ಮೊಬೈಲ್ ಹಾವಳಿಯಿಂದ ಕಲೆ, ಸಂಸ್ಕೃತಿ, ಸಂಗೀತ ಮೊಲೆ ಗುಂಪಾಗಿದೆ: ಶರಣಪ್ಪ ಜಿಗೇರಿ
ಲೋಕದರ್ಶನ ವರದಿ
ಕುಷ್ಟಗಿ 24: ಪ್ರಸಕ್ತ ದಿನಮಾನಗಳಲ್ಲಿ ಮೊಬೈಲ್ಗಳ ಹಾವಳಿಯಿಂದ ಮೂಲ ಕಲೆ, ಸಂಸ್ಕೃತಿ, ಸಂಗೀತ ಮೂಲೆ ಗುಂಪಾಗಿದೆ ಎಂದು ಬಸವಚೇತನ ಎಜ್ಯುಕೇಷನಲ್ ಮತ್ತು ಚಾರಿಟೀಬಲ್ ಟ್ರಸ್ಟ್ನ ಗೌರವಾಧ್ಯಕ್ಷ ಶರಣಪ್ಪ ಜಿಗೇರಿ ಕಳವಳ ವ್ಯಕ್ತಪಡಿಸಿದರು.
ಬಸವಚೇತನ ಎಜ್ಯುಕೇಷನಲ್ ಮತ್ತು ಚಾರಿಟೀಬಲ್ ಟ್ರಸ್ಟ್ ತಳುವಗೇರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ಸಂಜೆ ಇಲ್ಲಿನ ಕೃಷ್ಣಗಿರಿ ಕಾಲೋನಿಯಲ್ಲಿ ಏರ್ಪಡಿಸಿದ್ದ ಪ್ರಾಯೋಜಿತ ಸುಗಮ ಸಂಗೀತ ಹಾಗೂ ಜನಪದ ನೃತ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಾಯೋಜಿತ ಕಾರ್ಯಕ್ರಮಗಳ ಮೂಲಕ ಕುಟ್ಟುವ ಪದ, ಸೋಬಾನೆ ಪದ, ಗೀಗಿ ಪದ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಭಾಗದ ಮೂಲ ಸಂಸ್ಕೃತಿಯನ್ನು ಉಳಿಸುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.
ಬಸವಚೇತನ ಎಜ್ಯುಕೇಷನಲ್ ಮತ್ತು ಚಾರಿಟೀಬಲ್ ಟ್ರಸ್ಟ್ ನ ಅಧ್ಯಕ್ಷ ಉಮೇಶ ವೀರಪ್ಪ ಮೇಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ಶಕಕೋಟ್ರೇಶ ಮರಬನಹಳ್ಳಿ, ನಿವೃತ್ತ ಪ್ರಾಚಾರ್ಯ ಹೆಚ್.ಎಸ್ ಹಿರೇಮಠ, ಮಹಾದೇವಪ್ಪ ಮಹಾಲಿಂಗಪೂರ, ಬಸವಚೇತನ ಎಜ್ಯುಕೇಷನಲ್ ಮತ್ತು ಚಾರಿಟೀಬಲ್ ಟ್ರಸ್ಟ್ ನ ಕಾರ್ಯದರ್ಶಿ ರವಿ ಜಿಗೇರಿ, ಸುರೇಶ ಗುಡಿಹಿಂದಲ್, ಶ್ರೀದೇವಿ ಉಮೇಶ ಮೇಳಿ, ಬಸಮ್ಮ ವಿಜಯ ಕುಮಾರ, ಪಾಟೀಲ್ ಹಾಗೂ ಕೃಷಣಗಿರಿ ಕಾಲೋನಿಯ ನಿವಾಸಿಗಳು ಉಪಸ್ಥಿತರಿದ್ದರು.
ನಂತರ ಹುಲಿಯಾಪುರ ಗ್ರಾಮದ ಕಲಾವಿದೆ ಭುವನೇಶ್ವರಿ ಎಸ್ ಅಂಗಡಿ ಸುಗಮ ಸಂಗೀತ ಹಾಗೂ ಹಿರೇಮನ್ನಾಪೂರ ಗ್ರಾಮದ ಕಲಾವಿದ ನಾಗರಾಜ ಡಿ ನಿಡಗುಂದಿ ಸುಮಾರು ಜನಪದ ನೃತ್ಯ ಕಾರ್ಯಕ್ರಮ ನಡೆಸಿ ಜನಮನ ರಂಜಿಸಿದರು