ಪಿಕೆಪಿಎಸ್ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನ
ತಾಳಿಕೋಟಿ 14 :ಪಟ್ಟಣದ ವಿವಿಧೋಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ದುಂಡಪ್ಪ ಗೌಡ ಪಾಟೀಲ್ ಹಾಗೂ ಉಪಾಧ್ಯಕ್ಷ ದಸ್ತಗೀರ ಸಾಬ್ ಕೆಂಭಾವಿ ಇವರನ್ನು ಜನ ಸೇವಾ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು ಇತ್ತೀಚೆಗೆ ನಡೆದ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ದುಂಡಪ್ಪ ಗೌಡ ಪಾಟೀಲ ಉಪಾಧ್ಯಕ್ಷ ದಸ್ತಗಿರ ಕೆಂಭಾವಿ ಇವರನ್ನು ವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಪಟ್ಟಣದ ಕ್ರಿಯಾಶೀಲ ಸಮಾಜವಾ ಸಂಘಟನೆಯಾದ ಜನ ಸೇವಾ ಸಂಘದ ಪದಾಧಿಕಾರಿಗಳು ಇವರನ್ನು ಸನ್ಮಾನಿಸಿದರು. ಈ ಸಮಯದಲ್ಲಿ ಜನ ಸೇವಾ ಸಂಘದ ಅಧ್ಯಕ್ಷ ಅಮಿತ್ ಸಿಂಗ್ ಮನಗೂಳಿ ಸಂಘದ ಪದಾಧಿಕಾರಿಗಳಾದ ರಾಜು ಹಜೇರಿ .ವಿಠಲ್ ಹಜೇರಿ .ನಿತಿನ್ ವಿಜಾಪುರ. ವಿಶ್ವನಾಥ ಹಜೇರಿ. ಶಂಕರ ಕಟ್ಟಿಮನಿ .ಕಾಶಿನಾಥ ಪರಂಪೂರ .ಗೌತಮ್ ಪತ್ತೆಪೂರ . ಮುತ್ತು ವಡ್ಡರ. ವಸಂತ ಸಿಂಗ ಹಜೇರಿ. ಸಂತೋಷ ಹಜೇರಿ .ರಾಹುಲ ಮೂಲಿಮನಿ.ಬಬಲು ವಿಜಾಪುರ .ರಾಹುಲ್ ನರಗುಂದ .ಕನ್ನಯ್ಯ ವಿಜಾಪುರ. ಕಾರ್ತಿಕ ಗೌಡಗೇರಿ ಸಂದೀಪ ರಜಪೂತ ಇದ್ದರು.