ಮನರಂಜನೆ

ಜೈಲಿನಿಂದ ಹೊರ ಬಂದ ಆರ್ಯನ್ ಖಾನ್

ಜೈಲಿನಿಂದ ಹೊರ ಬಂದ  ಆರ್ಯನ್ ಖಾನ್

ಮುಂಬೈ, ಅ 30: ಮಾದಕ ವಸ್ತು ಸೇವನೆ ಆರೋಪದ ಸಂಬಂಧ ಬಂಧನಕ್ಕೆ ಒಳಗಾಗಿದ್ದ ಬಾಲಿವುಡ್ ನಟ ಶಾರುಖಾನ್ ಅವರ ಪುತ್ರ ಆರ್ಯನ್ ಖಾನ್ ಜೈಲಿನಿಂದ ಜಾಮೀನಿನ ಮೇಲೆ   ಹೊರ ಬಂದಿದ್ದಾರೆ. 

ಮುಂಬೈ ಹೈಕೋರ್ಟು ಅವರಿಗೆ ಜಾಮೀನು ನೀಡಿದೆ.  ನಿನ್ನೆಗೆ ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸುವುದು ತಡವಾದ ಕಾರಣ  ಅವರ ಬಿಡುಗಡೆ ಸಾಧ್ಯವಾಗಿರಲಿಲ್ಲ. 

ಇಂದು ಮುಂಜಾನೆ ನಟ ಶಾರುಖ್ ಖಾನ್ ಮುಂಬೈನ ಆರ್ಥರ್ ಜೈಲ್ ಜೈಲಿಗೆ ತೆರಳಿ, ಜಾಮೀನು ಪ್ರಕ್ರಿಯೆ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಆರ್ಯನ್ ಖಾನ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. 

ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ, ಆರ್ಯನ್ ಪರವಾಗಿ ಹೈಕೋರ್ಟ್ ನಲ್ಲಿ  ನಲ್ಲಿ ವಾದ ಮಂಡನೆ ಮಾಡಿದ್ದರು . ನಂತರ ಅವರಿಗೆ ಜಾಮೀನು  ಮಂಜೂರಾಗಿತ್ತು, 

ಒಂದು ಲಕ್ಷ ರೂಪಾಯಿ ಬಾಂಡಿಗೆ  ನಟ ಶಾರುಖ್ ಖಾನ್ ಮತ್ತು ನಟಿ ಜೂಹಿ ಚಾವ್ಲಾ ಸಹಿ ಮಾಡಿದ್ದಾರೆ, ಜಾಮೀನು ಪ್ರಕ್ರಿಯೆಗಳು ಪೂರ್ಣಗೊಂಡನಂತರ  ಆರ್ಯನ್ ಇಂದು ಜೈಲಿನಿಂದ  ಹೊರ ಬಂದಿದ್ದಾರೆ.

ಸುದ್ದಿ ಓದಿ