ಚಿಕ್ಕೋಡಿ ಜಿಲ್ಲಾ ಘೋಷಣೆಗೆ ಕಲಾವಿದರ ಒಕ್ಕೂಟ ಆಗ್ರಹ
ಲೋಕದರ್ಶನ ವರದಿ
ಚಿಕ್ಕೋಡಿ 23: ಶೈಕ್ಷಣಿಕ ಚಿಕ್ಕೋಡಿ ಜಿಲ್ಲೆಯನ್ನು ಅಧಿಕೃತವಾಗಿ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂದು ಒತ್ತಾಯಿಸಿ ಚಿಕ್ಕೋಡಿ ಕಲಾವಿದರ ಒಕ್ಕೂಟ ಜಿಲ್ಲಾ ಹೋರಾಟ ಸಮಿತಿಗೆ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿತು.
ಚಿಕ್ಕೋಡಿ ಜಿಲ್ಲೆ ಘೋಷಿಸಲು ಸರ್ಕಾರಕ್ಕೆ ಹಲವಾರು ಸಂಘಟನೆಗಳು ಮನವಿ ಮಾಡಿದ್ದರು, ಇಲ್ಲಿಯವರೆಗೆ ಯಾವುದೇ ಸರ್ಕಾರ ಜಿಲ್ಲೆ ಮಡಲು ಮನಸ್ಸು ಮಾಡಲಿಲ್ಲಾ. ಕಳೆದ ಮೂರು ದಶಕಗಳಿಂದ ಜಿಲ್ಲೆಯಾಗಬೇಕೆಂದು ಜನಸಾಮಾನ್ಯರು ಕನಸು ಕಂಡಿರುವರು. ಬೆಳಗಾವಿ ಜಿಲ್ಲೆ ಇಡಿ ರಾಜ್ಯದಲ್ಲಿಯೇ ದೊಡ್ಡ ಜಿಲ್ಲೆಯಾಗಿದ್ದು, ಗಡಿಭಾಗಗಳಿಂದ ಬೆಳಗಾವಿಗೆ ಹೋಗಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರಲು ಅನಾನುಕೂಲತೆ ಆಗುತ್ತದೆ. ಚಿಕ್ಕೋಡಿಯಲ್ಲಿ ಈಗಾಗಲೇ ಹಲವಾರು ಜಿಲ್ಲಾ ಮಟ್ಟದ ಕಛೇರಿಗಳು ಬಂದರು ಕೂಡ ಇನ್ನು ಹಲವಾರು ಇಲಾಖೆಗಳು ಬರಬೇಕಾದೆ. ಪೂರ್ಣ ಪ್ರಮಾಣದ ಇಲಾಖೆಗಳು ಕಾರ್ಯನಿರ್ವಹಿಸಲು ಜನರಿಗೆ ಅನುಕೂಲವಾದರೆ, ಅದು ಸಂಪೂರ್ಣ ಜಿಲ್ಲೆಯಾಗುತ್ತದೆ. ಬೆಳಗಾವಿ ಜಿಲ್ಲೆ ಜನಪ್ರತಿನಿಧಿಗಳು ಜನರ ಕಳಕಳಿ ಮನವಿಯನ್ನು ತಿಳಿದು ಚಿಕ್ಕೋಡಿ ಜಿಲ್ಲೆ ಮಾಡಲು ಬಹುಬೇಗ ಮುಂದಾಗಬೇಕಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಜನಪದ, ಸಣ್ಣಾಟ, ಹಲವಾರು ವಾದ್ಯ ಕಲಾತಂಡಗಳು, ಬೀದಿನಾಟಕ ಕಲಾತಂಡಗಳು ಕಲಾತ್ಮಕ ಪ್ರದರ್ಶನ ನೀಡಿ ನಮ್ಮ ಕಲಾ ಸಂಸ್ಕೃತಿ ಉಳಿಸಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ, ಈ ಇಲಾಖೆಗಳು ಬೆಳಗಾವಿಯಲ್ಲಿದ್ದು, ಅವು ಕೂಡ ಆದಷ್ಟು ಬೇಗ ಚಿಕ್ಕೋಡಿಯಲ್ಲಿ ಕಾರ್ಯರ್ನಿಹಿಸಲು ಸರ್ಕಾರ ಇಲಾಖೆಗಳನ್ನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಗೆ ನಮ್ಮ ಕಲಾವಿದರ ಬೆಂಬಲ ವ್ಯಕ್ತ ಪಡಿಸಿ, ನಮ್ಮೆಲ್ಲ ಸಂಘಟನೆಗಳ ಮನವಿಯನ್ನು ಸಹಾನುಭೂತಿಯಿಂದ ಪರಿಗಣಿಸಿ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿರವರು, ಬೆಳಗಾವಿ ಜಿಲ್ಲೆ ಜನಪ್ರತಿನಿಧಿಗಳು ಜಿಲ್ಲಾ ಘೋಷಿಸಿ ಎಲ್ಲ ಜನಸಮುದಾಯಕ್ಕೂ ಅನುಕೂಲ ಮಾಡಿ ಕೊಡಬೆಕೆಂದು ಕಲಾವಿಧರು ಆಗ್ರಹಿಸಿದರು.
ಜಿಲ್ಲಾ ಹೋರಾಟ ಸಮಿತಿ ಮುಖಂಡರಾದ ಕಾಶಿನಾಥ ಕುರಣಿ, ಚಂದ್ರಕಾಂತ ಹುಕ್ಕೇರಿ, ಸಂಜು ಬಡಿಗೇರ, ಕಲಾವಿಧರಾದ ಭರತ ಕಲಾಚಂದ್ರ, ಮಾರುತಿ ಕಾಮಗೌಡಾ, ಭೀಮಪ್ಪಾ ನೇಜಕರ, ಅಣ್ಣಪ್ಪಾ ಹೋನ್ನವರ, ಅಪ್ಪಸಾಬ ಚಿಮನೆ, ಪ್ರಕಾಶ ಜನಮಟ್ಟಿ, ಚಂದ್ರಕಾಂತ ಬಡಿಗೇರ, ಚಂದ್ರಕಾಂತ ಚೌಗಲಾ, ಅಪ್ಪಾಸಾಬ ಪಾಟೀಲ ಮುಂತಾದವರು ಇದ್ದರು.