ಅರ್ಜಿ ಆಹ್ವಾನ
ಗದಗ 13: ರೋಣ ಪುರಸಭೆ ವ್ಯಾಪ್ತಿಯಲ್ಲಿ ಬರುವ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ 2023-24 ನೇ ಸಾಲಿನ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ಎಸ್.ಎಂ.ಐ.ಡಿ ( ಸ್ವ ಸಹಾಯ ಮಹಿಳಾ ಗುಂಪು ರಚನೆ ), ಎಸ್.ಇ.ಪಿ (ಐ) ಸ್ವಯಂ ಉದ್ಯೋಗ ಕಾರ್ಯಕ್ರಮ ಬಡ್ಡಿ ಸಹಾಯಧನ, ಎಸ್.ಎಂ. ್ಘ ಐ.ಡಿ. (ಬ್ಯಾಂಕ್ ಲಿಂಕೇಜ) ಉಪಘಟಕದಡಿ ಗುರಿ ನಿಗದಿಪಡಿಸಿದೆ. 18 ರಿಂದ 45 ವರ್ಷ ವಯೋಮಿತಿಯುಳ್ಳ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಹಿಂದೆ ಪುರಸಭೆಯ ವತಿಯಿಂದ ಸದರ ಯೋಜನೆಯಡಿ ಸೌಲಭ್ಯ ಪಡೆದಿರಬಾರದು. ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನ ಡಿಸೆಂಬರ್ 20 ಆಗಿದ್ದು ಹೆಚ್ಚಿನ ಮಾಹಿತಿಗಾಗಿ ರೋಣ ಪುರಸಭೆ ಡೇ ನಲ್ಮ ವಿಭಾಗದಲ್ಲಿ ಕೇಳಿ ಪಡೆಯಬಹುದಾಗಿದೆ.