ಅಪ್ಪು ಅಭಿಮಾನಿ ಸಿದ್ದು ಮಲ್ಲಾಪುರ: ಸಮಾಧಿ ದರ್ಶನಕ್ಕೆ ಸೈಕಲ್ ಏರಿದ!
ಲೋಕದರ್ಶನ ವರದಿ
ರಾಣೇಬೆನ್ನೂರು 15: ಪುನೀತ್ ರಾಜಕುಮಾರ ಅವರ ಅಪ್ಪಟ ಅಭಿಮಾನಿ ತಾಲೂಕಿನ ಹಿರೇಬಿದರಿ ಗ್ರಾಮದ ಯುವಕ ಸಿದ್ದು ಮಲ್ಲಾಪರ ಇತನೂ ಅಪ್ಪು ಸಮಾದಿ ದರ್ಶನಕ್ಕೆ ತನ್ನ ಸೈಕಲ್ ಏರಿ ಪ್ರಯಾಣ ಮಾಡಿ ತನ್ನ ಅಭಿಮಾನ ಮೇರೆದು ಸಾರ್ವಜನಿಕರ ಗಮನ ಸೆಳೆದಿದ್ದಾನೆ.
ತಾಲೂಕಿನ ಹಿರೇಬಿದರಿ ಗ್ರಾಮದ ಯುವಕ ಸಿದ್ದು ಮಲ್ಲಾಪುರ ಇತನಿಗೆ ದೂಡ್ಮನೆ ಕುಟುಂಬದ ಶಿವರಾಜಕುಮಾರ ರಾಘವೇಂದ್ರ ರಾಜಕುಮಾರ ಸೇರಿದಂತೆ ಎಲ್ಲರು ತುಂಬಾ ಹತ್ತಿರದವರಾಗಿದ್ದಾರೆ. ಪುನೀತ್ ರಾಜಕುಮಾರ ಅವರ ಹುಟ್ಟು ಹಬ್ಬಕ್ಕೆ ಪ್ರತೀ ವರ್ಷವು ಚಾಚು ತಪ್ಪದೇ ರೈಲನ್ನೇರಿ ಬೆಂಗಳೂರಿಗೆ ಹೋಗಿ ಭೇಟಿ ಮಾಡಿ ಬರುತ್ತಿದ್ದ, ಆದರೆ ಇತ್ತೀಚೆಗಷ್ಟೆ ಇಹಲೋಕ ತ್ಯಜಿಸಿದ ಅಪ್ಪು ದರ್ಶನಕ್ಕಾಗಿ ತನ್ನ ಮೈ ಮೇಲೆ ಅಪ್ಪು ಚಿತ್ರ ಬರೆಸಿಕೂಂಡು ಸೈಕಲ್ ಮೂಲಕ ಬೆಂಗಳೂರು ತಲುಪಿದ್ದರೂ ಸಹ ಅಂತೀಮ ದರ್ಸನಕ್ಕೆ ಅವಕಶ ಸಿಕ್ಕಿರಲಿಲ್ಲ. ಇದರಿಂದ ಇತನೂ ಸಾಕಷ್ಟು ನೋವು ಅನುಭವಿಸಿದ್ದ, ಇದೀಗ ಅಪ್ಪು ಸಮಾಧಿ ದರ್ಶನಕ್ಕೆ 300 ಕ್ಕೂ ಹೆಚ್ಚು ಕಿಲೋಮೀಟರ್ ಸೈಕಲ್ ತುಳಿದು ಕೂನೆಗೂ ಅಪ್ಪು ಸಮಾಧಿ ದರ್ಶನ ಮಾಡಿದ್ದಾನೆ.
ನಗರದಿಂದ ಸಿದ್ದು ಮಲ್ಲಾಪುರ ಅವರನ್ನು ನಗರದ ಒಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಬುರಡಿಕಟ್ಟಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಮತ್ತು ಅಪ್ಪು ಅಭಿಮಾನಿಗಳು ಆತನಿಗೆ ಶುಭಾಶಯ ಕೋರಿ ಬೀಳ್ಕೊಟ್ಟಿದ್ದರು.