ರಾಷ್ಟ್ರೀಯ

ಆಟ ಈಗಷ್ಟೇ ಆರಂಭ- ಸಿಎಂ ಗೆ ಅರ್ನಬ್ ಗೋಸ್ವಾಮಿ ಸವಾಲು

ಆಟ ಈಗಷ್ಟೇ ಆರಂಭ-  ಸಿಎಂ ಗೆ  ಅರ್ನಬ್ ಗೋಸ್ವಾಮಿ ಸವಾಲು

ಮುಂಬೈ, ನವೆಂಬರ್ 12: ಸುಪ್ರೀಂ ಕೋರ್ಟ್ ನಿಂದ  ಮಧ್ಯಂತರ ಜಾಮೀನು ಪಡೆದು ಬಿಡುಗಡೆಯಾಗಿರುವ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ರಾಜ್ಯದ ಮುಖ್ಯಮಂತ್ರಿ  ಉದ್ಧವ್ ಠಾಕ್ರೆ ವಿರುದ್ಧ ಕಿಡಿ ಕಾರಿದ್ದಾರೆ. 

ಉದ್ಧವ್ ಠಾಕ್ರೆ ನೀವು ಎಲ್ಲ ಕಳೆದುಕೊಂಡು , ನೀವು ಸೋತುಹೋಗಿದ್ದೀರಿ  ಹಳೆಯ ಸುಳ್ಳು ಪ್ರಕರಣದಲ್ಲಿ  ನನ್ನನ್ನು ಸಿಕ್ಕಿಹಾಕಿಸಿ ಬಂಧಿಸಿದ್ದೀರಿ  ಅದಕ್ಕಾಗಿ ನನ್ನ ಕ್ಷಮೆಯನ್ನು ಕೂಡ ಕೇಳಲಿಲ್ಲ ಎಂದರು.

ನಾನು ಜೈಲಿನಲ್ಲಿದ್ದುಕೊಂಡೇ ಸುದ್ದಿ ವಾಹಿನಿಯನ್ನು ಆರಂಭಿಸುವೆನು, ಆದರೆ ನಿಮ್ಮಿಂದ ಏನು ಮಾಡಲೂ ಸಾಧ್ಯವಿಲ್ಲ. ಆಟ ಈಗಷ್ಟೇ ಆರಂಭವಾಗಿದೆ, ರಿಪಬ್ಲಿಕ್ ಟಿವಿ ಚಾನೆಲ್ ನ್ನು ಎಲ್ಲಾ ಸ್ಥಳೀಯ ಭಾಷೆಗಳಲ್ಲಿಯೂ ಆರಂಭಿಸಲಾಗುವುದು, ಅಂತಾರಾಷ್ಟ್ರೀಯ ಮಾಧ್ಯಮವನ್ನು ಸಹ ತೆರೆಯಲಾಗುವುದು ಎಂದು ಹೇಳಿದರು. 

ಜಾಮೀನು ನೀಡಿದ ಸುಪ್ರೀಂ ಕೋರ್ಟ್ ಗೆ ಧನ್ಯವಾದ ಹೇಳಿದ ಅವರು,  ಮರಾಠಿ ಭಾಷೆಯಲ್ಲಿ ಮಾತನಾಡಿ, ಕೊನೆಗೆ  ಜೈ ಮಹಾರಾಷ್ಟ್ರ ಎಂದೂ ಹೇಳಿದ್ದಾರೆ.  

ಸುದ್ದಿ ಓದಿ