ಅಥಣಿ

ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆ: ಮಾಹಿತಿ ಪತ್ರಿಕೆ ಬಿಡುಗಡೆ

ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆ: ಮಾಹಿತಿ ಪತ್ರಿಕೆ ಬಿಡುಗಡೆ

ಲೋಕದರ್ಶನ ವರದಿ 


ಅಥಣಿ 11: ಕರ್ನಾಟಕ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯ  ಪ್ರಯುಕ್ತವಾಗಿ  ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ವತಿಯಿಂದ  ರಾಜ್ಯಮಟ್ಟದ ಚಿತ್ರಕಲಾ( ಸ್ಥಳದಲ್ಲಿಯೇ ಚಿತ್ರ ಬಿಡಿಸುವ)  ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು, ಅಥಣಿ ತಾಲೂಕಿನ ಎಲ್ಲಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅಥಣಿ ಪುರಸಭಾ ಸದಸ್ಯ  ರಾವಸಾಬ ಐಹೊಳೆ ಕರೆ ನೀಡಿದರು.  

ಅವರು  ಚಿತ್ರಕಲಾ ಸ್ಪರ್ಧೆಯ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದರು. ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯು ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದು, ಕನ್ನಡಿಗರಿಗೆ ಅನ್ಯಾಯವಾದಾಗ ಹೋರಾಟ ನಡೆಸುವುದು ಮೂಲಕ  ನ್ಯಾಯ ಒದಗಿಸುತ್ತಾ ಬಂದಿದೆ. ಸಂಘಟನೆಯ ಮೂಲಕ ಗಡಿ ಭಾಗದಲ್ಲಿ  ಕನ್ನಡ ಪರ ಕಾರ್ಯಕ್ರಮಗಳನ್ನು, ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು  ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಹೇಳಿದರು.  

        ಕರ್ನಾಟಕ ರಕ್ಷಣಾ ವೇದಿಕೆಯ  ಪ್ರವೀಣ ಶೆಟ್ಟಿ ಬಣದ  ತಾಲೂಕಾಧ್ಯಕ್ಷ  ಅಣ್ಣಾಸಾಬ ತೆಲಸಂಗ ಮಾತನಾಡಿ  ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಕೇವಲ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬೇಕು. ಕನ್ನಡ ನಾಡು-ನುಡಿ, ನೆಲ ಜಲ, ಐತಿಹಾಸಿಕ, ಸಾಹಿತ್ಯ, ಕಲೆ ಸಂಸ್ಕೃತಿ ಬಿಂಬಿಸುವ ಯಾವುದೇ ಚಿತ್ರವನ್ನು ಬಿಡಿಸಬಹುದಾಗಿದೆ. ಮಂಗಳವಾರ ದಿ. 15 ರಂದು  ಮುಂಜಾನೆ 10 ಗಂಟೆಗೆ  ಅಥಣಿ ಪಟ್ಟಣದ  ಭೋಜರಾಜ ಕ್ರೀಡಾಂಗಣದಲ್ಲಿರುವ  ಡಾ. ಆರ್ ಎಚ್ ಕುಲಕರ್ಣಿ ಸಭಾಂಗಣದಲ್ಲಿ  ಈ ಚಿತ್ರಕಲಾ ಸ್ಪರ್ಧೆಯನ್ನು ನಡೆಸಲಾಗುವುದು. 5ರಿಂದ  7ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಾಥಮಿಕ ವಿಭಾಗ, 8 ರಿಂದ 10ನೇ  ತರಗತಿಯವರಿಗೆ  ಪ್ರೌಢಶಾಲಾ ವಿಭಾಗ ಮತ್ತು ಪಿಯುಸಿ ಮತ್ತು ಯಾವುದೇ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕಾಲೇಜು ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ  ಬಹುಮಾನಗಳನ್ನ ನೀಡಲಾಗುತ್ತದೆ. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ  ಪ್ರಮಾಣ ಪತ್ರ ಮತ್ತು ಸಮಾಧಾನಕರ ಬಹುಮಾನ ನೀಡಲಾಗುವುದು. ಈ ಸ್ಪರ್ಧೆಯಲ್ಲಿ ಭಾಗವಹಿಸುವವರು  ಸೋಮವಾರ ದಿ. 14ರ  ಒಳಗಾಗಿ  ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬರ 9481741887, 9742061165 ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.  

ಸಮಾಜ ಸೇವಕ ಅರುಣ ಯಲಗುದ್ರಿ, ಪ್ರದೀಪ ಜಾದವ, ಸಿದ್ದು ಹಂಡಗಿ, ಜಗನ್ನಾಥ ಬಾಮನೆ, ವಿಜಯಕುಮಾರ ಅಡಹಳ್ಳಿ,  ವೆಂಕಟೇಶ ದೇಶಪಾಂಡೆ, ಸಿ. ಎ ಇಟ್ನಾಳಮಠ, ರಾಜು ವಾಘಮೊರೆ, ದೀಪಕ ಶಿಂಧೆ, ಶಂಕರ ಮಗದುಮ, ಸುಭಾಷ ಕಾಂಬಳೆ, ರಾಕೇಶ ಮೈಗೂರ, ರಮೇಶ ಬಾದವಾಡಗಿ, ಪರಶುರಾಮ ನಂದೇಶ್ವರ   ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ