ಸೌಂದತ್ತಿ

ಸತ್ತಿಗೇರಿ ಏತ ನೀರಾವರಿ ಯೋಜನೆಗೆ ಅನುಮೋದನೆ: ರತ್ನಕ್ಕಾ ಆನಂದ ಮಾಮನಿಗೆ ಸನ್ಮಾನ

ಸತ್ತಿಗೇರಿ ಏತ ನೀರಾವರಿ ಯೋಜನೆಗೆ ಅನುಮೋದನೆ: ರತ್ನಕ್ಕಾ ಆನಂದ ಮಾಮನಿಗೆ ಸನ್ಮಾನ

ಸವದತ್ತಿ 25: ತಾಲೂಕಿನ ಸತ್ತಿಗೇರಿ ಏತ ನೀರಾವರಿ ಯೋಜನೆಗೆ ಈಗ ಸಚಿವ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಈ ಯೋಜನೆ ಸಫಲಗೊಳ್ಳಲು ದಿ.ಆನಂದ ಮಾಮನಿಯವರ ಪ್ರಯತ್ನ ಪ್ರಮುಖ ಪಾತ್ರವಹಿಸಿದೆ ಎಂದು ಗ್ರಾಂ.ಪಂ ಸದಸ್ಯ ಗುರು ವಾಲಿ ಹೇಳಿದರು. 

ಪಟ್ಟಣದ ದಿ.ಆನಂದ ಮಾಮನಿಯವರ ನಿವಾಸದಲ್ಲಿ ಸತ್ತಿಗೇರಿ ಭಾಗದ ರೈತರು ಮತ್ತು ಮುಖಂಡರು ಮಾಮನಿಯವರ ಪತ್ನಿ ರತ್ನಕ್ಕಾ ಆನಂದ ಮಾಮನಿಯವರಿಗೆ ಅಭಿನಂದಿಸಿ ಮಾತನಾಡಿದರು. 

ಹಲವಾರು ವರ್ಷಗಳಿಂದ ಈ ಯೋಜನೆಯ ಹೋರಾಟ ನಡೆದುಕೊಂಡು ಬಂದಿದ್ದು, ಆನಂದ ಮಾಮನಿಯವರ ನಿರಂತರ ಪರಿಶ್ರಮದಿಂದ ನಮ್ಮ ಭಾಗದ ರೈತರಿಗೆ ಸೂಕ್ತ ಅನುಕೂಲತೆ ಒದಗಿ ಬಂದಿದೆ ಎಂದರು. 

ರತ್ನಕ್ಕಾ ಆನಂದ ಮಾಮನಿ ಮಾತನಾಡಿ, ಸತ್ತಿಗೇರಿ ಏತ ನೀರಾವರಿಯ ಕನಸು ಇಂದು ಈಡೇರುತ್ತಿದ್ದು, ಘಟಪ್ರಭಾ ನದಿಯ ನೀರಿನಿಂದ ಸತ್ತಿಗೇರಿ ಏತ ನೀರಾವರಿ ಯೋಜನೆಗೆ 546 ಕೋಟಿ ರೂ.ಗಳ ಅನುದಾನ ಬಳಕೆ ಮಾಡಲಾಗುತ್ತಿದೆ ಎಂದರು. ಈ ಯೋಜನೆಯಿಂದ ಇಟ್ನಾಳ, ಸತ್ತಿಗೇರಿ, ಕುರಬಗಟ್ಟಿ, ಗುಡಮಕೇರಿ, ಸೊಪ್ಪಡ್ಲ, ಕೋರಕೊಪ್ಪ ಗ್ರಾಮದ 6678 ಹೆಕ್ಟೇರ ಪ್ರದೇಶಕ್ಕೆ ನೀರಾವರಿ ದೊರಕಲಿದೆ ಎಂದರು. 

ದುಂಡಪ್ಪ ನಾರಗುಣ್ಣವರ, ಶಿವಾನಂದ ಬಳಿಗೇರ, ಸುರೇಶ ನಂದಿ, ಬಸಲಿಂಗಪ್ಪ ಯರಗಣವಿ, ಗೌಡಪ್ಪ ನುಗ್ಗಾನಟ್ಟಿ, ಬಿ.ಟಿ.ಬಳಿಗಾರ, ವೆಂಕಟೇಶ ಮಿಲ್ಲಾನಟ್ಟಿ, ಈರಣ್ಣ ಹೊಸಮನಿ ಉಪಸ್ಥಿತರಿದ್ದರು. 


ಸುದ್ದಿ ಓದಿ