ಕಲಾ ಉತ್ಸವ ಸ್ಪರ್ಧೆ: ಶಿವಾನಂದ ಮಹಾವಿದ್ಯಾಲಯ ಚಾಂಪಿಯನ್
ಶೇಡಬಾಳ 13: ಚಿಕ್ಕೋಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿ. 8 ರಂದು ಜರುಗಿದ ಕಲಾ ಉತ್ಸವ ಸ್ಪರ್ಧೆಯಲ್ಲಿ ಕಾಗವಾಡ ಶಿವಾನಂದ ಮಹಾವಿದ್ಯಾಲಯದ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆಂದು ಪ್ರಾಚಾರ್ಯ ವ್ಹಿ.ಎಸ್. ತುಗಶೆಟ್ಟಿ ತಿಳಿಸಿದ್ದಾರೆ.
ಕಲಾ ಉತ್ಸವದ ಹಿನ್ನಲೆಯಲ್ಲಿ ಪ್ರಬಂಧ, ರಸಪ್ರಶ್ನೆ, ಭಾಷಣ, ರಂಗೋಲಿ ವಿವಿಧ ಸ್ಪರ್ಧೆಗಳನ್ನು ವಿವಿಧ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಮ್ಮ ಮಹಾವಿದ್ಯಾಲಯದ 40 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ, ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇದರಲ್ಲಿ ವಿಶೇಷವಾಗಿ ಕು. ಶ್ರೇಯಾ ಪಾಟೀಲ- ರಂಗೋಲಿಯಲ್ಲಿ, ಕು. ಪೂಜಾ ಘೋರ್ಪಡೆ- ಭಾಷಣದಲ್ಲಿ, ಕು. ಶಶಿಕುಮಾರ ಹೆಳವಿ, ಕು. ಮಂಜುನಾಥ ಈಶರಗೊಂಡ, ಕು. ಸಚಿನ್ ಮಡ್ಡಿ- ರಸಪ್ರಶ್ನೆಯಲ್ಲಿ ತೃತೀಯ ಸ್ಥಾನಗಳನ್ನು ಪಡೆದುಕೊಳ್ಳುವುದರ ಮೂಲಕ ಮಹಾವಿದ್ಯಾಲಯದ ಸಾಂಸ್ಕೃತಿಕ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಇವರಿಗೆ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಪ್ರೊ.ಬಿ.ಎ. ಪಾಟೀಲ, ಪ್ರಾಚಾರ್ಯರಾದ ಪ್ರೊ. ವ್ಹಿ.ಎಸ್. ತುಗಶೆಟ್ಟಿ ಮತ್ತು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಅಭಿನಂದನೆ ಸಲ್ಲಿಸಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರೊ. ಅಮೋಲ್ ಪಾಟೀಲ ಮತ್ತು ಪ್ರೊ. ಎಸ್.ಎಂ. ಘೋರ್ಪಡೆ ಮಾರ್ಗದರ್ಶನ ನೀಡಿದ್ದರು