ಸೌಂದತ್ತಿ

ವಾಗ್ವಾದ: ಬಸ್ ನಿರ್ವಾಹಕನ ಮೇಲೆ ಮಹಿಳೆ ಹಲ್ಲೆ

ವಾಗ್ವಾದ: ಬಸ್ ನಿರ್ವಾಹಕನ ಮೇಲೆ ಮಹಿಳೆ ಹಲ್ಲೆ

ಸವದತ್ತಿ 24: ರಾಜ್ಯಾದ್ಯಂತ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿಯಾಗಿ ಇನ್ನೂ ಹದಿನೈದು ದಿನಗಳು ಕಳೆದಿಲ್ಲ. ಒಂದಿಲ್ಲೊಂದು ರಾದ್ಧಾಂತ ನಡೆಯುತ್ತಲೆ ಸಾಗಿದೆ. ಸವದತ್ತಿಯ ಶ್ರೀ ಕ್ಷೇತ್ರ ಯಲ್ಲಮ್ಮನ ದೇವಸ್ಥಾನದ ಬಸ್ ನಿಲ್ದಾಣದಲ್ಲಿ ಬಸ್ಸ ಹತ್ತುವ ವೇಳೆ ಸಾರಿಗೆ ಸಂಸ್ಥೆಯ ನಿರ್ವಾಹಕನೊಂದಿಗೆ ಜಗಳವಾಗಿ ಕೆಲವು ಪ್ರಯಾಣಿಕರು ಮತ್ತು ನಿರ್ವಾಹಕನ ನಡುವೆ ಮಾತಿನ ಚಕಮಕಿ ನಡೆದು ನಿರ್ವಾಹಕನನ್ನು ಥಳಿಸಿರುವ ಘಟನೆಯು ಸವದತ್ತಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ. 

ಶುಕ್ರವಾರದಂದು ಶ್ರೀಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ಹೆಚ್ಚಿರುವುದು ಸಾಮಾನ್ಯವಾಗಿದೆ. ಇತ್ತೀಚೆಗೆ ಶಕ್ತಿ ಯೋಜನೆ ಜಾರಿಯಾದಾಗಿನಿಂದ ಮಹಿಳೆಯರ ಸಂಖ್ಯೆ ದೇವಸ್ಥಾನದಲ್ಲಿ ಹೆಚ್ಚಾಗುತ್ತಿದೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನಿಂದ ಮಹಿಳೆಯರು ಮತ್ತು ಪುರುಷರು ಸೇರಿ ಕ್ಷೇತ್ರಕ್ಕೆ ಆಗಮಿಸಿದ ಭಕ್ತರ ತಂಡ ಹಾಗೂ ಸವದತ್ತಿ ಸಾರಿಗೆ ಸಂಸ್ಥೆಯ ನಿರ್ವಾಹಕನ ನಡುವೆ ನಡೆದ ಜಗಳ ತಾರಕಕ್ಕೇರಿ ನಿರ್ವಾಹಕನ ಎದೆಯ ಮೇಲಿನ ಶರ್ಟನ್ನು ಮಹಿಳೆಯೊಬ್ಬಳು ಹಿಡಿದು ಎಳೆದಾಡಿದ ಘಟನೆ ಸಾಮಾಜಿಕ ಜಾಲತಾನದಲ್ಲಿ ಹರಿದಾಡುತ್ತಿದೆ.  

ಘಟನೆ: ಧಡೇನಗರಕೊಪ್ಪ ಗ್ರಾಮದಿಂದ ಯಲ್ಲಮ್ಮನಗುಡ್ಡ ಮಾರ್ಗವಾಗಿ ಸವದತ್ತಿ ಆಗಮಿಸುವ ಬಸ್ಸಿನಲ್ಲಿ ವಿಜಯಪುರ ಜಿಲ್ಲೆಯ ಮಹಿಳೆಯರು ಮತ್ತು ಅವರೊಂದಿಗೆ ಬಂದಿದ್ದ ಪುರುಷರು ಬಸ್ಸ ಹತ್ತುವ ವೇಳೆ ನಿರ್ವಾಹಕನೊಂದಿಗೆ ವಾಗ್ವಾದ ನಡೆದಿದೆ. ಪುರುಷ ಮತ್ತು ನಿರ್ವಾಹಕನ ನಡುವೆ ನಡೆದ ವಾಗ್ವಾದಕ್ಕೆ ಪ್ರತೀಕಾರವಾಗಿ ವಿಜಯಪುರದ ಪುರುಷ ತಮ್ಮ ಜೊತೆಗೆ ಆಗಮಿಸಿದ ಮಹಿಳೆಯಿಂದ ನಿರ್ವಾಹಕನ ಮೇಲೆ ಹಲ್ಲೆ ಮಾಡಲು ಸೂಚಿಸಿ ನಿರ್ವಾಹಕನ ಶರ್ಟ ಹಿಡಿದು ಜಗ್ಗಾಡಿ ಬಡಿದ ಘಟನೆ ನಡೆದಿದೆ.  


ಈ ಕುರಿತು ನಿರ್ವಾಹಕ ಬಸವರಾಜ ಭದ್ರನ್ನವರ ಮಾದ್ಯಮದವರೊಂದಿಗೆ ಮಾತನಾಡಿ, ಬಸ್ ಹತ್ತುವ ವೇಳೆ ಬೇಗನೆ ಹತ್ತಲು ಸೂಚಿಸಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. ಕೆಲವರು ನಮ್ಮ ಬಸ್ಸಿನಲ್ಲಿ ಹತ್ತಿದ ನಂತರ ಇನ್ನು ಕೆಲವರು ಬರುತ್ತಿದ್ದಾರೆ ಸ್ವಲ್ಪ ಸಮಯದವರೆಗೆ ಬಸ್ ನಿಲ್ಲಿಸಬೇಕೆಂದು ಒತ್ತಾಯಿಸಿದರು. ನಮಗೆ ಮುಂದೆ ತಡವಾಗುತ್ತದೆ ಹಿಂದೆ ಇನ್ನು ಸಾಕಷ್ಟು ಬಸ್ಸಗಳಿವೆ ಅದರಲ್ಲಿ ಅವರು ಬರುತ್ತಾರೆ ನೀವು ಹತ್ತಿ ಎಂದು ಹೇಳಿದ್ದಕ್ಕೆ ಎಂಟು ಜನರ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ನನ್ನ ಮೇಲೆ ಮಹಿಳೆಯರಿಂದ ಹಲ್ಲೆ ಮಾಡಲು ಹೇಳಿ ಬಸ್ಸಿನ ಸೀಟ ಮೇಲೆ ಕೆಡವಿ ನನಗೆ ಬಾಯಿಗೆ ಬಂದಂತೆ ಬೈದು ಕಾಲಿನಿಂದ ಒದ್ದು, ಎಲ್ಲೆಂದರಲ್ಲಿ ಹೊಡೆಯಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಸವದತ್ತಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರ್ವಾಹಕ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. 

ಈ ಕುರಿತು ಸವದತ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಳ್ಳುತ್ತಿದ್ದಾರೆ. 


ಸುದ್ದಿ ಓದಿ