ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ
ರಾಣೇಬೆನ್ನೂರು 10: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲದ ಪದಾಧಿಕಾರಿಗಳು ಜಿಲ್ಲಾಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲದರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಕೊಂಗಿ ಮಾತನಾಡಿ, ಸಮಾಜಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಗುತ್ತಿಗೆ/ ದಿನಗೂಲಿ ನೌಕರರು, ಅಡುಗೆಯವರು, ಅಡುಗೆ ಸಹಾಯಕರು, ಜವಾನರು, ಕಾವಲುಗಾರರುಗುತ್ತಿಗೆಆಧಾರದ ಮೇಲೆ ಗರಿಷ್ಠ 20 ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದರೂಖಾಯಂ ನೇಮಕಾತಿ ಮಾಡಿಕೊಳ್ಳಬೇಕು ಜೊತೆಗೆಖಾಯಂ ನೌಕರರು ಪಡೆಯುವಅರ್ಧದಷ್ಟು ಸಂಬಳವನ್ನು ಮಾತ್ರ ಪಡೆಯುತ್ತಿರುವತಾರತಮ್ಯವನ್ನು ಸರಿಪಡಿಸಿ ಎಲ್ಲರಿಗೂ ಸಮಾನ ವೇತನ ನೀಡುವಂತಾಗಬೇಕು.
ದಿನಗೂಲಿ ನೌಕರರಿಗೆ ಹಲವು ರೀತಿಯಿಂದ ಕಿರುಕುಳ ನಡೆಯತ್ತಲೇಇರುವುದು ವಿಷಾಧನೀಯ ಸಂಗತಿಯಾಗಿದ್ದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಸೂಕ್ತ ಭದ್ರತೆಒದಗಿಸಬೇಕೆಂದರು.ನೌಕರರಿಗೆ ವೇತನ ನೀಡುವಲ್ಲಿ ವಿಳಂಬ ನೀತಿಅನುಸರಿಸದೇ ಇಲಾಖಾ ಅಧಿಕಾರಿಗಳು ಪ್ರತೀ ತಿಂಗಳ 5 ನೇ ತಾರೀಖಿನ ಒಳಗೆ ವೇತನ ನೀಡಬೇಕು.
ಅಧಿಕಾರಿಗಳು ಏಕಾಏಕಿಯಾಗಿಗುತ್ತಿಗೆ/ದಿನಗೂಲಿ ನೌಕರರನ್ನು ಕೆಲಸದಿಂದ ಬದಲಾವಣೆ ಮಾಡದಂತೆ ಆದೇಶಿಸಬೇಕು ಮತ್ತು ನೌಕರರಿಂದ 8 ಗಂಟೆಅವಧಿಗಿಂತ ಹೆಚ್ಚು ಕಾರ್ಯ ನಿರ್ವಹಿಸುವವರಿಗೆಓವರ್ಟೈಮ್ ವೇತನ ಮಂಜೂರ ಮಾಡುವಂತಾಗಬೇಕು.
ಮಾನ್ಯ ಸರ್ವೋಚ್ಛ ನ್ಯಾಯಲಯವು ನೀಡಿರುವ ಅನೇಕ ತೀರ್ುಗಳಲ್ಲಿ “ಸರ್ಕಾರಗಳು ಮಾದರಿ ಮಾಲಕರಾಗಿ ನಡೆದುಕೊಳ್ಳಬೇಕು”ಎಂದು ಆದೇಶಿಸಿದೆ ಅದರಂತೆ ಘನ ಸರ್ಕಾರವು ಹಾಗೂ ಸರ್ಕಾರಿ ಅಧಿಕಾರಿಗಳು ಕಾನೂನುಗಳನ್ನು ಉಲ್ಲಂಘನೆ ಮಾಡುತ್ತಿರುವುದಕ್ಕೆ ಸಂಪೂರ್ಣಕಡಿವಾಣ ಹಾಕಬೇಕೆಂದರು.
ಕರ್ನಾಟಕರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲದತಾಲೂಕಅಧ್ಯಕ್ಷ ದಿಳ್ಳೆಪ್ಪ ಸತ್ಯಪ್ಪನವರ, ಕಾರ್ಮಿಕರ ಸಂಘದಅಧ್ಯಕ್ಷ ನಾಗರಾಜ ಬಿ, ಮಹದೇವಕ್ಕ, ಗೀತಾ ಡೊಗ್ಗಳ್ಳಿ, ಸ್ವಪ್ನಾ ಬತ್ತದ, ಶಿವಪಾರ್ವತಿ, ರೇಣುಕಾಯಂಡಿಗೇರಿ, ಅನ್ನಪೂರ್ಣಕ್ಯಾಲಕೊಂಡ, ಸುಭಾಸಕ್ಯಾಲಕೊಂಡ ಸೇರಿದಂತೆ ಮತ್ತಿತರರುಇದ್ದರು.