ಆರ್ಯಮನು ಬಾಳೋಜಿ ಧ್ವನಿಸುರಳಿಯ ಪೋಸ್ಟರ್ ಬಿಡುಗಡೆ
ಸವದತ್ತಿ 17: ಆದಿಶಕ್ತಿ ರೇಣುಕಾಮಾತೆ ಸವದತ್ತಿಯ ಕ್ಷೇತ್ರದಲ್ಲಿರುವ ಯುವ ಪ್ರತಿಭೆ ಆರ್ಯಮನು ಪುಂಡಲೀಕ ಬಾಳೋಜಿ ಧ್ವನಿ ನೀಡಿರುವ ಮತ್ತೊಂದು ಧ್ವನಿಸುರಳಿಯ ಪೋಸ್ಟರ್ನ್ನು ಶ್ರೀಕ್ಷೇತ್ರ ಯಲ್ಲಮ್ಮನ ಸನ್ನಿಧಿಯಲ್ಲಿ ಶುಕ್ರವಾರದಂದು ಬಿಡುಗಡೆ ಮಾಡಲಾಯಿತು. ಸುಕ್ಷೇತ್ರ ಯಲ್ಲಮ್ಮನ ಗುಡ್ಡದ ಆದಿಶಕ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ ಲಾಸ್ಟ್ ಲವರ್ ಎಂಬ ಶೀರ್ಷಿಕೆ ಆಧಾರಿತ ಹಾಡಿನ ಪೋಸ್ಟ್ರ್ನ್ನು ಲಿಂಗಾಯತ ಪಂಚಮಸಾಲಿ ಜಾಗೃತಿ ವೇದಿಕೆಯ ಅಧ್ಯಕ್ಷ ಅಲ್ಲಮಪ್ರಭು ಪ್ರಭುನವರ ಬಿಡುಗಡೆಗೊಳಿಸಿದರು.
ಸಂಗೀತ ಕ್ಷೇತ್ರದಲ್ಲಿ ವಿಶೇಷ ಆಸಕ್ತಿಯೊಂದಿಗೆ ತನ್ನದೇ ಆದಂತ ಶೈಲಿಯಲ್ಲಿ ಇಂಗ್ಲೀಷ ಮತ್ತು ಕನ್ನಡ ಭಾಷೆಯಲ್ಲಿ ಗೀತೆಯನ್ನು ರಚಿಸಿ ಸಂಗೀತ ನಿರ್ದೇಶನದೊಂದಿಗೆ ಹಾಡುವ ಮೂಲಕ ತನ್ನ ಪ್ರತಿಭೆಯನ್ನು ತೋರಿ್ಡಸಿಕೊಳ್ಳುತ್ತಿರುವ ಆರ್ಯಮನು ಬಾಳೋಜಿ ಈಗ ಮೂರನೇ ಧ್ವನಿ ಸುರಳಿಯ ಪೋಸ್ಟರ್ ಬಿಡುಗಡೆಗೊಳಿಸಿದ್ದಾರೆ. ಶೀಘ್ರದಲ್ಲಿ ಈ ಹಾಡಿನ ಟೀಸರ್ ಬಿಡುಗಡೆಯಾಗಲಿದ್ದು, ಮೇ.1 ಕಾರ್ಮಿಕ ದಿನಾಚರಣೆಯಂದು ಯುಟ್ಯೂಬ್ನಲ್ಲಿ ಧ್ವನಿ ಸುರಳಿಯನ್ನು ಬಿಡುಗಡೆ ಮಾಡಲಿದ್ದಾರೆ.
ಈಗಾಗಲೆ ಅಶ್ವಿನಿ ಸಂಸ್ಥೆಯ ಅಡಿಯಲ್ಲಿ ನಾಟ್ ಅಪ್ರೇಡ್ ಹಾಗೂ ಸ್ವಂತ ಬ್ಯಾನರ್ದಲ್ಲಿ ಮೆಸ್ಸಿಂಗ್ ವಿತ್ ಮೈ ಹೆಡ್ ಅಲ್ಬಮ್ ಸಾಂಗ್ ಬಿಡುಗಡೆಯಾಗಿದ್ದು, ಮೂರನೇ ಅಲ್ಬಮ್ ಸಾಂಗ್ ಲಾಸ್ಟ್ ಲವರ್ ಬಿಡುಗಡೆಯ ಹಂತದಲ್ಲಿದೆ. ಲಾಸ್ಟ್ ಲವರ್ ಅಲ್ಬಮ್ ಹಾಡು ಪ್ರತೀಕ ನಿರ್ದೇಶನ ಹಾಗೂ ಸುಹಾಸ ಸಹಾಯಕ ನಿರ್ದೇಶನದಲ್ಲಿ ಪ್ರೇಮ್ ಚಿತ್ರೀಕರಿಸಿದ್ದು, ಈ ಹಾಡಿಗೆ ಆರ್ಯಮನು ಬಾಳೋಜಿ ಧ್ವನಿ ನೀಡಿದ್ದಾರೆ. ಜಾಯ್, ಆರ್ಯಮನು, ಸುಧನ್ವ ಈ ಅಲ್ಬಮ್ ಸಾಂಗ್ದಲ್ಲಿ ನಟಿಸಿದ್ದಾರೆ.
ಪೋಸ್ಟರ್ ಬಿಡುಗಡೆ ಸಂದರ್ಭದಲ್ಲಿ ಪುಂಡಲೀಕ ಭೀ. ಬಾಳೋಜಿ, ಸುರೇಶ ಬಾಳೋಜಿ, ರೇಖಾ ಬಾಳೋಜಿ, ಸುಪ್ರೀಯಾ, ನಿಖಿಲ, ವಿಕಾಸ, ಮಣಿಕಂಠ ಉಪಸ್ಥಿತರಿದ್ದರು.