ಬೆಳಗಾವಿ

ಪಂಡರಾಪೂರ ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆ

ಪಂಡರಾಪೂರ ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆ

ಲೋಕದರ್ಶನ ವರದಿ 

ಯಮಕನಮರಡಿ 15 : ಸ್ಥಳೀಯ ಪಾಂಡುರಂಗ ಭಕ್ತರಾದ ಶ್ರೀ ಬಾಳಪ್ಪ ಬಸಪ್ಪ ಹೊನ್ನಂಗಿ ಅವರು ಬೆಳಗಾವಿ ತಾಲೂಕಿನ ಎಳ್ಳೂರು ಗ್ರಾಮದಿಂದ ಪಾದಯಾತ್ರೆ ಮೂಲಕ ಯಮಕನಮರಡಿಗೆ ಆಗಮಿಸಿದ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಭಕ್ತಿಪೂರ್ವಕವಾಗಿ ಸ್ವಾಗತಿಸಿದರು.  ಪಾದಯಾತ್ರೆಯ ನಂತರ ಭಕ್ತಾದಿಗಳಿಗಾಗಿ ವಿಶೇಷ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ಕಾರ್ಯಕ್ರಮ ಭಕ್ತಿಮಯ ವಾತಾವರಣದಲ್ಲಿ ನಡೆಯಿತು. ಈ ಸೇವಾ ಕಾರ್ಯದಲ್ಲಿ ರಾಜು ತತವೀರ, ವಿಠ್ಠಲ್ ಮದಿಹಳ್ಳಿ, ಸಂತೋಷ್ ಬಾವನ್ನವರ್, ವಿಠ್ಠಲ್ ತುಬಶೆಟ್ಟಿ, ಅನಿಲ್ ಮಾರ್ಯಾಳಿ, ವಿಠ್ಠಲ್ ಹುಕ್ಕೇರಿ, ಮಂಜುನಾಥ್ ತುಬಶೆಟ್ಟಿ, ಅಭಿಜಿತ್ ಬಾವನ್ನವರ್, ಶ್ರೀನಿವಾಸ್ ಅರಳಿಕಟ್ಟಿ, ನಾಗಪ್ಪ ಬೆಳಗಾವಿ ಸೇರಿದಂತೆ ಅನೇಕ ಭಕ್ತರು ಸಹಕರಿಸಿದರು.  ಭಕ್ತರು ಪಾಂಡುರಂಗನ ನಾಮಸ್ಮರಣೆ ಮಾಡಿ ಮಹಾಪ್ರಸಾದ ಸ್ವೀಕರಿಸಿದರು. ಗ್ರಾಮಸ್ಥರು ಈ ಸೇವಾ ಕಾರ್ಯವನ್ನು ಮೆಚ್ಚಿ, ಭಕ್ತಾದಿಗಳ ಏಕತೆಯು ಸಮಾಜಕ್ಕೆ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು. 


ಸುದ್ದಿ ಓದಿ