಷರಾಗಿ ಆನಂದಬಾಬುಗೌಡ ರಾಮನಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾದರು.
ಗುರವಾರ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅಶ್ವಿನಿ ಸಾಹೇಬಗೌಡ ಬಿರಾದಾರ ಮಾತ್ರ ನಾಮಪತ್ರ ಸಲ್ಲಿಸಿದರು. ಆದರೆ ಉಪಾಧ್ಯಕ್ಷ ಸ್ಥಾನಕ್ಕೆ ಆನಂದಬಾಬುಗೌಡ ರಾಮನಗೌಡ ಪಾಟೀಲ, ಬಸನಗೌಡ ಮಲ್ಲಿಕಾರ್ಜುನ ಬಿರಾದಾರ, ಹಣಮಂತ ಚಂದ್ರಾಮ ಕೊಡಗಾನೂರ ನಾಮಪತ್ರ ಸಲ್ಲಿಸಿದರು.
ನಂತರ ಎಲ್ಲ ಸದಸ್ಯರ ಸಂಧಾನದ ಮೇರೆಗೆ ಬಸನಗೌಡ ಬಿರಾದಾರ, ಹಣಮಂತ ಕೊಡಗಾನೂರ ಅವರು ನಾಮಪತ್ರ ವಾಪಸ್ಸು ಪಡೆದಿದ್ದರಿಂದ, ಅಧ್ಯಕ್ಷರಾಗಿ ಅಶ್ವಿನಿ ಸಾಹೇಬಗೌಡ ಬಿರಾದಾರ(ಗಡಿಸೋಮನಾಳ) ಹಾಗೂ ಉಪಾಧ್ಯಕ್ಷರಾಗಿ ಆನಂದಬಾಬುಗೌಡ ರಾಮನಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾದರು.
ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಬಸನಗೌಡ ವಣಕ್ಯಾಳ, ಮುಖಂಡ ಮಡುಸಾಹುಕಾರ ಬಿರಾದಾರ, ಬಸನಗೌಡ ಕಿರಶ್ಯಾಳ, ಭೀಮನಗೌಡ ತಂಗಡಗಿ, ಮಲ್ಲನಗೌಡ ಇಬ್ರಾಹಿಂಪೂರ, ಪ್ರಭುಗೌಡ ಲಕ್ಕುಂಡಿ, ರವಿ ದೇಶಮುಖ, ಶಾಂತಗೌಡ ಇಂಬ್ರಾಹಿಂಪೂರ, ಕುಮಾರಗೌಡ ಪಾಟೀಲ, ವಿರೇಶ ಪಾಟೀಲ, ಯಂಕಪ್ಪ ಸೋಮನಾಳ, ಸಿದ್ದನಗೌಡ ಬಿರಾದಾರ ಸೇರಿದಂತೆ ಇತರರು ಇದ್ದರು. ಜೆಡಿಎಸ್ ಅಭಿಮಾನಿಗಳು ಹಾಗೂ ಬೆಂಬಲಿಗರು ಪಟಾಕ್ಷಿ ಸಿಡಿಸಿ ಸಹಿ ಹಂಚಿ ಸಂಭ್ರಮಿಸಿದರು, ಪಿಎಸೈ ರಾಮನಗೌಡ ಸಂಕನಾಳ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಸ್ತ ಏರ್ಪಡಿಸಲಾಗಿತ್ತು. ಚುನಾವಣಾಧಿಕಾರಿಯಾಗಿ ತೋಟಗಾರಿಕೆ ಇಲಾಖೆಯ ಸಹಾಯಕ ನಿದರ್ೇಶ ಸುಭಾಶ್ಚಂದ್ರ ಟಾಕಳೆ, ಸಹಾಯಕರಾಗಿ ಪಿಡಿಓ ಅನೀಲ ಕಿರಣಗಿ, ಕಾರ್ಯದರ್ಶಿ ಹಣಮಗೌಡ ಚೌದ್ರಿ ಸೇರಿದಂತೆ ಇತರರು ಇದ್ದರು.