ಸಾಲ ಸೌಲಭ್ಯಕ್ಕಾಗಿ ನಗರಸಭೆಯಿಂದ ಅರ್ಜಿ ಆಹ್ವಾನ
ಕಾರವಾರ: ಸರ್ಕಾರ್ಡೇ-ನಲ್ಮ್ಯೋಜನೆಯಡಿ 2021-22ನೇ ಸಾಲಿಗೆ ನಗರ ಸ್ವಯಂ ಉದ್ಯೋಗ ಕಾರ್ಯಕ್ರಮದಡಿ ವೈಯಕ್ತಿಕ, ಗುಂಪು ಕಿರು ಉದ್ದಿಮೆ ಹಾಗೂ ಮಹಿಳೆಯರ ಸ್ವಸಹಾಯ ಸಂಘದ ಬ್ಯಾಂಕ್ ಲಿಂಕ್ಯೋಜನೆಯಡಿ ಸಾಲ ಸೌಲಭ್ಯ ಪಡೆದುಕೊಳ್ಳಲು ಕಾರವಾರ ನಗರ ವ್ಯಾಪ್ತಿಯಲ್ಲಿನ ಬಡತನರೇಖೆಗಿಂತ ಕೆಳಗಿರುವಕುಟುಂಬದ(ಬಿಪಿಎಲ್) ಅರ್ಹ ನಿರುದ್ಯೋಗಿಯುವಕ/ಯುವತಿಯರಿಂದ ಅರ್ಜಿಆಹ್ವಾನಿಸಲಾಗಿದೆ.
ಆಸಕ್ತರುಕಾರವಾರ ನಗರಸಭೆಯಿಂದಅರ್ಜಿ ನಮೂನೆ ಪಡೆದುಕೊಂಡು ನಿಗದಿತಅರ್ಜಿ ನಮೂನೆ (ದ್ವಿ-ಪ್ರತಿ), ಜಾತಿ ಮತ್ತುಆದಾಯ ಪ್ರಮಾಣ ಪತ್ರ, ವಿದ್ಯಾರ್ಹತೆ ದಾಖಲಾತಿಗಳು, ಉದ್ದೇಶಿಸಿರುವ ವಟುವಟಿಕೆಯ ಬಗ್ಗೆ ಅನುಭವ ಹೊಂದಿದ್ದರೆ/ತರಬೇತಿ ಪಡೆದಿದ್ದರೆಅದರ ಪ್ರಮಾಣ ಪತ್ರ, ಸ್ಥಳಿಯ ನಿವಾಸಿ ಬಗ್ಗೆ ಗುರುತಿನ ದಾಖಲೆಗಳಾದ ಪಡಿತರಚೀಟಿ, ಚುನಾವಣಾಗುರುತಿನಚೀಟಿ, ವಾಸ್ತವ್ಯ ಪ್ರಮಾಣ ಪತ್ರ ಹಾಗೂ ಯೋಜನಾ ವರದಿಯೊಂದಿಗೆಅರ್ಜಿಯನ್ನು ಭರ್ತಿ ಮಾಡಿಅಗಸ್ಟ್23ರೊಳಗಾಗಿ ಸಲ್ಲಿಸಬಹುದು.
ಅವಧಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿದೂರವಾಣಿ ಸಂಖ್ಯೆ: 08382-227900ಗೆ ಸಂಪರ್ಕಿಸಬಹುದು ಎಚಿದು ಕಾರವಾರ ನಗರಸಭೆ ಪೌರಾಯುಕ್ತ ಆರ್.ಪಿ.ನಾಯ್ಕಪ್ರಕಟಣೆಯಲ್ಲಿ ತಿಳಿಸಿದ್ದಾರೆ.