ಅಂತರಾಜ್ಯ ವಂಚಕರ ಬಂಧನ: 3.60 ಕೋಟಿ ರೂ ಮೌಲ್ಯದ ವಾಹನಗಳ ವಶ
ಚಿಕ್ಕೋಡಿ 01: ಸುಳ್ಳು ದಾಖಲಾತಿ ಸೃಷ್ಟಿ ಮಾಡಿ ಇನ್ಸೂರನ್ಸ್ ಕಂಪನಿಯಿಂದ ಹಣ ಕೊಡಿಸುತ್ತೇವೆಂದು ಬೇರೆಯವರಿಗೆ ಲಾರಿ ಮತ್ತು ಜೆಸಿಬಿ ಮಾರಾಟ ಮಾಡುವ ಮೂಲಕ ಜನರಿಗೆ ಮೋಸ ಮಾಡುತ್ತಿದ್ದ ಇಬ್ಬರು ಅಂತರಾಜ್ಯ ವಂಚಕರನ್ನು ಬಂಧಿಸಿ ಅವರಿಂದ 3.60 ಕೋಟಿ ರೂ ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಚಿಕ್ಕೋಡಿ ಪೊಲೀಸ್ರು ಯಶಸ್ವಿಯಾಗಿಯಾಗಿದ್ದಾರೆ.
ಗಡಿ ಭಾಗದ ಜನರಿಗೆ ವಂಚಿಸುತ್ತಿದ್ದ ಆರೋಪಿಗಳ ಬಗ್ಗೆ ದೊರೆತ ಖಚಿತ ಮಾಹಿತಿಯೊಂದಿಗೆ ಡಿವೈಎಸ್ಪಿ ಮನೋಜ ನಾಯಿಕ, ಸಿಪಿಐ ಆರ್.ಆರ್.ಪಾಟೀಲ, ಪಿಎಸ್ಐಗಳಾದ ರಾಕೇಶ ಬಗಲಿ, ಅಶೋಕ ಕುಳ್ಳೂರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಎಸ್ಐ ಎಲ್.ಎಸ್.ಖೋತ, ಎಸ್.ಎಸ್.ಅರಭಾಂವಿ, ಎಸ್.ಎಚ್.ದೇವರ, ಜಿ.ಎಸ್.ಕಾಂಬಳೆ, ಎನ್.ಎಸ್.ಬಡಿಗೇರ, ಎಸ್.ಎಂ.ಚೌಗಲಾ, ಆರ್.ಎಸ್.ಮೂಡಲಗಿ, ಎಸ್.ಬಿ.ಚೌಗಲಾ,ಎಂ.ಪಿ.ಸತ್ತಿಗೇರಿ, ಎಸ್.ಪಿ.ಗಲಗಲಿ ಮುಂತಾದವರೊಂದಿಗೆ ವ್ಯಾಪಕ ಜಾಲ ಬೀಸಿ ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬ್ಯಾಂಕಿನಲ್ಲಿ ಸಾಲ ಮಾಡಿ ಸಾಲ ತುಂಬಲಾಗದ ಗ್ರಾಹಕರನ್ನು ಪತ್ತೆ ಹಂತವರಿಂದ ವಾಹನ ತಾವೇ ಖರೀದಿಸಿ ಅವರಿಗೆ ಅಲ್ಪ ಹಣ ನೀಡಿ ಉಳಿದ ಸಾಲವನ್ನು ನಾವೇ ತುಂಬಿಕೊಳ್ಳುತ್ತೇವೆಂದು ಹೇಳಿ ಅವರು್ನ ವಂಚಿಸಿ, ಅಂತಹ ವಾಹನದ ನಕಲಿ ದಾಖಲೆ ಸೃಷ್ಟಿಸಿ ಬೇರೆಯವರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿ ಜನರನ್ನು ವಂಚಿಸುತ್ತಿದ್ದ ವಂಚಕ ಆರೋಪಿಗಳಾದ ಸಾಂಗಲಿ ಜಿಲ್ಲೆಯ ವಾಳವಾ ತಾಲೂಕಿನ ಮಚ್ಚೇಂದ್ರಗಡ ಗ್ರಾಮದ ಯುನೂಸ್ ಸೈಯದ, ದಾಂಡೇಲಿ ಪಟ್ಟಣದ ಅಪ್ಪಜಲ ದಿಲಾವರ್ ಅವರನ್ನು ಪೊಲೀಸ್ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಟಾಟಾ ಕಂಪನಿಯ 4 ಟಿಪ್ಪರಗಳು, ಮಹಿಂದ್ರಾ ಕಂಪನಿಯ 2 ಟಿಪ್ಪರಗಳು, ಅಶೋಕ ಲೈಲ್ಯಾಂಡ ಕಂಪನಿಯ 3 ವಾಹನಗಳು, ಒಂದು ಜೆಸಿಬಿ ಸೇರಿದಂತೆ ವಿವಿಧ ಕಂಪನಿಯ ಒಟ್ಟು 2,60 ಕೋಟಿ ರೂ.ಗಳ ಮೊತ್ತದ ಒಟ್ಟು 12 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ. ಉಳಿದ ಆರೋಪಿಗಳ ಪತ್ತೆಗಾಗಿ ವ್ಯಾಪಕ ಜಾಲ ಬೀಸಲಾಗಿದ್ದು, ಶೀಘ್ರ ಕಣ್ಮರೆಯಾಗಿರುವ ಎಲ್ಲ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.
ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿವೈಎಸ್ಪಿ ಮನೋಜ ನಾಯಿಕ, ಸಿಪಿಐ ಆರ್.ಆರ್.ಪಾಟೀಲ, ಪಿಎಸ್ಐಗಳಾದ ರಾಕೇಶ ಬಗಲಿ, ಲಕ್ಷ್ಮಣ ಆರಿ, ಅಶೋಕ ಕುಳ್ಳೂರ ಉಪಸ್ಥಿತರಿದ್ದರು.