ಕುಷ್ಟಗಿ

ಸದ್ಯದಲ್ಲೆ ನೂತನ ತಾಲೂಕು ಪದಾಧಿಕಾರಿಗಳ ನೇಮಕ ಪ್ರಕ್ರಿಯೆ: ವೆಂಕಟೇಶ ಕುಲಕರ್ಣಿ

ಸದ್ಯದಲ್ಲೆ ನೂತನ ತಾಲೂಕು ಪದಾಧಿಕಾರಿಗಳ ನೇಮಕ ಪ್ರಕ್ರಿಯೆ: ವೆಂಕಟೇಶ ಕುಲಕರ್ಣಿ

ಕುಷ್ಟಗಿ: ಸದ್ಯದಲ್ಲೆ ನೂತನ ತಾಲೂಕು ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ಜಿಲ್ಲಾ ಉಪಾಧ್ಯಕ್ಷ  ವೆಂಕಟೇಶ ಕುಲಕರ್ಣಿ ಹೇಳಿಕೆ  

ತಾಲ್ಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ನೇಮಕಕ್ಕೆ ಸಂಬಂಧಿಸಿದಂತೆ ಗುರುವಾರದಂದು ಕುಷ್ಟಗಿ ಹಳೇ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಪಾಧ್ಯಕ್ಷ ರಾದ ವೆಂಕಟೇಶ ಕುಲಕರ್ಣಿ ಅವರ ನೇತೃತ್ವದಲ್ಲಿ ಸಭೆ ನಡೆಸಿ ಮಾತನಾಡಿದವರು  

ಜಿಲ್ಲಾ ಸಮಿತಿಯ ಹಾಗೂ ರಾಜ್ಯ ಸಮಿತಿಯ ನಿರ್ದೇಶನದಂತೆ ಕುಷ್ಟಗಿ ತಾಲೂಕಿನ ಸರ್ವ ಪದಾಧಿಕಾರಿಗಳನ್ನು ನೇಮಕ ಮಾಡುವ ಪ್ರಕ್ರಿಯೆ ಬಾಕಿ ಉಳಿದಿದ್ದು ಸದ್ಯದಲ್ಲೆ ಹೊಸ ತಾಲೂಕು ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ಎಲ್ಲರ ವಿಶ್ವಾಸದೊಂದಿಗೆ ಸಂಪೂರ್ಣ ಗೊಳಿಸಲಾಗುವುದು. ಅದ್ಯಕ್ಷ ಆಕಾಂಕ್ಷಿಗಳು ಹೆಚ್ಚಾದರೆ ವೈಯಕ್ತಿಕವಾಗಿ ಸಂಘದ  ಪ್ರತಿಯೊಬ್ಬ ಸದಸ್ಯರನ್ನು ಸಂಪರ್ಕ ಮಾಡಿ ಅಭಿಪ್ರಾಯ ಸಂಗ್ರಹಿಸಿ ಯಾರಿಗೆ ಹೆಚ್ಚಿನ ಒಲವು ಇದೆ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು. ಬರುವ ಜೂನ್ ತಿಂಗಳಲ್ಲಿ ಅಂತಿಮ ಸಭೆಯನ್ನು ಕರೆದು ಅಧಿಕೃತವಾಗಿ ಪದಾಧಿಕಾರಿಗಳ ನೇಮಕ ಮಾಡಲಾಗುವುದು ಎಂದರು. ಅಥವಾ ತಾಲುಕಿನ ಎಲ್ಲಾ ಸದಸ್ಯರು ಒಮ್ಮತಕ್ಕೆ ಬಂದು ತಾವು ಸೂಚಿಸುವ ಒಬ್ಬರನ್ನು ಅವಿರೋಧವಾಗಿ ಆಯ್ಕೆ ಮಾಡಿ ಮುಂದಿನ ಸಂಘದ ಚಟುವಟಿಕೆಗೆ ಸಹಕಾರ ನೀಡಲಾಗುತ್ತದೆ ಎಂದರು. ಇದೇ ವೇಳೆ ಸಭೆಯಲ್ಲಿ ಅಧ್ಯಕ್ಷರ-3 ಹಾಗೂ ಪ್ರಧಾನ ಕಾರ್ಯದರ್ಶಿ-2 ಆಕಾಂಕ್ಷಿಗಳು ತಮ್ಮ ನಿಲುವನ್ನು ವ್ಯಕ್ತಪಡಿಸಿ ಸಹಕರಿಸುವಂತೆ ಕೋರಿದರು.   

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ನಾರಾಯಣರಾವ್ ಕುಲಕರ್ಣಿ, ರಾಮಣ್ಣ ಬಂಡಿಹಾಳ, ಜಿಲ್ಲಾ ಕಾರ್ಯಾಕಾರಿ ಸಮಿತಿ ಸದಸ್ಯ ರವೀಂದ್ರ ಬಾಕಳೆ, ಅನೀಲ ಅಲಮೇಲ, ವಿಶ್ವನಾಥ ಸೊಪ್ಪಿಮಠ, ಬಸವರಾಜ ಪಲ್ಲೇದ, ವೆಂಕಟೇಶ ಕುಲಕರ್ಣಿ, ಅನೀಲಕುಮಾರ ಕಮ್ಮಾರ, ಶ್ರೀಕಾಂತ ಸರಗಣಾಚಾರಿ, ಪರಶಿವಮೂರ್ತಿ, ಶರಣಬಸವ ನವಲಹಳ್ಳಿ, ಭಿಮನಗೌಡ ಪಾಟೀಲ, ಸಂಗಮೇಶ ಲೂತಿಮಠ, ಶರಣಪ್ಪ ಲೈನದ, ಮಲ್ಲುಪರೂತಿ ಸೇರಿದಂತೆ ಉಪಸ್ಥಿತರಿದ್ದರು. 


ಸುದ್ದಿ ಓದಿ