ಬೈಲಹೊಂಗಲ

ಜೀವನಸಾಕ್ಷಾತ್ಕಾರಕ್ಕೆ ಅರಿಷಡ್ವರ್ಗಗಳನ್ನು ತ್ಯಜಿಸಬೇಕು: ಬ್ರಹ್ಮಕುಮಾರಿ ಅಂಬಿಕಾ

ಜೀವನಸಾಕ್ಷಾತ್ಕಾರಕ್ಕೆ ಅರಿಷಡ್ವರ್ಗಗಳನ್ನು ತ್ಯಜಿಸಬೇಕು: ಬ್ರಹ್ಮಕುಮಾರಿ ಅಂಬಿಕಾ

ಬೈಲಹೊಂಗಲ 23: ಅರಿಷಡ್ವರ್ಗಗಳಾದ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಗಳನ್ನು ತ್ಯಜಿಸಿ ಬದುಕು ನಡೆಸಿದಾಗ ಮಾತ್ರ ಜೀವನ ಸಾಕ್ಷಾತ್ಕಾರ ಸಾಧ್ಯವಿದೆ ಎಂದು ಬೆಳಗಾವಿಯ ಬ್ರಹ್ಮಕುಮಾರಿ ಅಂಬಿಕಾ ಅಕ್ಕನವರು ಹೇಳಿದರು.  

ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಪ್ರಜಾಪಿತ ಬ್ರಹಮಕುಮಾರಿ ಈಶ್ವರಿ ವಿಶ್ವವಿದ್ಯಾನಿಲಯದ ಆಧ್ಯಾತ್ಮ ಚಿಂತನ ಮಂದಿರದ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಗ್ರಾಪಂ ಅಧ್ಯಕ್ಷ ಚಂದ್ರಶೇಖರಯ್ಯ ಕಾರಿಮನಿ ಮುಖ್ಯ ಅತಿಥಿಯಾಗಿ ಮಾತನಾಡಿ ಸಮಾಜದಲ್ಲಿ ಉತ್ತಮರಾಗಿ ಬಾಳಲು ಬ್ರಹ್ಮಕುಮಾರಿಯರ ಆಧ್ಯಾತ್ಮ ಸಂದೇಶ ಅತ್ಯಂತ ಪ್ರಸ್ತುತ ಎಂದು ಹೇಳಿದರು. ಇದೇ ವೇಳೆ ರಕ್ಷಾ ಬಂಧನ ಕಾರ್ಯಕ್ರಮ ನೆರವೇರಿತು. 

ಬ್ರಹ್ಮಕುಮಾರಿ ಸಹೋದರಿಯರಾದ ಸುಧಾ, ಚಂಪಾ ಇದ್ದರು. ಹಿರಿಯರಾದ ಎಮ್.ಎಮ್.ಕಾಡೇಶನವರ, ಜಿಪಂ ಮಾಜಿ ಸದಸ್ಯ ಈರಣ್ಣ ಕರೀಕಟ್ಟಿ, ಬಸವರಾಜ ಹಕ್ಕರಕಿ, ಯಾಸೀನ ಕಿತ್ತೂರ, ಬಸಯ್ಯ ಬೋಜಯ್ಯನವರ, ಮಲ್ಲಪ್ಪ ಯರಿಕಿತ್ತೂರ, ಶಶಿಧರ ಪತ್ತಾರ, ವಿಲಾಸ ಕೊಟಬಾಗಿ, ಬಾಳಪ್ಪ ಶೀಲವಂತರ, ವಿ.ಎಸ್.ಬಳಿಗಾರ ಅಥಿತಿಗಳಾಗಿ ಭಾಗವಹಿಸಿದ್ದರು. ಪಾರ್ವತಿ ಅಕ್ಕ ನಿರೂಪಿಸಿ ಸ್ವಾಗತಿಸಿದರು. ಯೋಗೀಶ ವಂದಿಸಿದರು 

ಸುದ್ದಿ ಓದಿ