ರಾಣೆಬೆನ್ನೂರ

ಮಾನವ ಧಾನವನಾಗಿ ಮಾನಸಿಕ ಶಾಂತಿ ನೆಮ್ಮದಿ ಹೊಂದಬೇಕು: ಕಾಗಿನೆಲೆ ಶ್ರೀ

ಮಾನವ ಧಾನವನಾಗಿ ಮಾನಸಿಕ ಶಾಂತಿ ನೆಮ್ಮದಿ ಹೊಂದಬೇಕು: ಕಾಗಿನೆಲೆ ಶ್ರೀ

ಲೋಕದರ್ಶನ ವರದಿ 


ರಾಣಿಬೆನ್ನೂರ 14: ಮನುಷ್ಯ ಇರುವುದರಲ್ಲೇ ತೃಪ್ತಿಕರ ಜೀವನ ಸಾಗಿಸಬೇಕು. ದುಡಿಮೆಯ ಅಲ್ಪ ಪಾಲು ಸಾಮಾಜಿಕ, ಧಾರ್ಮಿಕ ಕಾರ್ಯಗಳಿಗೆ ವಿನಿಯೋಗ ಮಾಡುವುದರಿಂದ ನೆಮ್ಮದಿ ದೊರೆಯಲಿದೆ ಎಂದು ಕಾಗಿನೆಲೆ ಕನಕ ಗುರು ಪೀಠದ ಜಗದ್ಗುರು ನಿರಂಜನಾನಂದ ಪುರಿ ಮಹಾಸ್ವಾಮಿಗಳು ಹೇಳಿದರು.  

  ಅವರು  ತಾಲೂಕಿನ ಕವಲೆತ್ತು ಗ್ರಾಮದ ಚೋಳಮರಡಿಯ ಬೀರಲಿಂಗೇಶ್ವರ ಸ್ವಾಮಿ ಸೇವಾ ಸಮಿತಿ ಹಾಗೂ ಗ್ರಾಮಸ್ಥರ ವತಿಯಿಂದ ಹಮ್ಮಿಕೊಂಡಿದ್ದ ನೂತನ ಭಕ್ತಿಯ ಕುಟೀರ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.  

   ಹಣ, ಅಧಿಕಾರ, ಆಯಸ್ಸು ಎಲ್ಲವೂ ಕ್ಷಣಿಕ, ನಾವು ಮಾಡಿದ ದಾನ, ಧರ್ಮ, ಮಾನಸಿಕ ನೆಮ್ಮದಿ, ಸಂತೋಷ ಶಾಶ್ವತ. ಆ ಪರಮಾತ್ಮನ ಕರೆ ಬಂದಾಗ ನಾವೇಲ್ಲರೂ ಈ ಭೂಮಿ ಬಿಟ್ಟು ಸಾಗಬೇಕು. ಇರುವಷ್ಟು ದಿನ ಜನರಿಗೆ ಸಹಾಯ ಮಾಡಿ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದರು.  

     ಕುಟೀರ ನಿರ್ಮಾಣಕ್ಕೆ ಜಾಗ ನೀಡಿದ ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದ ನಿಂಗಪ್ಪ ನಿಂಬಣ್ಣನವರ, ಲೆಕ್ಕಮ್ಮ ಅವರನ್ನು ಇದೇ ಸಂಧರ್ಭದಲ್ಲಿ ಶ್ರೀಗಳು ಸನ್ಮಾನಿಸಿ ಗೌರವಿಸಿದರು. ಚೋಳಮರಡಿಯ ಶ್ರೀ ಬೀರಲಿಂಗೇಶ್ವರ ಸ್ವಾಮಿ ಸೇವಾ ಸಮಿತಿ ಸದಸ್ಯರು, ಶ್ರೀ ಮಾರ್ಗದ ದುರುಗಮ್ಮ ದೇವಸ್ಥಾನ ಸೇವಾ ಸಮಿತಿ ಸದಸ್ಯರು ಮತ್ತು ಶ್ರೀ ಆಂಜನೇಯ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಹಾಗೂ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು,  ಗ್ರಾಮಸ್ಥರು ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು. 


ಸುದ್ದಿ ಓದಿ