ಅಪಘಾತ ಬೆನ್ನು- ಹುರಿ ಸಮಸ್ಯೆ ವ್ಯಕ್ತಿಗಳು ಆತ್ಮವಿಶ್ವಾಸ ಕಳೆದುಕೊಳ್ಳಬಾರದು - ಪ್ರಕಾಶ್ ಕೋಳಿವಾಡ
ಅಪಘಾತ ಬೆನ್ನು- ಹುರಿ ಸಮಸ್ಯೆ ವ್ಯಕ್ತಿಗಳು ಆತ್ಮವಿಶ್ವಾಸ ಕಳೆದುಕೊಳ್ಳಬಾರದು - ಪ್ರಕಾಶ್ ಕೋಳಿವಾಡ
ರಾಣೆಬೆನ್ನೂರು 12 : ಯಾವುದೇ ಅಪಘಾತಗಳು ಸಂಭವಿಸುವುದು ಉದ್ದೇಶಪೂರ್ವಕವಾಗಿ ಅಲ್ಲ ಎಲ್ಲವೂ ಆಕಸ್ಮಿಕ. ಸಂಬಂಧಿಸಿದಂತೆ ನೋವಿನ ಜೊತೆಗೆ ಮಾನಸಿಕ ವೇದನೆ ಅನುಭವಿಸುವುದೇ ದೊಡ್ಡ ಸಂಕಷ್ಟ. ಯಾವುದೇ ಕಾರಣಕ್ಕೂ ಆತ್ಮವಿಶ್ವಾಸ ಕಳೆದುಕೊಳ್ಳದೆ ಸೂಕ್ತ ಚಿಕಿತ್ಸೆ ಮತ್ತು ಫಿಜೀಯೋ ಥೆರೆಪಿ ಅಳವಡಿಸಿಕೊಂಡರೆ ಪುನಃ ಸರಳವಾಗಿ ಜೀವನ ಸಾಗಿಸಬಹುದಾಗಿದೆ ಎಂದು ಓಂ ಆಸ್ಪತ್ರೆಯ ಕೀಳು- ಮೂಳೆ ತಜ್ಞ ವೈದ್ಯ, ಡಾ. ಮನೋಜ್ ಸಾಹುಕಾರ ಹೇಳಿದರು. ಅವರು ಆಸ್ಪತ್ರೆ ಆವರಣದಲ್ಲಿ ದಿ. ಅಸೋಸಿಯೇಷನ್ ಆಪ್ ಪೀಪಲ್ ವಿತ್ ಡಿಸೆಬಿಲಿಟಿ- ಬೆನ್ನು ಹುರಿ ಅಪಘಾತದ ವ್ಯಕ್ತಿಗಳ ಪುನರ್ ಚೇತನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಬೆನ್ನು ಹುರಿಗೆ ಮುಖ್ಯ ಕಾರಣ, ರಸ್ತೆ ಅಪಘಾತ, ಮನೆ -ಮಠ- ವಿದ್ಯುತ್ ಕಂಬಗಳಿಂದ ಬೀಳುವದು, ಬೆನ್ನ ಮೇಲೆ ಭಾರವಾದ ವಸ್ತು ಬಿಳುವುದು, ಬೆನ್ನು ಮೂಳೆ ಕ್ಷಯ ಮತ್ತು ಬೆನ್ನು ಹುರಿ ಕಾಯಿಲೆಗಳು. ಎಂದರು. ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ, ಶಾಸಕ ಪ್ರಕಾಶ್ ಕೋಳಿವಾಡ ಅವರು, ಓಂ ಆಸ್ಪತ್ರೆ, ಇಂತಹ ಅಪಘಾತ ವಿಶೇಷ ಚೇತನ ವ್ಯಕ್ತಿಗಳಿಗೆ ಸಂಬಂಧಿಸಿದ ಬೆನ್ನು ಹುರಿ ಕಾಯಿಲೆಗಳಿಗಾಗಿ ಸೇವೆ ಸಲ್ಲಿಸುವ ಏಕೈಕ ಸಂಸ್ಥೆ. ರೋಗಿಗಳು ಬಹು ದೂರದ ಬೆಂಗಳೂರು, ಮುಂಬೈ, ದೆಹಲಿ, ಕಲ್ಕತ್ತಾ, ಮಂಗಳೂರು ಮತ್ತಿತರರೆಡೆ ಹೋಗಬೇಕಾಗಿತ್ತು. ಮಧ್ಯ ಕರ್ನಾಟಕದ ರಾಣೆಬೆನ್ನೂರಲ್ಲಿ ಸ್ಥಾಪಿಸಿ ಉತ್ತಮ ಸೇವೆ ನೀಡುವುದರ ಮೂಲಕ ಸ್ವಯಂ ಚೇತರನ್ನಾಗಿ ಮಾಡುತ್ತಿರುವ ಅವರ ವೈದ್ಯಕೀಯ ಸೇವಾ ಕಾರ್ಯ ಅತ್ಯಂತ ಶ್ಲಾಘ ನೀಯವಾಗಿದೆ ಎಂದರು. ಭವಿಷ್ಯದ ದಿನಗಳಲ್ಲಿ ಇಂತಹ ರೋಗಿಗಳಿಗಾಗಿ ವಿಶೇಷ ವ್ಯವಸ್ಥೆ ಕಲ್ಪಿಸಲು ಮತ್ತಷ್ಟು ಯೋಜನೆಗಳನ್ನು ಸರ್ಕಾರದೊಂದಿಗೆ ಚರ್ಚಿಸಿ ಜಾರಿಗೆ ತರಲು ತಾವು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕರು, ಭರವಸೆ ನೀಡಿದರು. ಮುಖ್ಯ ಅತಿಥಿಯಾಗಿದ್ದ, ಜೆಸಿಐ, ಮಾಜಿ ಅಧ್ಯಕ್ಷ ಹೆಚ್. ಎನ್. ದೇವಕುಮಾರ ಅವರು, ಸಮಾಜದಲ್ಲಿ ಇಂತಹ ವ್ಯಕ್ತಿಗಳು ಎದೆಗುಂದದೆ ಸೂಕ್ತ ಚಿಕಿತ್ಸೆ ಪಡೆದು ಎಂದಿನಂತೆ ಸರಳ ಜೀವನ ಸಾಗಿಸಲು ಮುಂದಾಗಬೇಕು ಎಂದ ಅವರು ಸಾಮೂಹಿಕವಾಗಿ ನೆಡೆಯುವ ಯಾವುದೇ ಕಾರ್ಯಕ್ರಮಗಳಿರಲಿ ಅದಕ್ಕೆ ತಮ್ಮ ಆರ್ಥಿಕ ಸಹಾಯ, ಸಹಕಾರ ನೀಡುವುದಾಗಿ ಅವರು ಘೋಷಿಸಿದರು. ಅಧ್ಯಕ್ಷತೆ ವಹಿಸಿದ್ದ ನಿಶಾರ್ಡ, ಅಧ್ಯಕ್ಷ ಶ್ರೀಮತಿ ರುಕ್ಮಿಣಿಬಾಯಿ ಸಾಹುಕಾರ ಅವರು, ಇಂತಹ ವಿಶೇಷ ಚೇತನರ ಸೇವೆ ಮಾಡುವ ಭಾಗ್ಯ ಸಿಕ್ಕಿರುವುದು ಅದೃಷ್ಟವೆಂದು ಭಾವಿಸಿದ್ದೇವೆ. ಜನ ಸೇವೆಯೇ, ಜನಾರ್ದನ ಸೇವೆ ಎನ್ನುವ ತತ್ವದಲ್ಲಿ ನಂಬಿಕೆ ಇಟ್ಟು. ಸಂಸ್ಥೆ ಪ್ರಾರಂಭಿಸಿದೆ, ನಮ್ಮಲ್ಲಿ ಸಿಗುವ ಸೇವೆಯ ಅವಕಾಶಗಳು ವಿಶೇಷ ವ್ಯಕ್ತಿಗಳು ಪಡೆಯಲು ಮುಂದಾಗಬೇಕು ಎಂದರು. ಬೆನ್ನು ಹುರಿ ಸಮಸ್ಯ ಹೊಂದಿದ ವ್ಯಕ್ತಿಗಳಿಗೆ ಸಿಗುವ ಸರ್ಕಾರದ ಸೌಲಭ್ಯಗಳು ದೊರಕಿಸಿ, ಜನಸಾಮಾನ್ಯರ ಬದುಕಿಗೆ ಆಸರೆ ಆಗಬೇಕೆಂದು ಫಲಾನುಭವಿ, ನ್ಯಾಯವಾದಿ ಶ್ರೀನಿವಾಸ್ ಭಾನುವಳ್ಳಿ ಮತ್ತಿತರರು ಶಾಸಕರಲ್ಲಿ ಮನವಿ ಮಾಡಿದರು. ಕಾಯಿಲೆಗಳಿಗೆ ಸಂಬಂಧಿಸಿದ ನೂರಾರು ರೋಗಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.ಓಂ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮುಖ್ಯ ಸಂಯೋಜಕ ನಿಂಗಪ್ಪ ದೊಡ್ಡಮನಿ, ಅವರು ಪ್ರಾಸ್ಥಾವಿಕವಾಗಿ ಮಾತನಾಡಿದರು. ಶಿಕ್ಷಕಿ ಶ್ರೀಮತಿ ಪ್ರೀತಿ ನಿರೂಪಿಸಿ, ವಂದಿಸಿದರು.