ಸಿಂಧಗಿ

ಅಶೋಕ ಮನಗೂಳಿ ಶಾಸಕರಾಗಿ ವರ್ಷ: ವಿಜಯೋತ್ಸವ

ಅಶೋಕ ಮನಗೂಳಿ ಶಾಸಕರಾಗಿ ವರ್ಷ: ವಿಜಯೋತ್ಸವ

ಸಿಂದಗಿ 16: ಸಿಂದಗಿ ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿ ಅವರು ಶಾಸಕರಾಗಿ ಒಂದು ವರ್ಷ ಪೂರೈಸಿದ ನಿಮಿತ್ಯವಾಗಿ ಗೋಲಗೇರಿ ಹಾಗೂ ಸಾಸಾಬಾಳ ಗ್ರಾಮಗಳ ಕಾಂಗ್ರೆಸ್ ಕಾರ್ಯಕರ್ತರು ಶಾಸಕರಿಗೆ ಸಿಹಿ ತಿನಿಸಿ ಸಂಭ್ರಮಾಚರಣೆ ಆಚರಿಸಿದರು. 

ಶಾಸಕ ಅಶೋಕ ಮನಗೂಳಿ ಅವರು ಮಾತನಾಡಿ ಸಿಂದಗಿ ಮತಕ್ಷೇತ್ರದ ಸವಾಂರ್ಗೀಣ ಅಭಿವೃದ್ಧಿಯೇ ನನ್ನ ಗುರಿಯಾಗಿದ್ದು, ಅದನ್ನು ಈಡೇರಿಸಿಯೇ ತಿರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಬಸವರಾಜ ಮಾರಲಭಾವಿ, ವಕೀಲರಾದ ದಾನಪ್ಪಗೌಡ ಚನಗೊಂಡ, ಸಿಂದಗಿ ಭೂ ನ್ಯಾಯ ಮಂಡಳಿ ಸದಸ್ಯ ಮುದಿಗೌಡ ಬಿರಾದಾರ, ಕಾಂಗ್ರೆಸ್ ಪಕ್ಷದ ಮುಖಂಡರಾದ ಮಡಿವಾಳ ನಾಯ್ಕೋಡಿ, ಮಂಜುನಾಥ ಯಂಕಂಚಿ, ನೀಲಕಂಠ ಚಲವಾದಿ, ನಬೀಸಾಬ ಕೋರಬು, ಬಾಬು ಜಾಲವಾದಿ, ಖಾದರ್‌.ಹಳಿಮನಿ, ಲಕ್ಷ್ಮಣ ಕಲಾಲ, ರಾಜು ಹೊಳಕುಂದಿ, ಸಿದ್ದಣ್ಣ ಬಿರಾದಾರ, ಧರ್ಮು ರಾಠೋಡ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ