ಕುಷ್ಟಗಿ

12ರಂದು ಗುರುರಾಯರ ಆರಾಧನೆ ಮಹೋತ್ಸವ

12ರಂದು ಗುರುರಾಯರ ಆರಾಧನೆ ಮಹೋತ್ಸವ

ಕುಷ್ಟಗಿ 08: ಮಂತ್ರಾಲಯ ರಾಘವೇಂದ್ರಸ್ವಾಮಿ ಅವರ 351ನೇ ಆರಾಧನಾ ಮಹೋತ್ಸವದ ನಿಮಿತ್ತ ಆ. 12ರಿಂದ 14ರವರೆಗೆ ಇಲ್ಲಿಯ ರಾಘವೇಂದ್ರಸ್ವಾಮಿ ಮಠದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  

ಪ್ರತಿದಿನ ಬೆಳಿಗ್ಗೆ ಮಠದಲ್ಲಿ ಸುಪ್ರಭಾತ, ರಾಯರ ಅಷ್ಟೋತ್ತರ, ಪಂಚಾಮೃತ ಅಭಿಷೇಕ, ನೈವೇದ್ಯ, ಅಲಂಕಾರ, ಹಸ್ತೋದಕ ಮತ್ತು ಸಂಜೆ ಭಜನೆ, ಮಹಾಮಂಗಳಾರತಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುವವು.  

ಆ.12ರ ಪೂರ್ವಾರಾಧನೆಯ ದಿನ ಬೆಳಿಗ್ಗೆ 9ಗಂಟೆಗೆ ರಾಘವೇಂದ್ರ ಅಷ್ಟಾಕ್ಷರ ಮಂತ್ರ ಹೋಮ, ರಾತ್ರಿ 7.30ಕ್ಕೆ ಧಾರವಾಡದ ಸಂಗೀತ ಕಲಾವಿದ ಜಯತೀರ್ಥ ಮೇವುಂಡಿ ಅವರಿಂದ ದಾಸವಾಣಿ ಮತ್ತು ಹಿಂದುಸ್ಥಾನಿ ಶಾಶ್ತ್ರೀಯ ಸಂಗೀತ. ಆ.13 ರಂದು ಮಧ್ಯಾರಾಧನೆ ನಿಮಿತ್ತ ಪವಮಾನಹೋಮ ನಡೆಯುವುದು. ಅಲ್ಲದೆ ಪಂಡಿತರಿಂದ ಆ.12-13 ರಂದು ವಿಶೇಷ ಉಪನ್ಯಾಸ ಕಾರ್ಯಕ್ರಮ ಇರುವುದು. ಉತ್ತರಾರಾಧನೆ (ಆ.14) ಬೆಳಿಗ್ಗೆ 11 ಗಂಟೆಗೆ ರಾಯರ ರಥೋತ್ಸವ ಜರುಗುವುದು.   

ಶ್ರೀಕೃಷ್ಣ  ಜನ್ಮಾಷ್ಟಮಿ: ಆ. 19ರಂದು ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ವಿವಿಧ ಧಾರ್ಮಿಕ ಆಚರಣೆಗಳು ರಾಘವೇಂದ್ರಸ್ವಾಮಿ ಮಠದಲ್ಲಿ ಜರುಗಲಿವೆ. ಅಂದು ರಾತ್ರಿ 12.10ಕ್ಕೆ ಅರ್ಘ್ಯ ಸಮರೆ​‍್ಣಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಆ. 20ರಂದು ಬೆಳಿಗ್ಗೆ ರಥೋತ್ಸವ ನೆರವೇರುವುದು. ಆ.15-19ರವರೆಗೆ ಪಂಡಿತರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವದ ಪ್ರಕಟಣೆ ತಿಳಿಸಿದೆ. 


ಸುದ್ದಿ ಓದಿ