ಮಾಜಿ ಸಿಎಂ ಬೊಮ್ಮಾಯಿಯವರ ನಿವಾಸದಲ್ಲಿ ಕೃತಜ್ಞತೆ ಅಭಿನಂದನಾ ಕಾರ್ಯಕ್ರಮ
ಈ ಕ್ಷೇತ್ರದಲ್ಲಿ ಜನರ ಕಪಿಮುಷ್ಟಿಯಲ್ಲಿ ರಾಜಕಾರಣವಿದೆ, ವ್ಯಕ್ತಿಯ ಕಪಿಮುಷ್ಟಿಯಲ್ಲಿ ಅಲ್ಲ : ಬೊಮ್ಮಾಯಿ
ಶಿಗ್ಗಾವಿ 25: 2023 ಚುನಾವಣೆಯನ್ನು ಮತದಾರರೇ ಉತ್ಸಾಹದಿಂದ ಓಡಾಡಿ ಚುನಾವಣೆ ಮಾಡಿದ್ದು ಸಂತೋಷವಾಗುತ್ತದೆ ಟೀಮ್ ವರ್ಕ ಆಗಿ ಎಲ್ಲರೂ ಕೆಲಸ ಮಾಡಿದ್ದೀರಿ ಪ್ರೀತಿ ತೋರಿಸಿದ್ದೀರಿ ಬೆಂಬಲ ಸೂಚಿಸಿದ್ದೀರಿ ನಿಮ್ಮ ಋಣದಲ್ಲಿದ್ದೇನೆ, ನಿಮ್ಮ ನೆರಳಿನಲ್ಲಿದ್ದೇನೆ ಎಲ್ಲಾ ಸಮುದಾಯಗಳು ಒಗ್ಗಾಟ್ಟಾಗಿ ಆಶೀರ್ವಾದ ಮಾಡಿದ್ದಾರೆ ಕಳೆದ ಮೂರು ಚುನಾವಣೆಯಲ್ಲಿ ಬೆಂಬಲ ನೀಡದಿದ್ದವರು ಸಹ ಈ ಭಾರಿ ಬೆಂಬಲ ಕೊಟ್ಟಿದ್ದಾರೆ ಎಲ್ಲರಿಗೂ ಅಭಿನಂದನೆಗಳು ತಿಳಿಸಿದ ಮಾಜಿ ಸಿ.ಎಂ. ಬಸವರಾಜ ಬೊಮ್ಮಾಯಿ.
ಪಟ್ಟಣದ ಹೊರವಲಯದಲ್ಲಿರುವ ಬೊಮ್ಮಾಯಿಯವರ ನಿವಾಸದಲ್ಲಿ ನಡೆದ ಮತದಾರರಿಗೆ ಕೃತಜ್ಞತೆ ಹಾಗೂ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ದ್ವೇಷದಿಂದ ಏನು ಸಾಧ್ಯವಾಗುವುದಿಲ್ಲ ಪ್ರೀತಿಯಿಂದ ಮಾತ್ರ ಎಲ್ಲರನ್ನ ಗೆಲ್ಲಲು ಸಾಧ್ಯ ಚುನಾವಣೆ ಬಂದಾಗ ಸ್ಪರ್ದೆ ಇರುತ್ತದೆ ಆದ್ರೆ ಜನರ ನಡುವೆ ಯಾವುದೇ ಸ್ಪರ್ದೆ ಇರಬಾರದು ಪ್ರೀತಿಯಿಂದ ಮಾತ್ರ ಜಗತ್ತು ಗೆಲ್ಲಬಹುದು ಅಲ್ಲದೇ ಈ ಕ್ಷೇತ್ರದಲ್ಲಿ ಜನರ ಕಪಿಮುಷ್ಟಿಯಲ್ಲಿ ರಾಜಕಾರಣವಿದೆ ಯಾವುದೇ ವ್ಯಕ್ತಿಯ ಕಪಿಮುಷ್ಟಿಯಲ್ಲಿ ಅಲ್ಲ ಈ ಕ್ಷೇತ್ರದ ರಾಜಕಾರಣ ಇಲ್ಲ ಭ್ರಮೆಯಲ್ಲಿ ರಾಜಕಾರಣ ಮಾಡಿದವರು ಯಶಸ್ವಿಯಾಗಿಲ್ಲ, ಈ ಆಶೀರ್ವಾದ ಕಠಿಣ ಪರಿಶ್ರಮದಿಂದ ಸಿಕ್ಕಿದೆ ಹೊಸ ರಾಜಕೀಯ ಸಂಸ್ಕೃತಿ ಈ ಕ್ಷೇತ್ರದಲ್ಲಿದೆ ಪ್ರಾಮಾಣಿಕವಾಗಿ ಜನಸೇವೆ ಮಾಡಬೇಕು ಹಾಗೂ ನನ್ನ ಜನರಿಗಾಗಿ ಯಾವುದೇ ಹಂತಕ್ಕೆ ಮಟ್ಟಕ್ಕೆ ಬರಲು ತಯಾರಿದ್ದಿನಿ ಅಭಿವೃದ್ಧಿ ರಥಕ್ಕೆ ಅಡ್ಡಿಪಡಿಸಿದ್ರೆ ಯಾರ್ಪಂಗು ಕೇಳಲ್ಲ ರಾಜಕಾರಣ ಮಾಡಿ, ಅಡ್ಡಗಾಲು ಹಾಕುವ ರಾಜಕಾರಣ ಒಳ್ಳೆಯದಲ್ಲ ಇದು ನಿಮಗೆ ನಿಮ್ಮ ಸರಕಾರಕ್ಕೆ ಒಳ್ಳೆಯದಲ್ಲ ಎಂದರು.
ಪ್ರಜೆಗಳಿಂದ ಆಯ್ಕೆಯಾದವರು ನಿಜವಾದ ನಾಯಕರು ಅಲ್ಲದೇ ಬೇರೆ ಬೇರೆ ರಾಜ್ಯದಲ್ಲಿ ರಾಜಕಾರಣ ವಿಭಿನ್ನವಾಗಿದೆ ಆದರೇ ಶಿಗ್ಗಾವಿ ರಾಜಕಾರಣ ಬೇರೆಯಾಗಿದೆ ಹಾಗೂ ನಾಯಕರನ್ನು ಆಯ್ಕೆ ಮಾಡುವ ತಾವುಗಳು ನಿಜವಾದ ನಾಯಕರು ರಾಜಕಾರಣದಲ್ಲಿ ಸ್ಥಾನಗಳು ಬರುತ್ತವೆ ಗೌರವ ಉಳಿಸಿಕೊಳ್ಳುವ ರೀತಿ ಕೇಲಸ ಮಾಡಿದ್ದೇನೆ. ರಾಜ್ಯದ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಕಾಂಗ್ರೆಸ್ ನವರು ಗ್ಯಾರಂಟಿ ಕೊಟ್ಟಿದ್ದಾರೆ ಮೊದಲ ಸಂಪುಟ ಸಭೆಯಲ್ಲಿ ಗ್ಯಾರಂಟಿ ಆದೇಶ ಮಾಡಿ ಮನೆ ಮನೆಗೆ ಮುಟ್ಟಿಸುತ್ತೇವೆ ಅಂದಿದ್ದರು ನಿಜವಾದ ಕಾಂಗ್ರೆಸ್ ಬಣ್ಣ ಈಗ ಬಯಲಾಗುತ್ತಿದೆ ಸಿಎಂ ಯಾರಾಗಬೇಕು ಎಂದು ಒಂದುವಾರ ಬಡದಾಟ ಮಂತ್ರಿಯಾದವರಿಗೆ ಖಾತೆ ಇಲ್ಲ, ಈಗ ಮಂತ್ರಿಯಾಗಲು ಬಡದಾಟ ಎಲ್ಲವನ್ನು ಮುಖ್ಯಮಂತ್ರಿ ಕೈಯಲ್ಲಿ ಇಟ್ಟುಕೊಂಡು ಕುಂತಿದ್ದಾರೆ ಬಹಳ ಜನ ಮಂತ್ರಿ ಕನಸು ಕಾಣ್ತಿದ್ದಾರೆ ಮಂತ್ರಿಯಾದವರು ಖಾತೆ ಕನಸು ಕಾಣ್ತಿದ್ದಾರೆ ಜನರ ಕನಸು ನನಸು ಮಾಡಲ್ಲ ಇವರು ನಾನು ಹಿಂದೆ ಹೇಳಿದ್ದೆ ಚುನಾವಣೆವರೆಗೆ ಗ್ಯಾರಂಟಿ ಆಮೇಲೆ ಗಳಗಂಟಿ ಅಂತಾ ಕೋವಿಡ್ ನಂತರ ನಾಡನ್ನ ಸದೃಢ ಮಾಡಿದ್ದು ನಾವು ಇವರು ಬಂದು ಎಲ್ಲವನ್ನ ನಿಲ್ಲಿಸಿದ್ದಾರೆ ರಸ್ತೆ, ಕುಡಿಯುವ ನೀರು, ಆಸ್ಪತ್ರೆ ಕೇಲಸ ನಿಲ್ಲಿಸಿದ್ದಾರೆ ಸಿಎಂ ರಾಜ್ಯದ ಮಾಲೀಕರಲ್ಲ, ಎಚ್ಚರಿಕೆಯಿಂದ ಸರಕಾರ ನಡೆಸಬೇಕು ಶಿಗ್ಗಾವಿ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭವಾಗಿತ್ತು ಈ ವೇಗ ನಿಲ್ಲಲು ಕೊಡುವುದಿಲ್ಲ ಅಭಿವೃದ್ಧಿ ಕೇಲಸ ನಿಲ್ಲಿಸಲು ಸಾಧ್ಯವಿಲ್ಲ ಕಟ್ಟೆ ಮೇಲೆ ಕುಳಿತು ನಾಲ್ಕು ಜನ ನಮ್ಮ ಸರಕಾರ ಅಂದ್ರೆ ನಡೆಯುವುದಿಲ್ಲ, ನಾವು ಬಿಡುವುದಿಲ್ಲ ಇದು ಎಲ್ಲರ ಸರಕಾರ, ಒಂದು ಪಕ್ಷ ವ್ಯಕ್ತಿಯ ಸರಕಾರ ಅಲ್ಲ ಕ್ಷೇತ್ರದ ಅಭಿವೃದ್ಧಿ ಕೆಲಸದಲ್ಲಿ ಯಾರಾದ್ರು ಅಡ್ಡ ಬಂದ್ರೆ ನಾನು ಸಹಿಸುವುದಿಲ್ಲ ಐದು ಜನ ಸಿಎಂ ಜೊತೆ ಕೇಲಸ ಮಾಡಿ ಆಮೇಲೆ ಸಿಎಂ ಆದವನು ನಾನು ಎಲ್ಲೇಲ್ಲಿ ಏನು ನಡೆಯುತ್ತದೆ ಎನ್ನುವುದು ಗೊತ್ತಿದೆ ಎಂದರು.
ಶಿಗ್ಗಾವಿ ಕಾಂಗ್ರೆಸ್ ಮುಖಂಡರ ವಿರುದ್ದ ಬೊಮ್ಮಾಯಿ ವಾಗ್ದಾಳಿ ಅಭಿವೃದ್ಧಿ ವಿಚಾರಕ್ಕೆ ಅಡ್ಡಿಪಡಿಸದಂತೆ ಕೈ ನಾಯಕರಿಗೆ ವಾನಿಂರ್ಗ್ ಮಾಡಿದ ಬೊಮ್ಮಾಯಿ ಇನ್ನು ಮುಂದೆ ವಾರದಲ್ಲಿ ಮೂರು ದಿನಕ್ಷೇತ್ರದಲ್ಲಿ ಅಡ್ಡಾಡುತ್ತೇನೆ ನಿಮಗೆ ಬೇಸರವಾಗುವ ವರೆಗೆ ಅಡ್ಡಾಡುತ್ತೇನೆ ಜೀವನದ ಕೊನೆಯುಸಿರಿನವರೆಗೆ ನಿಮ್ನ ಸೇವೆ ಮಾಡುತ್ತೇನೆ ನಾಲ್ಕೈದು ತಿಂಗಳಲ್ಲಿ ರಾಜ್ಯದ ರಾಜಕೀಯ ಪರಿಸ್ಥಿತಿ ಸಂಪೂರ್ಣ ಬದಲಾಗುತ್ತದೆ ದ್ಷೇಷದ ರಾಜಕಾರಣ ಪ್ರಾರಂಭ ಮಾಡಿದ್ದಾರೆ ನಮ್ಮ ನಾಯಕರ ಮೇಲೆ ಕೇಸ್ ಹಾಕುವುದು, ಕಾರ್ಯಕರ್ತರ ಮೇಲೆ ಹಲ್ಲೆ ಮಾಡುವುದನ್ನ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭಧಲ್ಲಿ ಶಿವರಾಜ ಸಜ್ಜನ, ಶ್ರೀಕಾಂತ ದುಂಡಿಗೌಡ್ರ, ಶಿವಾನಂದ ಮ್ಯಾಗೇರಿ, ರೇಣುಕನಗೌಡ ಪಾಟೀಲ, ಶೋಭಾ ನಿಸ್ಸಿಮಗೌಡ್ರ, ರೂಪಾ ಬನ್ನಿಕೊಪ್ಪ ಸೇರಿದಂತೆ ಕ್ಷೇತ್ರದ ಎಲ್ಲ ಸಮಾಜದ ಭಾಂದವರು ಉಪಸ್ಥಿತರಿದ್ದರು.