ಶಿಶುವಿನಹಾಳ ಶರೀಫರ ಮೂರ್ತಿ ಪ್ರತಿಷ್ಠಾಪನೆಗೆ ಮನವಿ
ಶಿಗ್ಗಾವಿ ನವೆಂಬರ್ 05: ತತ್ವಪದಗಳ ಮೂಲಕ ಭಾವೈಕ್ಯತೆ ಸಾರಿದ ಸಂತ ಶಿಶುವಿನಹಾಳ ಶರೀಫÀರ ಮೂರ್ತಿಯನ್ನು ಪಟ್ಟಣದ ಹಳೇ ಬಸ್ ನಿಲ್ದಾಣದ ಮುಂಭಾಗÀದಲ್ಲಿ ಪ್ರತಿಷ್ಠಾಪನೆ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ ಕುಮಾರ ಶೆಟ್ಟಿ ಬಣ)ದ ಕಾರ್ಯಕರ್ತರು ಪುರಸಭೆ ಅದ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಮಂಜುನಾಥ ಓಲೇಕಾರ ಮಾತನಾಡಿ ನಾಡಿಗೆ ಭಾವೈಕ್ಯತೆ ಸಾರಿದ ಸಂತ ಶಿಶುವಿನಹಾಳ ಶರೀಪರು ಕೇವಲ ಶಿಶುವಿನಹಾಳ ಗ್ರಾಮಕ್ಕೆ ಸೀಮಿತವಾಗಿರುವದು ವಿಷಾಧಕರ ಅಂತಹ ಶರಣರ ಮೂರ್ತಿಯನ್ನ ಶಿಗ್ಗಾವಿ ಪಟ್ಟಣದಲ್ಲಿ ಪ್ರತಿಷ್ಠಾಪಿಸಿ ಅವರಿಗೆ ಗೌರವ ನೀಡುವುದು ತಾಲ್ಲೂಕಾ ಆಡಳಿತದ ಕರ್ತವ್ಯವಾಗಿದೆ. ಶರೀಫರು ಜನಪದದ ಮೂಲಕ ಪರಿಚಯವಾಗಿದ್ದು ಪವಾಡಗಳ ಮೂಲಕ ಭಕ್ತರ ಮನೆಮಾತಾಗಿದ್ದಾರೆ. ಕೂಡಲೆ ಪುರಸಭೆ ಆಡಳಿತಾತ್ಮಕ ಠರಾವು ಮಾಡಿ ಹಳೇ ಬಸ್ ನಿಲ್ದಾಣದ ಮುಂಭಾಗದಲ್ಲಿ ಮೂರ್ತಿನ್ನು ಪ್ರತಿಷ್ಠಾಪಿಸಲು ಮುಂದಾಗಬೇಕು, ಅದೇ ರೀತಿ ನಗರಕ್ಕೆ ಪ್ರವೇಶಿಸುವ ರಸ್ತೆಗಳಿಗೆ ಶರೀಫರ ನಾಡಿಗೆ ಸ್ವಾಗತ ಕೋರುವ ಕಮಾನನ್ನು ನಿರ್ಮಿಸಬೇಕು ಇಲ್ಲವಾದರೇ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ ಕುಮಾರ ಶೆಟ್ಟಿ ಬಣ)ದ ಕಾರ್ಯಕರ್ತರು ನಿರಂತರ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾದ್ಯಕ್ಷ ನೂರ ಅಹ್ಮದ ಲಕ್ಷ್ಮೇಶ್ವರ, ಜಿಲ್ಲಾ ಮಹಿಳಾ ಘಟಕದ ಅದ್ಯಕ್ಷಿಣಿ ಸಂತೋಷಿ ಮಾತಾ ಬಡಿಗೇರ, ತಾಲ್ಲೂಕಾ ಉಸ್ತುವಾರಿ ಅದ್ಯಕ್ಷ ಬಸವರಾಜ ವಾಲಿಕಾರ, ಹಾನಗಲ್ಲ ತಾಲ್ಲೂಕಾ ಅದ್ಯಕ್ಷ ನಾಗರಾಜ ಮಲ್ಲಮ್ಮನವರ, ತಾಲ್ಲೂಕಾ ಯುವ ಯುವ ಘಟಕದ ಅದ್ಯಕ್ಷ ಮಂಜುನಾಥ ಜವಳಗಟ್ಟಿ, ತಾಲ್ಲೂಕಾ ಕಾರ್ಮಿಕ ಘಟಕದ ಅದ್ಯಕ್ಷ ವಿಶ್ವನಾಥ ಬಡಗೇರ, ತಾಲ್ಲೂಕಾ ಸಂಚಾಲಕ ರಾಜೂ ದೊಡ್ಡಮನಿ, ಹನುಮಂತ ನೇಖಾರ, ರಾಜು ರಾಮಾಪುರಮಠ, ಪಕ್ಕೀರೇಶ ಗೊರವರ, ಸತೀಶ ಭಜಂತ್ರಿ, ಸುಭಾಷ ಕುರಬರ, ಪವನ ಹಿರೇಮಠ, ಅಭಿಷೇಕ ವಾಲಿಶೆಟ್ಟರ, ಗೋಪಾಲ ದುಮ್ಮಣ್ಣನವರ, ಹಾಗೂ ಮುಂತಾದವರು ಹಾಜರಿದ್ದರು.