ರಾಣೆಬೆನ್ನೂರ

ಕೆರೆ ತುಂಬಿಸಲು 206 ಕೋಟಿ ರೂ. ಯೋಜನೆಗೆ ಸಂಪುಟದ ಅನುಮೋದನೆ

ಕೆರೆ ತುಂಬಿಸಲು 206 ಕೋಟಿ ರೂ. ಯೋಜನೆಗೆ ಸಂಪುಟದ ಅನುಮೋದನೆ

ರಾಣೀಬೆನ್ನೂರ 16: ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾ:ನಲ್ಲಿ 18 ಕೆರೆಗಳನ್ನು ತುಂಬಿಸಲು 206 ಕೋಟಿ ರೂ. ಯೋಜನೆಗೆ ಸಂಪುಟದ ಅನುಮೋದನೆ ನೀಡಿದೆ. "ವಿಧಾನಸೌಧದ ಆವರಣದಲ್ಲಿ ಬಸವೇಶ್ವರ ಪ್ರತಿಮೆ ನಿರ್ಮಿಸಲು ಸಂಪುಟ ಒಪ್ಪಿಗೆ ಕೊಟ್ಟಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಾಮಗಾರಿ ವೆಚ್ಚವನ್ನು ನಿರ್ಧಾರ ಮಾಡಲಿದೆ" ಎಂದು ಕಾನೂನು ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. 

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರ​‍್ಪ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಅವರು ಮಾತನಾಡಿದರು. "ಬಸವಣ್ಣನವರು ವಚನ ಬರೆಯುವ ಮಾದರಿಯಲ್ಲಿ ಪ್ರತಿಮೆ ನಿರ್ಮಿಸಲು ಚಿಂತನೆ ಮಾಡಲಾಗಿದೆ' ಎಂದು ಇದೇ ಸಂದರ್ಭದಲ್ಲಿ ಬೊಮ್ಮಾಯಿ ವಿವರಿಸಿದರು. ಇದರೊಂದಿಗೆ ಇನ್ನು ಹಲವು ಆಡಳಿತಾತ್ಮಕ ನಿರ್ಣಯ ಗಳನ್ನು ಇಂದು ನಡೆದ ರಾಜ್ಯ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳ ಲಾಗಿದೆ. ಅವುಗಳು ಹೀಗಿವೆ. ಗದಗ ಪಶುಸಂಗೋಪನಾ ಕಾಲೇಜಿನ ಎರಡನೇ ಹಂತ ಕಾಮಗಾರಿಗೆ ಒಪ್ಪಿಗೆ. ಪ್ರತಿ ಜಿಲ್ಲೆಗೆ ಗೋಶಾಲೆ ತೆರೆಯಲು ತೀರ್ಮಾನ, ಮೊದಲ ಹಂತದಲ್ಲಿ 15 ಕೋಟಿ ರೂ. ಬಿಡುಗಡೆ. ಪ್ರವಾಹ ಸಂದರ್ಭದಲ್ಲಿ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಲು ಅನುಮೋದನೆ. ಸಹಕಾರ ಸಂಘಗಳ ಚುನಾ ವಣೆ ಮಾಡಲು ಅವಕಾಶ ಕಲ್ಪಿಸಲು ಸಂಪುಟದ ತೀರ್ಮಾನ. ಮುಂಗಾರು ಅಧಿವೇಶನ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ, ಸಂಪುಟ ಸಭೆಯಲ್ಲಿ ಅಧಿವೇಶನ ಬಗ್ಗೆ ಚರ್ಚೆ ಆಗಿಲ್ಲವೆಂದು ಸಚಿವ ಬೊಮ್ಮಾಯಿ ತಿಳಿಸಿದ್ದಾರೆ. 


ಸುದ್ದಿ ಓದಿ