ಸೌಂದತ್ತಿ

ಮುಧೋಳದಲ್ಲಿ ರೈತರ ಮೇಲಿನ ಹಲ್ಲೆಯನ್ನು ಖಂಡಿಸಿ ಮನವಿ

ಮುಧೋಳದಲ್ಲಿ ರೈತರ ಮೇಲಿನ ಹಲ್ಲೆಯನ್ನು ಖಂಡಿಸಿ ಮನವಿ

ಸವದತ್ತಿ 02: ರೈತ ಸಂಘದ ಮುಖಂಡ ಯಲ್ಲಪ್ಪ ಹೆಗಡೆಯವರ ಮೇಲೆ ಬಾಗಲಕೋಟ ಜಿಲ್ಲೆಯ ಮುಧೋಳದಲ್ಲಿ ನಡೆದ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯವತಿಯಿಂದ ಶುಕ್ರವಾರದಂದು ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. 

ರಾಜಕೀಯ ವೈಷಮ್ಯದಿಂದ ರೈತರ ಮೇಲೆ ಮಾರಣಾಂತಿಕವಾಗಿ ಹಲ್ಲೆಯನ್ನು ನಡೆಸಿರುವ ಗೂಂಡಾಗಳನ್ನು ಕೂಡಲೆ ಬಂಧಿಸಿ ಅವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕೆಂದು ರೈತರು ಆಗ್ರಹಿಸಿದರು. 

ಹಲ್ಲೆಗೊಳಗಾದ ಯಲ್ಲಪ್ಪ ಹೆಗಡೆಯವರಿಗೆ ಹಾಗೂ ಅವರು ಕುಟುಂಬದ ಸದಸ್ಯರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು. 

ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಉಪತಹಸೀಲ್ದಾರ ಶಶಿರಾಜ ವನಕಿಯವರಿಗೆ ನೀಡಿ ರೈತರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು. 

ರೈತ ಸಂಘಟನೆಯ ಸುರೇಶ ಸಂಪಗಾಂವಿ, ಬಸವರಾಜ ಬಿಜ್ಜೂರ, ಸುರೇಶ ಅಂಗಡಿ, ಶಂಕರ ಬಗನಾಳ, ಯಲ್ಲಪ್ಪ ಅಂತಕನವರ, ಮಹಾಂತೇಶ ಮುತವಾಡ, ಶ್ರೀಕಾಂತ ಹಟ್ಟಿಹೊಳಿ, ಸಿದ್ದಪ್ಪ ಪಟ್ಟದಕಲ್ಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ