ಸಿಂಧಗಿ

ಶೇ. 5ರಷ್ಟು ಅನುದಾನ ಕೋರಿ ವಿಶೇಷ ಚೇತನರಿಂದ ಮನವಿ

ಶೇ. 5ರಷ್ಟು ಅನುದಾನ ಕೋರಿ ವಿಶೇಷ ಚೇತನರಿಂದ ಮನವಿ

ಸಿಂದಗಿ 21:  ಶೇ. 5ರಷ್ಟು ಅನುದಾನ ಕೋರಿ ತಾಲೂಕ ಕಾರ್ಯನಿರ್ವಾಹಕ ಅಧೀಕಾರಿಗಳಿಗೆ ವಿಶೇಷ ಚೇತನರಿಂದ ಮನವಿಸಿದರು. 

ತಾಲೂಕಿನ ವಿವಿಧ ಗ್ರಾಮ ಪಂಚಾಯತಿ ಹಿಕ್ಕನಗುತ್ತಿ, ಗುತ್ತರಗಿ, ರಾಂಪೂರ ಪಿ.ಎ, ಕನ್ನೊಳ್ಳಿ ಮತ್ತು ಬ್ಯಾಕೋಡ ಈ ಗ್ರಾಮ ಪಂಚಾಯಾತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಾದ, ರಾಂಪೂರ, ಗಣಿಹಾರ, ಬಬಲೇಶ್ವರ, ಬಂಟನೂರ, ಕನ್ನೊಳ್ಳಿ ಹಾಗೂ ಮನ್ನಾಪೂರ ಹಳ್ಳಿಗಳಲ್ಲಿ ವಿಶೇಷ ಚೇತನರಿಗೆ ಪ್ರತಿ ವರ್ಷದ ಅನುದಾನದಲ್ಲಿ ಸಿಗಬೇಕಾದ 5ಅ ಅನುದಾನ ಸುಮಾರು 15 ವರ್ಷಗಳಿಂದ ಇಲ್ಲಿಯವರೆಗೆ ಒಂದು ಭಾಗ ಕೂಡ ಸಿಕ್ಕಿರುವುದಿಲ.್ಲ ವಿಶೇಷ ಚೇತನರ ಯೋಜನೆಯಡಿಯಲ್ಲಿ ಇಲ್ಲಿಯವರೆಗೂ ಒಂದು ಆಶ್ರಯ ಮನೆ ಬಂದಿರುವುದಿಲ್ಲ. ಇದನ್ನು ಪ್ರಶ್ನಿಸಿ ದಿ. 30ರಂದು ರಾಂಪುರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ದಿ. 02-11-2023 ರಂದು ಗುತ್ತರಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ನೀಡಲಾಗಿದೆ. ಎರಡೂ ಪಂಚಾಯತಿಗಳಿಂದ ಯಾವುದೇ ಸಹಕಾರ ಸಿಗಲಿಲ್ಲ. ಗುತ್ತರಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮನಬಂದಂತೆ ಮಾತನಾಡುತ್ತಾರೆ. ದಿ. 24-06-2022 ರಂದು ರಾಂಪುರ ಹಾಗೂ ದಿ. 16-5-2024 ರಂದು ಗುತ್ತರಗಿ ಗ್ರಾಮ ಪಂಚಾಯತಿಗೆ ಆರ್‌.ಟಿ.ಐ ಯಲ್ಲಿ ಮಾಹಿತಿ ಕೂಡಾ ಕೇಳಲಾಗಿತ್ತು ಇದಕ್ಕೂ ಏನೂ ಸ್ಪಂದನೇ ಸಿಗಲಿಲ್ಲ. ನಮಗೆ ಪ್ರತಿ ವರ್ಷ ಸಿಗುವ  5ಅ ಅನುದಾನ ಮತ್ತು ಆಶ್ರಯ ಮನೆಗಳನ್ನು ದುರ್ಬಳಕ್ಕೆ ಮಾಡದೇ ಸರಿಯಾದ ಫಲಾನುಭವಿಗೆ ನೀಡಬೇಕೆಂದು ಎಲ್ಲ ವಿಶೇಷ ಚೇತನರು ಸೇರಿ ಸಿಂದಗಿ ತಾಲೂಕ ಕಾರ್ಯನಿರ್ವಾಹಕ ಅಧೀಕಾರಿಗಳಿಗೆ ಮನವಿ ಸಲ್ಲಿಸಿದರು. 


ಸುದ್ದಿ ಓದಿ