ರಾಣೆಬೆನ್ನೂರ

ಕಲೆ, ಕಲಾವಿದರು ಕರುನಾಡಿನ ಸಂಸ್ಕೃತಿಯ ಹರಿಕಾರರು: ಹೆದ್ದೇರಿ

ಕಲೆ, ಕಲಾವಿದರು ಕರುನಾಡಿನ ಸಂಸ್ಕೃತಿಯ ಹರಿಕಾರರು: ಹೆದ್ದೇರಿ

ಲೋಕದರ್ಶನ ವರದಿ 


ರಾಣೇಬೆನ್ನೂರು: ಕಲೆ ಮತ್ತು ಕಲಾವಿದರು ಕನ್ನಡ ನಾಡಿನ ಸಂಸ್ಕ್ರತಿಯ ಹರಿಕಾರರು, ಸಂಗೀತ ಸಂಸ್ಕ್ರತಿ ಮಾನವನ ವಿಕಾಸತೆ ಮತ್ತು ಮನಸ್ಸಿನ ಪ್ರಫುಲತೆಗೆ ಅತ್ಯಂತ ಸಹಕಾರಿಯಾಗಿದೆ. ಸಂಸ್ಕ್ರತಿಯ ಪ್ರತೀಕವಾಗಿರುವ ಸಂಗೀತ ಕಲೆ ಮತ್ತು ಕಲಾವಿದರು ನೇಪತ್ಯಕ್ಕೆ ಸರಿಯುತ್ತಿರುವುದು ಅತ್ಯಂತ ವಿಷಾದಕರ ಸಂಗತಿಯಾಗಿದೆ ಎಂದು ನಗರಸಭಾ ಸದಸ್ಯ ಹನುಮಂತಪ್ಪ ಹೆದ್ದೇರಿ ಹೇಳಿದರು. 

ಅವರು ಶನಿವಾರ ಸಂಜೆ ಇಲ್ಲಿನ ಈಶ್ವರ ನಗರದ ಅಯ್ಯಪ್ಪಸ್ವಾಮಿ ಮಂದಿರದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿತ ಅನುಪಲ್ಲವಿ ಸಂಗೀತ ಕಲಾ ಸಂಸ್ಥೆ ಮತ್ತು ಅನುರಾಗ ಕಲಾ ತಂಡ ಆಯೋಜಿಸಿದ್ದ ಸುಗಮ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಲಾ ಸಂಪತ್ತು ಭಾರತೀಯರ ನೀಜ ಸಂಪತ್ತಾಗಿದೆ, ಅದನ್ನು ಕಳೆದುಕೂಂಡರೆ ಸಂಸ್ಕ್ರತಿಯನ್ನೇ ಕಳೆದುಕೂಂಡಂತಾಗುತ್ತದೆ ಅದಕ್ಕಾಗಿ ಕಲಾವಿದರನ್ನು ಪ್ರೋತ್ಸಾಹಿಸುವುದರ ಮೂಲಕ ಕಲಾ ಪರಂಪರೆ ಉಳಿಸಿ ಬೆಳಸಲು ಮುಂದಾಗಬೇಕು ಎಂದರು.  

ಅಯ್ಯಪ್ಪ ಸ್ವಾಮಿ ಮಂದಿರದ ಧರ್ಮದರ್ಶಿ ಮಂಜುನಾಥ ಎಸ್‌. ಮಣೇಗಾರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅಥಿತಿಯಾಗಿದ್ದ ಪ್ರಥಮ ದರ್ಜೆ ಗುತ್ತಿಗೆದಾರ ಮತ್ತು ಅಭಿವರ್ಧಕ ಪಿ.ಎಸ್‌. ಮುದಗಲ್ ಅವರು ಪಾಚ್ಚಿಮಾತ್ಯ ಸಂಸ್ಕ್ರತಿ ಅನುಕರಣೆಯಿಂದ ಇಂದು ನಮ್ಮ ತಲತಲಾಂತರದಿಂದ ಹಾಸು ಹೂಕ್ಕಾಗಿ ಬಂದಿರುವ ನೀಜ ಸಂಸ್ಕ್ರತಿಯ ಕಲೆ, ಸಾಹಿತ್ಯ, ಸಂಗೀತ ಮತ್ತು ಜನಪದ  ಕಲಾ ಪರಂಪರೆ ಮರೆಯಾಗುತ್ತಿದೆ. ಇವುಗಳನ್ನು ಸಮಾಜದಲ್ಲಿರುವ ನಾವೆಲ್ಲರೂ ಸಹಕಾರ ನೀಡಿ ಉಳಿಸಿ ಬೆಳೆಸಿಕೂಳ್ಳಬೇಕಾದ ಇಂದಿನ ಅಗತ್ಯವಿದೆ ಎಂದರು. ನಗರಸಬಾ ಸದಸ್ಯ ರಾಮಪ್ಪ ಕೆ. ಕರಡೆಣ್ಣನವರ, ವಿಜಯಾ ವಾಹನ ಚಾಲನಾ ತರಬೇತಿ ಸಂಸ್ಥೆಯ ಪ್ರಭುಗೌಡ ಎಸ್‌. ಪಾಟೀಲ, ಅನುಪಲ್ಲವಿ ಅಧ್ಯಕ್ಷ ರುದ್ರೇಶ ಬಡಿಗೇರ, ಸೇರಿದಂತೆ ಮತ್ತಿತರ ಗಣ್ಯರು ಸಂಸ್ಥೆಗಳ ಪದಾದಿಕಾರಿಗಳು ಉಪಸ್ಥಿತರಿದ್ದರು. 

ಸರಸ್ವತಿ ಕಲಾ ತಂಡದ ಶ್ರೀಧರ ಚಲವಾದಿ, ಅನುರಾಗ ಕಲಾ ತಂಡದ ಯಶೋಧಾ ಗುಡಿಗುಡಿ ಸಂಗಡಿರು ಸಾದರಪಡಿಸಿದ ವೈವಿಧ್ಯಮಯ  ಸಾಂಸ್ಕ್ರತಿಕ ಸಂಮಿಶ್ರ ಕಾರ್ಯಕ್ರಮವು ಪ್ರೇಕ್ಷಕರ ಗಮನ ಸೆಳೆದವು. ಕರುಣಾ ಸಂಗಡಿಗರು ಪ್ರಾರ್ಥಿಸಿದರು, ಕಲಾವಿದ  ರುದ್ರೇಶ ಬಡಿಗೇರ ಸ್ವಾಗತಿಸಿದರು, ಇನ್ನೂರ್ವ ಕಲಾವಿದ ಗಣೇಶ ಗುಡಿಗುಡಿ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ