ಗ್ರಾಮದೇವತೆ ಜಾತ್ರಾಮಹೋತ್ಸವ ಶಿಲ್ಪಕಲೆ ಮೂರ್ತಿ ಆರಾಧಕ : ಬಡಿಗೇರ
ಸುಧಾಕರ ದೈವಜ್ಞ
ಶಿಗ್ಗಾವಿ : ಭಾರತೀಯ ಶಿಲ್ಪ್ಪಕಲಾ ವೈಭವ ಜಗತ್ತಿಗೆ ವಿಷೇಶವಾದ ಕೊಡುಗೆ ನೀಡಿದೆ. ಮಾನವನ ನಿತ್ಯ ಬದುಕಿನ ಭಾಗವಾಗಿ ಇವು ಅವಶ್ಯ ಅನಿವಾರ್ಯ ಕಲ್ಲು, ಮರ, ಲೋಹದಂತ ಗಟ್ಟಿ ವಸ್ತುಗಳಿಗೆ ಆಕಾರಕೊಟ್ಟು ಕೆತ್ತನೆಯ ಮೂಲಕ ಬೇಕಾದ ರೂಪಕ್ಕೆ ತರುಬಹುದಾದ ವಿಶಿಷ್ಟತೆಯೇ ಶಿಲ್ಪಕಲೆಯ ಆರಾಧಕರಾಗಿ ಬೆಳಗಲಿಯ ನಾಗಲಿಂಗ ಮಾನಪ್ಪ ಬಡಿಗೇರ ಹೆಸರುವಾಸಿಯಾಗಿದ್ದಾರೆ.
ಹಾವೇರಿ ಜಿಲ್ಲೆ ಇತಿಹಾಸ ಪರಂಪರೆಯ ಶಿಗ್ಗಾವಿ ತಾಲೂಕಿನ ಬೆಳಗಲಿ ಗ್ರಾಮ ಹಲವು ದೆಸೆಗಳಲ್ಲಿ ಬೆಳಗುತ್ತಲಿದೆ, ಗ್ರಾಮದ ಪಂಚ ಕಸುಬುಗಳ ಕುಟುಂಬದ ಕಾಷ್ಠಶಿಲ್ಪಿ ನಾಗಲಿಂಗ ಮಾನಪ್ಪ ಬಡಿಗೇರ, ಮೊದ ಮೊದಲು ಕೃಷಿಕರ ಪರಿಕರ ತಯಾರು ಮಾಡುತ್ತಿದ್ದ ನಂತರ ಇವರು ಮರ, ಕಲ್ಲು, ಸಿಮೇಂಟ್ ವಸ್ತುಗಳಲ್ಲಿ ಮೂರ್ತಿ ತಯಾರಿಕೆ ಮತ್ತು ವಿವಿಧ ಬಣ್ಣಗಳಿಂದ ಕುಸೂರಿ ಅಲಂಕಾರ ಮಾಡುವ ಕಾರ್ಯದಲ್ಲಿ ಪರಿಪೂರ್ಣತೆಯೊಂದಿಗೆ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡರು, ಮರ, ಕಲ್ಲುಗಳಿಗೆ ನಿರ್ಧಿಷ್ಟ ಆಕಾರ ಕೊಟ್ಟಾಗ ಮುಂದೆ ಅವು ದೈವತಾ ಸ್ವರೂಪ ಪಡೆದು ಪೂಜಿಸಲ್ಪಡುತ್ತವೆ.
ಇವರು ತಯಾರಿಸಿದ ಮೂರ್ತಿ ಗಳು ಜಿಲ್ಲೆಯಲ್ಲದೆ ಅಕ್ಕಪಕ್ಕದ ರಾಜ್ಯಗಳಲ್ಲ್ಲಿ ಪ್ರತಿ ಷ್ಠಪಿಸಲ್ಪಟ್ಟಿವೆ, ಶಿಲ್ಪಕಲಾ ಕಾಯಕದಲ್ಲಿ ಇವರ ಕುಟುಂಬ ಮೂರು ತಲೆಮಾರಿನಿಂದ ಈ ಕಾಯಕದಲ್ಲಿ ತೊಡಗಿದೆ, ತಂದೆ ಮಾನಪ್ಪ ಬಡಿಗೇರ ಮಾರ್ಗದರ್ಶನದಲ್ಲಿ ತರಬೇತಿ ಪಡೆದು ಅವರ ಜೊತೆಗೆ ವರ್ಷಕ್ಕೆ ಸುಮಾರು 15 ರಿಂದ 20 ಮೂರ್ತಿ ತಯಾರಿಸಿ ಇಲ್ಲಿಯವರೆಗೂ ಸುಮಾರು 100 ಕ್ಕೂ ಹೆಚ್ಚು ಮೂರ್ತಿ ತಯಾರಿಸಿ ನಿಗದಿತ ಸಮಯಕ್ಕೆ ಕೊಡುತ್ತಾರೆ, ಬಿಡುವಿಲ್ಲದೆ ವರ್ಷಪೂರ್ತಿ ಕೆತ್ತನೆ ಕಾರ್ಯದಲ್ಲಿ ತೊಡಗಿದವರಾಗಿದ್ದಾರೆ, ಸುವ್ಯವಸ್ಥೆಯ ಕುಟೀರ ಹೊಂದಿರುವ ಕುಟುಂಬ ಶಿಲ್ಪಕಲಾ ಕ್ಷೇತ್ರವನ್ನ ವಿಸ್ತರಿಸಿ ಜಿಲ್ಲೆಯಲ್ಲೆ ಹೆಸರುವಾಸಿಯಾದ ಮನೆತನವಾಗಿದೆ.
ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಿರಹಟ್ಟಿ ಪಕ್ಕಿರೇಶ್ವರ ಮಹಾಸ್ವಾಮಿಗಳು, ದಿಂಗಾಲೇಶ್ವರ ಶ್ರೀ, ಗಂಜೀಗಟ್ಟಿ ಶ್ರೀ, ಹಿರೇಮಣಕಟ್ಟಿ ಶ್ರೀಗಳು, ಕನರ್ಾಟಕ ಶಿಲ್ಪಕಲಾ ಅಕಾಡೆಮಿ ಆಧ್ಯಕ್ಷ ಪ್ರೋ,ವೀರಣ್ಣ ಅರ್ಕಸಾಲಿ ಸೇರಿದಂತೆ ಇನ್ನೂ ನಾಡಿನ ಅನೇಕ ಗಣ್ಯರು ನಾಗಲಿಂಗ ಬಡಿಗೇರ ಶಿಲ್ಪಕಲಾ ಕುಟೀರಕ್ಕೆ ಬೇಟಿ ನೀಡಿ ವಿವಿಧ ಬಗೆಯ ಶಿಲ್ಪಗಳ ವಿಕ್ಷಣೆಮಾಡಿ ಮೆಚ್ಚುಗೆ ವ್ಯಕ್ತಪಡಿಸಿ, ಇಕಾರ್ಯದಲ್ಲಿ ನಿಮ್ಮ ಕುಟುಂಬ ಮುಂದುವರೆಯಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
*: ಶಿಗ್ಗಾವಿ, ಗಂಜೀಗಟ್ಟಿ ಗ್ರಾಮದೇವತೆ ಜಾತ್ರಾ ಮಹೋತ್ಸವದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಗ್ರಾಮದೇವಿ ಮೂರ್ತಿ ಗೆ ಬಣ್ಣ ಹಚ್ಚುವ ಕಾರ್ಯವನ್ನು ಸತತವಾಗಿ ಇದು ಎರಡನೇಯ ಭಾರಿ ಅದರ ಸಂಪೂರ್ಣ ಜವ್ದಾಬಾರಿಯನ್ನು ತೆಗೆದುಕೊಂಡು ಕಳೆದ 54 ದಿನಗಳಿಂದ ಅಚ್ಚು ಕಟ್ಟಾಗಿ ಮೂರ್ತಿ ಗೆ ಬಣ್ಣ ಹಚ್ಚುವುದರ ಜೊತೆಗೆ ಜಾತ್ರಾ ಮಹೋತ್ಸವದಲ್ಲಿ ಪ್ರತಿಷ್ಠಾಪನೆಗೋಳ್ಳವುವರೆಗೂ ನನ್ನ ಜವ್ದಾಬಾರಿಯಾಗಿರುತ್ತದೆ.
ಶಿಲ್ಪಕಲೆ ಮೂರ್ತಿ ತಯಾರಕ ನಾಗಲಿಂಗ ಬಡಿಗೇರ. ಮೊಬೈಲ್ ಸಂಖೈ : 8105661409
ಯಾವುದೆ ವಸುಲಿ ಲಾಬಿಗೊತ್ತಿಲ್ಲದ ನಾಗಲಿಂಗ ಬಡಿಗೇರ ಕಲೆಗೆ ಮೆಚ್ಚಿ ನಾಡಿನ ಹೆಸರಾಂತ ಪೂಜ್ಯರು, ದೈವಸಮಿತಿಯವರು ಸಂಘ-ಸಂಸ್ಥೆಗಳು ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ, ಎಲೆಮರೆಯ ಕಾಯಿಯಾಗಿ ನಮ್ಮ ಮಧ್ಯದಲ್ಲಿದ್ದಾರೆ, ಆಧುನಿಕ ಭರಾಟೆಯ ಯುಗದಲ್ಲಿ ಶಿಲ್ಪಕಲೆಯಂತ ಕುಸುರಿಕಲೆ ಮುಂದಿನ ಪಿಳಿಗೆಗೂ ಪರಿಚಯಿಸುವ ಅವಶ್ಯಕತೆ ಇದೆ, ಶಿಲ್ಪಕಲೆಯಲ್ಲಿ ಆಸಕ್ತ ಯುವಕರು ಇಂತ ಹಿರಿಯರ ಮಾರ್ಗದರ್ಶನದಲ್ಲಿ ಕಲೆಯ ಬಗ್ಗೆ ಪರಿಪೂರ್ಣ ಅಧ್ಯಯನ, ಮಾಹಿತಿ, ಪಡೆದುಕೊಳ್ಳುವುದು ಅವಶ್ಯವಿದೆ