ತಾಳಿಕೋಟಿ

ಪಿಡಿಓ ವರ್ಗಾವಣೆಯನ್ನು ರದ್ದುಗೊಳಿಸಿವಂತೆ ಆಗ್ರಹಿಸಿ ಗ್ರಾಮಸ್ಥರಿಂದ ಮನವಿ

ಪಿಡಿಓ ವರ್ಗಾವಣೆಯನ್ನು ರದ್ದುಗೊಳಿಸಿವಂತೆ ಆಗ್ರಹಿಸಿ ಗ್ರಾಮಸ್ಥರಿಂದ ಮನವಿ
ತಾಳಿಕೋಟೆ ತಾಲೂಕಿನ ಮೂಕಿಹಾಳ ಗ್ರಾಮ ಪಂಚಾಯತ ಪಿಡಿಓ ಅವರ ವರ್ಗಾವಣೆಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ತಾಪಂ ಇಓ ಅ

ತಾಳಿಕೋಟೆ27: ತಾಲೂಕಿನ ಮೂಕಿಹಾಳ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಎಸ್.ವಾಯ್. ತಳವಾರ ಅವರನ್ನು ಮೂಕಿಹಾಳ ಗ್ರಾಮ ಪಂಚಾಯತದಿಂದ ವರ್ಗಾವಣೆ ಮಾಡದೇ ಅಲ್ಲಿಯೇ ಮುಂದುವರೆಸಬೇಕು ಎಂದು ಆಗ್ರಹಿಸಿ ಗ್ರಾಮ ಪಂಚಾಯತ ಸದಸ್ಯರು ಹಾಗೂ ಗ್ರಾಮಸ್ಥರು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

ಮೂಕಿಹಾಳ ಗ್ರಾಮ ಪಂಚಾಯತದಲ್ಲಿ ಕಳೆದ 2 ವರ್ಷಗಳಿಂದ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಎಸ್.ವಾಯ್.ತಳವಾರ ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮ ಪಂಚಾಯತ ವ್ಯಾಪ್ತಿಯ 7 ಗ್ರಾಮಗಳಲ್ಲಿಯ ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಹಲವು ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಕಾರ್ಯವನ್ನು ಮಾಡುತ್ತಾರೆ. ಪಂಚಾಯತ ವ್ಯಾಪ್ತಿಯಲ್ಲಿ ಯಾವುದೇ ಬ್ರಷ್ಠಾಚಾರಕ್ಕೆ ಆಸ್ಪದ ನೀಡದೇ ನೈಜ ಫಲಾನುಭವಿಗಳಿಗೆ ಸರಕಾರ ಯೋಜನೆಗಳನ್ನು ತಲುಪುವಂತೆ ಮಾಡುತ್ತಿದ್ದಾರೆ. ಬ್ರಷ್ಠಾಚಾರಕ್ಕೆ ಅವಕಾಶ ನೀಡದಿದ್ದರಿಂದ ಕೆಲವು ಸದಸ್ಯರು ವಿನಾಕಾರಣ ಆರೋಪವನ್ನು ಮಾಡಿ ವರ್ಗಾವಣೆ ಒತ್ತಡ ಹಾಕಿರುವದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಸದಸ್ಯರ ಒತ್ತಡಕ್ಕೆ ಮಣಿದು ಸದ್ಯ ವಗರ್ಾವಣೆ ಮಾಡಿದ್ದು ಕೂಡಲೇ ಪಿಡಿಓ ಅವರ ವರ್ಗಾವಣೆಯನ್ನು ರದ್ದುಗೊಳಿಸಬೇಕು. ಇಲ್ಲದಿದ್ದರೆ ತಾಪಂ ಕಚೇರಿ ಮುಂದೆ ಉಗ್ರವಾದ ಧರಣಿ ಸತ್ಯಾಗ್ರಹವನ್ನು ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದರು. ತಾಪಂ ಇಓ ಬಿ.ಆರ್.ಬಿರಾದಾರ ಮನವಿಯನ್ನು ಸ್ವಿಕರಿಸಿದರು.

ಗ್ರಾಮ ಪಂಚಾಯತ ಸದಸ್ಯರಾದ ಶಿವಪ್ಪ ಗೋನಾಳ, ಶ್ರೀಶೈಲ ಬಿರಾದಾರ, ಹೋರಾಟಗಾರ ಶಿವರಾಜ ಗುಂಡಕನಾಳ, ಮುತ್ತಣ್ಣ ಉಳ್ಳಾಗಡ್ಡಿ, ಗೌಡಪ್ಪ ಬಿರಾದಾರ, ಪರಸಪ್ಪ ಬಿರಾದಾರ, ಗುರು ನಾಗೂರ ಸೇರಿದಂತೆ ಇತರರು ಇದ್ದರು.


ಸುದ್ದಿ ಓದಿ