ರಾಣೆಬೆನ್ನೂರ

ಎನ್‌. ರವಿಕುಮಾರರಿಗೆ ಸಚಿವ ಸ್ಥಾನ ನೀಡ ಮನವಿ

ಎನ್‌. ರವಿಕುಮಾರರಿಗೆ ಸಚಿವ ಸ್ಥಾನ ನೀಡ ಮನವಿ

ಲೋಕದರ್ಶನ ವರದಿ 

ರಾಣಿಬೆನ್ನೂರ 03:  ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ವಿಪ ಸದಸ್ಯ ಹಾಗೂ ರಾಜ್ಯ  ಗಂಗಾಮತ ಸಮಾಜದ ಮುಂಖಂಡ ದಾವಣಗೇರಿ ಜಿಲ್ಲಾ ಜಗಳೂರು ತಾಲೂಕಿನ ಎನ್‌. ರವಿಕುಮಾರ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ, ತಾಲೂಕಿನ ಗಂಗಾಮತ ಸಮಾಜದ ಮುಖಂಡರು ನಿಜಶರಣ ಅಂಬಿಗರ ಚೌಡಯ್ಯ ಗುರು ಪೀಠದ ಶಾಂತಬೀಷ್ಮ ಚೌಡಯ್ಯ ಸ್ವಾಮಿಜಿಗಳ ನೇತೃತ್ವದಲ್ಲಿ ಸೋಮವಾರ ಬೆಂಗಳೂರಿನ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರ​‍್ಪನವರಿಗೆ ಕಾವೇರಿ ನಿವಾಸದಲ್ಲಿ ಮನವಿ ಸಲ್ಲಿಸಿದರು. 

ಈ ವೇಳೆ ಶಾಂತಬೀಷ್ಮ ಚೌಡಯ್ಯ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ ಗಂಗಾಮತ ಸಮಾಜದ ಜನಸಂಖ್ಯೆ 60 ಲಕ್ಷಕ್ಕೂ ಅಧಿಕವಿದ್ದು, ಬಿಜೆಪಿ ಸರ್ಕಾರದಲ್ಲಿ ಇಲ್ಲಿಯವರೆಗೂ ಸಮಾಜದ ಶಾಸಕರಿಗೆ ಸಚಿವ ಸ್ಥಾನ ನೀಡಿಲ್ಲಿ. ಸಮಾಜದ ಅಭಿವೃದ್ಧಿಗೆ ಸಚಿವರ ಅವಶ್ಯಕತೆಯಿದ್ದು, ಅಲ್ಲದೆ ಸಮಾಜ ಆರ್ಥಿಕ, ಶೈಕ್ಷಣಿಕ, ಸಮಾಜಿಕವಾಗಿ ಹಿಂದುಳಿದಿದ್ದು ಸಮಾಜಕ್ಕೆ ಹಿಂದುಳಿದ ಕೋಟಾದಲ್ಲಿ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. 

ಈ ಸಮಾಜವು ನಂಬಿದರೆ ಒಂದೇ ಹುಟ್ಟಿನಲ್ಲಿ ಭವಸಾಗರವನ್ನು ದಾಟಿಸುವ ಶಕ್ತಿ ಹೊಂದಿದ್ದು. ನಂಬಿಗೆ ಇಟ್ಟರೆ ಹಾಗೂ ಮಾತು ಕೊಟ್ಟರೆ ಎಂದೂ ತಪ್ಪಿ ನಡೆಯುವ ಸಮಾಜ ಇದಲ್ಲ. ಇದಕ್ಕೆ ಉದಾಹರಣೆ ಮಹಾಭಾರತಲ್ಲಿ ಮಹಾಮಹಿಮ ಭೀಷ್ಮ ತಾಯಿ ಸತ್ಯವತಿಗೆ ಆಜನ್ಮ ಬ್ರಹ್ಮಾಚಾರಿಯಾಗಿದ್ದು ಸಹೋದರರ ಹಾಗೂ ಕುರುವಂಶವನ್ನು ರಕ್ಷಿಸುವುದಾಗಿ ಬಾಲಕನಾಗಿದ್ದಾಗ ಮಾತು ಕೊಟ್ಟಿದ್ದ. ಅದರಂತೆ ಜೀವನದ ಪರಿಯಂತ ಧರ್ಮ ಪಾಲನೆ ಮಾಡಿದ. ಹಾಗಾಗಿ ಸಮಾಜವನ್ನು ಕಡೆಗಾಣಿಸದೆ ಅವಕಾಶ ನೀಡಬೇಕು ಇಲ್ಲವಾದಲ್ಲಿ ಸಮಾಜದ ಆಕ್ರೋಶಕ್ಕೆ ಒಳಗಾಗಬೇಕಾದೀತಿ ಎಂದು ಯಡಿಯೂರ​‍್ಪನವರನ್ನು ಎಚ್ಚರಿಸಿದರು. 

ತಾಲೂಕಿನ ಸಮಾಜದ ಮುಖಂಡರಾದ ಫಕ್ಕೀರ​‍್ಪ ತುಮ್ಮಿನಕಟ್ಟಿ, ರಾಜು ರಟ್ಟಿಹಳ್ಳಿ, ನ್ಯಾಯವಾದಿ ಹೊನ್ನಪ್ಪ ತಿಮ್ಮೇನಹಳ್ಳಿ, ಹಾಲೇಶ ಜಾಡರ, ಕೊಟ್ರೇಶ ಕುದರಿಹಾಳ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಮಾಜ ಬಾಂಧವರು ಪಾಲ್ಗೊಂಡಿದ್ದರು.   


ಸುದ್ದಿ ಓದಿ