ರೈತ ವಿರೋಧಿ ಮಸೂದೆಗಳ ವಿರೋಧಿಸಿ ಮನವಿ
ಶಿಗ್ಗಾವಿ 21: ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾವನದಲ್ಲಿ ರೈತ ವಿರೋಧಿ ಮಸೂದೆಗಳನ್ನು ಖಂಡಿಸಿ ಹೋರಾಟ ಬೆಂಬಲಿಸಿ ಕರ್ನಾಟಕ ಪ್ರದೇಶ ಕಾಂಗ್ರೇಸ ಸಮಿತಿ ಹಮ್ಮಿಕೊಂಡಿದ್ದ ರಾಜ ಭವನ ಮುತ್ತಿಗೆ ಬಹೃತ ಪ್ರತಿಭಟನೆಯಲ್ಲಿ ತಾಲೂಕಿನ ಕಾಂಗ್ರೇಸ ಮುಖಂಡರಾದ ಶ್ರೀಕಾಂತ ದುಂಡಿಗೌಡ್ರ ನೇತೃತ್ವದಲ್ಲಿ ತಾಲೂಕಿನ ಎಲ್ಲ ಹಿರಿಯ ಮುಖಂಡರು ಹಾಗೂ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು. ಕೆ.ಪಿ.ಸಿ.ಸಿ ರಾಜ್ಯ ಎಸ್.ಟಿ ಪ್ರಧಾನ ಕಾರ್ಯದರ್ಶಿ ಪ್ರಕಾಶ ಹಾದಿಮನಿ, ಜಿಲ್ಲಾ ಮಹಿಳಾ ಕಾಂಗ್ರೇಸ ಅಧ್ಯಕ್ಷೆ ಪೇಮಾ ಪಾಟೀಲ, ತಾಲೂಕ ಅಧ್ಯಕ್ಷ ಎಂ.ಎನ್.ವೇಂಕೋಜಿ, ತಾಲೂಕ ಪಂಚಾಯತ ಸದಸ್ಯ ಶ್ರೀಕಾಂತ ಪೂಜಾರ, ಎ.ಪಿ.ಎಂ.ಸಿ ಸದಸ್ಯ ಹನುಮರೆಡ್ಡಿ ನಡುವಿನಮನಿ, ಎಸ್.ಎಫ.ಮಣಕಟ್ಟಿ, ಶಂಬು ನೆರ್ತಿ, ಚಂದ್ರು ಹೆಬ್ಬಾರ, ಮಹಾಂತೇಶ ಸಾಲಿ, ಅಶೋಕ ಗಾಣಿಗೇರ, ಸುಮಿತ ಸೂರ್ಯವಂಶಿ, ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.