ಕಂಪ್ಲಿ

ವಿವಿಧ ರಂಗದಲ್ಲಿ ಸಾಧನೆಗೈದ ಕಲಾವಿದರಿಗೆ ಸನ್ಮಾನ

ವಿವಿಧ ರಂಗದಲ್ಲಿ ಸಾಧನೆಗೈದ ಕಲಾವಿದರಿಗೆ ಸನ್ಮಾನ

             ಕಂಪ್ಲಿ 12:  ಇಲ್ಲಿನ ಗಂಗಾಸಂಕೀರ್ಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ 186ನೇ ಮಹಾಮನೆ ಕಾರ್ಯಕ್ರಮ ಶನಿವಾರ ನಡೆಯಿತು. ಮರಿಯಮ್ಮನಹಳ್ಳಿಯ ರಂಗಭೂಮಿ ಕಲಾವಿದೆ, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತೆ ಡಾ.ಕೆ.ನಾಗರತ್ನಮ್ಮ ಮಹಾಮನೆಗೆ ಚಾಲನೆ ನೀಡಿ, ರಂಗಭೂಮಿಯಲ್ಲಿ ನಾನು ಯಶಸ್ಸುಹೊಂದಲು ಗ್ರಾಮೀಣ ರೈತರೇ ಕಾರಣರಾಗಿದ್ದಾರೆ. ಕಂಪ್ಲಿ ನನ್ನ ಕಲೆಯ ತವರೂರಾಗಿದ್ದು ಚಿಕ್ಕೇನಕೊಪ್ಪ ಚನ್ನವೀರಶರಣರು, ಸಂಗೀತ ನಿರ್ದೇಶಕ ವಾದಿರಾಜ, ಮಾಸ್ತರರಾದ ಜೀರು ಶಿವಲಿಂಗಪ್ಪ, ಭರಮಲಿಂಗಪ್ಪ ಮೊದಲಾದವರು, ಕನ್ನಡ ಹಿತರಕ್ಷಕ ಸಂಘದ ಕಾರ್ಯಕ್ರಮಗಳಿಂದ  ಬೆಳೆದಿದ್ದೇನೆ ಎಂದರು.

            ಬಳ್ಳಾರಿಯ ಬಿಐಟಿಎಂ ಕಾಲೇಜಿನ ಬಿಇ ಪದವಿ ವಿದ್ಯಾರ್ಥಿನಿ ಎಚ್‌.ಎನ್‌.ಚೈತ್ರಾ ‘ಶರಣ ಸಾಹಿತ್ಯದಲ್ಲಿ ಸಾಮಾಜಿಕ ಚಿಂತನೆ’ ಉಪನ್ಯಾಸ ನೀಡಿ, ಕಾಯಕ ನಿಷ್ಠೆ ಕುಂದುತ್ತಿದೆ. ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಿರಂತರ ಸಾಗಿದ್ದು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದರು. ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೆ.ವಾಲ್ಮೀಕಿ ಈರಣ್ಣ, ರಂಗಭೂಮಿ ಕಲಾವಿದೆ ಡಾ.ಕೆ.ನಾಗರತ್ನಮ್ಮ, ಉಪನ್ಯಾಸ ನೀಡಿದ ಎಚ್‌.ಎನ್‌.ಚೈತ್ರಾರನ್ನು ಪರಿಷತ್ತು ಮತ್ತು ನಂ.10ಮುದ್ದಾಪುರ ಬಯಲಾಟ ಕಲಾವಿದರಿಂದ ಗೌರವಿಸಲಾಯಿತು. ಪರಿಷತ್ ತಾಲೂಕು ಅಧ್ಯಕ್ಷ ಜಿ.ಪ್ರಕಾಶ್ ಅಧ್ಯಕ್ಷತೆವಹಿಸಿದ್ದರು.

          ರಂಗಭೂಮಿ ಕಲಾವಿದರಾದ ಜೀರು ಮಲ್ಲಿಕಾರ್ಜುನ, ಯು.ದೊಡ್ಡಬಸಪ್ಪ, ದಾಸರ ವೆಂಕಟೇಶ, ಎನ್‌.ದುರುಗಣ್ಣ, ಜಂಗಾ ವೀರೇಶ, ಚನ್ನಬಸಪ್ಪ, ಪರಿಷತ್ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಪದಾಧಿಕಾರಿಗಳಾದ ಕೆ.ಚಂದ್ರಶೇಖರ, ಎಸ್‌.ಶಾಮಸುಂದರರಾವ್, ಅಂಬಿಗರ ಮಂಜುನಾಥ, ಅಶೋಕ ಕುಕನೂರು, ಡಾ.ಬಿ.ಸುನೀಲ್, ಎಚ್‌.ನಾಗರಾಜ, ಸಜ್ಜೇದ ವೀರಭದ್ರ​‍್ಪ, ಬಿ.ಎಂ.ರುದ್ರಯ್ಯ, ಚಂದ್ರಯ್ಯಸೊಪ್ಪಿಮಠ, ಕೆ.ಯಂಕಾರೆಡ್ಡಿ, ಸರೋಜಾ ಸೇರಿ ಇತರರಿದ್ದರು. 


ಸುದ್ದಿ ಓದಿ