ಔಷಧ ಮಳಿಗೆಗಳಿಗೆ ಪರವಾನಗಿ ನೀಡದಂತೆ ಆಗ್ರಹ
ಬೈಲಹೊಂಗಲ 13: ಕಾರ್ಪೋರೆಟ್ ಮಳಿಗೆಗಳಾದ ಅಪೊಲೋ, ಮೆಡಪ್ಲಸ್, ನೆಟ್ ಮೆಡ್ ವೆಲನೆಸ್ ಫಾರ್ ದಂತಹ ಔಷದ ಮಳಿಗೆಗಳಿಗೆ ಪರವಾಣಿಗೆ ನೀಡಬಾರದೆಂದು ಆಗ್ರಹಿಸಿ ಬೈಲಹೊಂಗಲ ಕೆಮಿಸ್ಟ ಮತ್ತು ಡ್ರಗಿಸ್ಟ್ ಅಸೋಶಿಯೇಶನ್ ವತಿಯಿಂದ ಮಂಗಳವಾರ ಶಾಸಕರಾದ ಮಹಾಂತೇಶ ಕೌಜಲಗಿ, ಮಹಾಂತೇಶ ದೊಡಗೌಡ್ರ, ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಅವರ ಮೂಲಕ ವೈದ್ಯಕೀಯ ಸಚಿವ ಡಾ.ಸುಧಾಕರ ಅವರಿಗೆ ಮನವಿ ಸಲ್ಲಿಸಿದರು.
ಕಾರ್ಪೋರೆಟ್ ಮಳಿಗೆಗಳು ಮಾರುಕಟ್ಟೆಗೆ ಲಗ್ಗೆ ಇಡುವುರಿಂದ ಮೊದಲಿನಿಂದಲೂ ವ್ಯಾಪಾರ ಮಾಡಿಕೊಂಡು ಬರುವ ವ್ಯಾಪಾರಸ್ಥರಿಗೆ ಇದರಿಂದ ತುಂಬಾ ತೊಂದರೆಯಾಗುತ್ತಿದೆ. ಮಾರುಕಟ್ಟೆಗೆ ಈ ಕಾರ್ಪೋರೆಟರ್ ಮಳಿಗೆಗಳಿಂದಾಗಿ ಬಾಡಿಗೆ, ಕಾರ್ಮಿಕರ ವೇತನ, ವಿದ್ಯುತ್ ಶುಲ್ಕ, ವಿವಿಧ ತೆರಿಗೆಯನ್ನು ಕಟ್ಟಲು ಆಗುತ್ತಿಲ್ಲ ಎಂದು ಮನವಿಯಲ್ಲಿ ಆಪಾದಿಸಿದ್ದಾರೆ.
ಮಹಾಂತೇಶ ಕೋಟಗಿ, ಅಶೋಕ ವಾಲಿ, ಶಂಕರ ಬಿಳ್ಳೂರ, ವಿಶ್ವನಾಥ ಚಿನಿವಾಲರ, ಗೌತಮ ಇಂಚಲ, ಅನೂಪ ಇಂಚಲ, ಶಿವಶಂಕರಗೌಡ ಪಾಟೀಲ, ರಾಯನಗೌಡ ಪಾಟೀಲ, ಸಿದ್ದು ಬೆಳದವರ, ಅನಿಲ ವಣ್ಣೂರ, ಪ್ರಸಾದ ನಾಯಿಕ, ಶಶಿಕುಮಾರ ಬೇವಿನಗಿಡದ, ಶಿವು ಹಿಟ್ಟಣಗಿ, ಸಾಜಿದ ಬಾಬಣ್ಣವರ ಹಾಗೂ ತಾಲೂಕಿನ ಎಲ್ಲ ಕೆಮಿಸ್ಟ ಮತ್ತು ಡ್ರಗಿಸ್ಟ ಅಸೋಸಿಯೇಷನ ಸದಸ್ಯರು ಇದ್ದರು.