ಉಪನೋಂದಣಾಧಿಕಾರಿ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ
ಯಲಬುರ್ಗಾ 31: ನಗರದ ಹಿರಿಯ ಉಪನೋಂದಣಾಧಿಕಾರಿ ಹಾಗೂ ವಿವಾಹ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮಧ್ಯವರ್ತಿಗಳ (ಬ್ರೋಕರ್) ಹಾವಳಿ ಹೆಚ್ಚಾಗಿದ್ದು. ಈ ಕೂಡಲೇ ಅವರನ್ನು ಇಲಾಖೆಯಿಂದ ಹೊರ ಹಾಕಬೇಕು ಹಾಗೂ ಇಲಾಖೆಯ ಸುತ್ತ ಮುತ್ತ ಇರುವ ಅಂಗಡಿಗಳನ್ನು ತೆರವುಗೊಳಿಸಿ ಎಂದು ಕರವೇ ಯುವ ಸೇನೆಯ ತಾಲೂಕು ಅಧ್ಯಕ್ಷ ಶಿವಕುಮಾರ ನಾಗನಗೌಡ ಅವರು ತಹಸೀಲ್ದಾರ ಶ್ರೀಶೈಲ್ ತಳವಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಹಿರಿಯ ಉಪನೋಂದಣಾಧಿಕಾರಿ ಹಾಗೂ ವಿವಾಹ ನೋಂದಣಾಧಿಕಾರಿಗಳ ಕಚೇರಿಯ ಅಧಿಕಾರಿಗಳು ಬೇಜವಾಬ್ದಾರಿತನದಿಂದ ಕೆಲಸ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತುಂಬಾ ಅನಾನುಕೂಲವಾಗಿದೆ ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕರಿಂದ ಮಧ್ಯವರ್ತಿಗಳು ವ್ಯಾಪಕವಾಗಿ ಹಣ ವಸೂಲಿ ಮಾಡಿಕೊಂಡು ಜೇಬು ತುಂಬಿ ಕೊಂಡು ಮನೆಗೆ ಹೋಗುತ್ತಾರೆ. ಪ್ರತಿನಿತ್ಯವೂ ಇಲಾಖೆಯಲ್ಲಿ ಹಗಲು ದರೋಡೆ ನಡೆಯುತ್ತಿದ್ದು ಇಲ್ಲಿ ಹೇಳುವವರು ಇಲ್ಲ ಕೇಳುವವರು ಯಾರು ಇಲ್ಲದಂತಾಗಿದೆ. ಸಣ್ಣಪುಟ್ಟ ಕೆಲಸಗಳಿಗೂ ಹಣ ವಸೂಲಿ ಮಾಡುವದು ಮಾಮೂಲಿಯಾಗಿದೆ. ಈ ಇಲಾಖೆಯಲ್ಲಿ ಹಣ ಕೊಟ್ಟರೆ ಮಾತ್ರ ಕೆಲಸ ಇಲ್ಲವೆಂದರೇ ಇಲಾಖೆಯ ಕೆಲಸಗಳು ಆಗುವದೇ ಅನುಮಾನವಾಗಿದೆ. ದುಡ್ಡು ಕೊಟ್ಟರೆ ಕಾನೂನು ಬಾಹಿರವಾಗಿ ಕೆಲಸಗಳನ್ನು ಬ್ರೋಕರಗಳು ಹಾಗೂ ಅಧಿಕಾರಿಗಳು ಕೆಲಸ ಮಾಡಿಕೊಡುವುದಕ್ಕೆ ಮುಂದಾಗುತ್ತಾರೆ ಎಂದರು.
ನಂತರ ಕರವೇ ಜಿಲ್ಲಾ ಅಧ್ಯಕ್ಷ ಬಸವರಾಜ ಹಳ್ಳಿ ಮಾತನಾಡಿದರು.
ಇಲಾಖೆಯ ಮುಂದಿನ ಆವರಣದಲ್ಲಿ ವ್ಯಾಪಕವಾಗಿ ಜಾಲಿ ಗಿಡಗಳು ಬೆಳೆದಿದ್ದು ಮತ್ತು ಸುತ್ತ-ಮುತ್ತ ತಗಡಿನ ಸೆಡ್ಡುಗಳನ್ನು ಅಂಗಡಿಗಳನ್ನು ತೆರವುಗೊಳಿಸಲ್ಲ ಅವುಗಳನ್ನು ತೆರವುಗೊಳಿಸಬೇಕು. ಮಳೆಗಲದಲ್ಲಿ ಸಾರ್ವಜನಿಕರು ಕಚೇರಿಗೆ ಬರುವುದಕ್ಕೆ ಸಾದ್ಯವಿಲ್ಲದಂತಹ ಪರಿಸ್ಥತಿ ನಿರ್ಮಾಣವಾಗಿದ್ದರೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ಕಚೇರಿ ಕೆಲಸಕ್ಕೆ ಬಂದ ಸಾರ್ವಜನಿಕರು ಕುಳಿತುಕೊಳ್ಳಲು ಸರಿಯಾದ ಆಸನದ ವ್ಯವಸ್ಥೆ ಇಲ್ಲವಾಗಿದೆ.
ಸರ್ಕಾರಕ್ಕೆ ಪಾವತಿ ಮಾಡಬೇಕಾದ ಹಣದ ದರ ಪಟ್ಟಿ ಸಾರ್ವಜನಿಕರ ಫಲಕದಲ್ಲಿ ಹಾಕಿಲ್ಲ. ಮತ್ತು ಅಧಿಕಾರಿಗಳ ಕುಮ್ಮಕ್ಕಿನಿಂದ ಕೆಲವು ಮಧ್ಯವರ್ತಿಗಳು ಹೋರಾಟಗಾರರಿಗೆ ಬೆದರಿಕೆ ದಮ್ಕಿ ಹಾಕುತ್ತಾರೆ. ಹೋರಾಟಗಾರರಿಗೆ ಏನಾದರೂ ತೊಂದರೆ ಆದರೆ ಹಿರಿಯನೋಂದಣಾಧಿಕಾರಿ ಹಾಗೂ ವಿವಾಹ ನೋಂದಣಾಧಿಕಾರಿಗಳೇ ನೇರ ಹೊಣೆ ಮತ್ತು ಅಧಿಕಾರಿ ತನ್ನಗೆ ಬೇಕಾದ ವಿಶ್ವಾಸಿಕ ಬ್ರೋಕರ್ಗಳನ್ನು ಸೃಷ್ಠಿಮಾಡಿಕೊಂಡಿದ್ದಾರೆ. ಅಂತ ಅಧಿಕಾರಿಯನ್ನು ಕೂಡಲೇ ವರ್ಗಾವಣೆ ಮಾಡಬೇಕು ಇಲ್ಲದಿದ್ದರೆ ಇಲಾಖೆಯ ಮುಂದೆ ಧರಣಿ ಮಾಡಬೇಕಾಗುತ್ತದೆ ಎಂದು ಕರವೇ ಯುವ ಸೇನೆ ಸಂಘಟನೆಯ ತಾಲೂಕ ಅಧ್ಯಕ್ಷ ಉಗ್ರವಾಗಿ ಎಚ್ಚರಿಕೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗೌರವಧ್ಯಕ್ಷ ನಾಗನಗೌಡ ಪೊಲೀಸ್ಪಾಟೀಲ್, ಪ್ರಧಾನಕಾರ್ಯದರ್ಶಿ ಶಿವುಕುಮಾರ ನಿಡಗುಂದಿ, ನಗರ ಘಟಕ ಉಪಾಧ್ಯಕ್ಷ ಘನವಂತೇಶ ಚನ್ನದಾಸರ, ಗ್ರಾ.ಘ.ಅಧ್ಯಕ್ಷ ಪ್ರವೀಣ, ರಮೇಶ ಪೂಜಾರ, ವಿಧ್ಯರ್ಥಿ ಘಡಕ ಅಧ್ಯಕ್ಷ ಯಮನೂರಪ್ಪ ನಾಯಕ್, ಬೂನಕೊಪ್ಪ ಗ್ರಾ.ಘ.ಅಧ್ಯಕ್ಷ ಜಗದೀಶ ಪೊಲೀಸ್ಪಾಟೀಲ್, ಸೇರಿ ಮತ್ತಿತರರು ಇದ್ದರು.