ಕಾರವಾರ

ವಸತಿ ಶಾಲೆಗಳಲ್ಲಿ 6ನೇ ತರಗತಿಯ ಪ್ರವೇಶಕ್ಕೆ ಅರ್ಜಿ ಆಹ್ವಾನ

ವಸತಿ ಶಾಲೆಗಳಲ್ಲಿ 6ನೇ ತರಗತಿಯ ಪ್ರವೇಶಕ್ಕೆ ಅರ್ಜಿ ಆಹ್ವಾನ

ಕಾರವಾರ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿದೇಸಾಯಿ, ಕಿತ್ತೂರುರಾಣಿಚೆನ್ನಮ್ಮ, ಅಟಲ್ ಬಿಹಾರಿ ವಾಜಪೇಯಿ, ಡಾಅಂಬೇಡ್ಕರ್ ವಸತಿ ಶಾಲೆ, ಡಾ:ಬಿ.ಆರ್‌.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ಹಾಗೂ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಗಳಲ್ಲಿ 2021-22 ನೇ ಸಾಲಿನ 6 ನೇ ತರಗತಿಯ ಪ್ರವೇಶ ಪರೀಕ್ಷೆಗಾಗಿಅರ್ಜಿಆಹ್ವಾನಿಸಲಾಗಿದೆ. 

ಈಗಾಗಲೇ 5ನೇ ತರಗತಿಯಲ್ಲಿಉತ್ತೀರ್ಣರಾಗಿರುವ ಹಾಗೂ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವಆಸಕ್ತ ವಿದ್ಯಾರ್ಥಿಗಳು ಅಗಸ್ಟ್‌ 10ರ ವರೆಗೆಅರ್ಜಿ ಸಲ್ಲಿಸಬಹುದಾಗಿದೆ. ಸಪ್ಟೆಂಬರ್ 16 ಕ್ಕೆ ಪ್ರವೇಶ ಪರೀಕ್ಷೆ ನಡೆಸಲಾಗುವುದು.ಅರ್ಹ ಅಭ್ಯರ್ಥಿಗಳು ಪ್ರವೇಶ ಪತ್ರವನ್ನುಅಗಸ್ಟ್‌ 4 ರಿಂದ 13 ರೊಳಗೆ ಅರ್ಜಿ ಸಲ್ಲಿಸಿದ ವಸತಿ ಶಾಲೆಯಿಂದಡೌನ್‌ಲೋಡ್ ಮಾಡಿಕೊಳ್ಳುಳಬೇಕು. 

ಆಸಕ್ತ ವಿದ್ಯಾರ್ಥಿ ಮತ್ತು ಪೋಷಕರುಅರ್ಜಿ ಸಲ್ಲಿಸುವ ವಿಧಾನ ಹಾಗೂ ಮಾಹಿತಿ ಪುಸ್ತಕ 2021ನ್ನು ಪ್ರಾಧಿಕಾರದ ವೆಬ್‌ಸೈಟ್‌ಣಣಠಿ://ಞಜಚಿ.ಞಚಿಡಿ.ಟಿಛಿ.ಟಿ ನಲ್ಲಿ ಪರೀಶೀಲಿಸಬಹುದುಎಂದುಸಮಾಜಕಲ್ಯಾಣಇಲ್ಯಾಖೆಯ ಉಪ ನಿರ್ದೇಶಕಎಸ್ ಪುರುಷೋತ್ತಮ್‌ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ