ಸಿಂಧಗಿ

ಜಾತಿ ಧರ್ಮ ವರ್ಣ ವರ್ಗರಹಿತ ಸಮಾಜ ನಿರ್ಮಾಣಕ್ಕೆ ಅಪ್ಪಣ್ಣ ಶ್ರಮಿಸಿದ್ದಾರೆ : ಅಶೋಕ ಅಲ್ಲಾಪೂರ

ಜಾತಿ ಧರ್ಮ ವರ್ಣ ವರ್ಗರಹಿತ ಸಮಾಜ ನಿರ್ಮಾಣಕ್ಕೆ ಅಪ್ಪಣ್ಣ ಶ್ರಮಿಸಿದ್ದಾರೆ : ಅಶೋಕ ಅಲ್ಲಾಪೂರ

ಸಿಂದಗಿ 22 : ಶರಣ ಹಡಪದ ಅಪ್ಪಣ್ಣನವರು ಜಾತಿ, ಧರ್ಮ, ವರ್ಣ ಹಾಗೂ ವರ್ಗರಹಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಎಂದು ಮಾಜಿ ನಿಂಬೆ ಅಭಿವೃದ್ಧಿ ನಿಗಮ ಅಧ್ಯಕ್ಷ ಅಶೋಕ ಅಲ್ಲಾಪೂರ ಹೇಳಿದರು. 

ಪಟ್ಟಣದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಡಾ.ಆರ್ ಆರ್ ವಾರದ ವೇದಿಕೆಯ ಮೇಲೆ ಅವರು ಹಡಪದ ಅಪ್ಪಣ್ಣನವರ ಜಯಂತಿ ನಿಮಿತ್ತ ಅವರು ಮಾತನಾಡಿ ಅಪ್ಪಣ್ಣನವರು 12ನೇ ಶತಮಾನದ ವಚನ ಚಳವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರಾಗಿದ್ದಾರೆ ಎಂದು ಹೇಳಿದರು. 

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶಿವಾನಂದ ಬಡಾನೂರ ಮಾತನಾಡಿ ಹಡಪದ ಅಪ್ಪಣ್ಣ ನವರು ಹನ್ನೆರಡನೆಯ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರು. ಬಸವಣ್ಣನವರ ಬಲಗೈ ಬಂಟನೆಂದೇ ಹೆಸರು ಪಡೆದಿದ್ದರು. ಬಸವಣ್ಣನವರ ಬಾಲ್ಯದ ಒಡನಾಡಿಗಳಾಗಿದ್ದ ಇವರು ವಿಶ್ವದ ​‍್ರ​‍್ರಥಮ ಪ್ರಜಾಪ್ರಭುತ್ವದ ಸಂಸತ್ತು ಎಂದೇ ಹೆಸರಾದ ಅನುಭವ ಮಂಟಪದಲ್ಲಿ ಬಸವಣ್ಣನವರಿಗೆ ಪ್ರಧಾನ ಕಾರ್ಯದರ್ಶಿಗಳಾಗಿ, ಬಸವಣ್ಣನವರಿಗೆ ಯಾವುದೇ ರೀತಿಯ ಮುಜುಗುರವಾಗದಂತೆ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಇವರ ಕಾರ್ಯಕ್ಷಮತೆಗೆ ಇಂದಿನವರಿಗೆ ಕನ್ನಡಿಯಾಗಿದೆಯೆಂದರೆ ಎಂದರು. 

ಹಡಪದ ಅಪ್ಪಣ್ಣ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಶಿವಾನಂದ ಹಡಪದ ಮಾತನಾಡಿ ಸಮಾಜದಲ್ಲಿ ತಾಂಡವಾಡುವ ಮೂಢ ನಂಬಿಕೆಯನ್ನು ಹೋಗಲಾಡಿಸುವುದಕ್ಕಾಗಿಯೆ ಅಣ್ಣ ಬಸವಣ್ಣನವರು ಯಾರೇ ಬಂದರೂ ಮೊದಲು ಹಡಪದ ಅಪ್ಪಣ್ಣನವರನ್ನು ನೊಡಿಕೊಂಡು ಬರಬೇಕೆಂಬ ತಿಳಿಸುತ್ತಿದ್ದರು ಎಂದರು. 

ಕಾರ್ಯಕ್ರಮದಲ್ಲಿ ಕಸಾಪ ಮಾಜಿ ಅಧ್ಯಕ್ಷ ಸಿ ಎಂ ದೇವರಡ್ಡಿ.ಕಂಠೆಪ್ಪ ಹಡಪದ. ಜಟ್ಟಪ್ಪ ಹಡಪದ ಶಿವಶರಣ ಹಡಪದ.ಮಂಜುನಾಥ ಹಡಪದ.ಸುನಂದ ಯಂಪೂರೆ.ಕವಿ ಮುಖ್ಯಶಿಕ್ಷಕಿ ಎಸ್ ಎಂ ಮಸಳಿ ಸುಭಾಸ ದೇವರನಾವದಗಿ ರೇವಣಸಿದ್ದ ಹಡಪದ. ರವಿ ಹಡಪದ. ಶಿವಶರಣ ಬಂಕಲಗಿ. ಪ್ರವೀಣ ಹಡಪದ. ಭಾಗೇಶ ದೇವೂರ. ಶರಣು ಬ್ಯಾಕೋಡ. ಚಿದಾನಂದ ಹಡಪದ .ಶೇಖಪ್ಪ ಹಡಪದ ಹಾಗೂ ಅಪಾರ ಹಡಪದ ಅಪ್ಪಣ್ಣ ಸಮಾಜದ ಜನಾಂಗದವರು ಇದ್ದರು. 


ಸುದ್ದಿ ಓದಿ