ಅನ್ವಿತಾ ಕೋಲಾರ ಜೆಇಇ ಅಡ್ವಾನ್ಸ್ ಹಂತಕ್ಕೆ ಅರ್ಹತೆ
ಬೈಲಹೊಂಗಲ 23: ಪಟ್ಟಣದ ಕಲ್ಪವೃಕ್ಷ ಸಿಬಿಎಸ್ಇ ಕಾಲೇಜಿನ 12ನೇ ತರಗತಿಯ ಮೊದಲನೆ ಬ್ಯಾಚ್ ವಿದ್ಯಾರ್ಥಿನಿ ಅನ್ವಿತಾ ಕೋಲಾರ ಅವರು ಮೊದಲ ಪ್ರಯತ್ನದಲ್ಲಿ ಜೆಇಇ ಮೇನ್ಸ್ದಲ್ಲಿ ಯಶಸ್ಸು ಸಾಧಿಸಿ ಜೆಇಇ ಅಡ್ವಾನ್ಸ್ ಹಂತಕ್ಕೆ ಅರ್ಹತೆ ಪಡೆದಿದ್ದಾರೆ.
ವಿದ್ಯಾರ್ಥಿನಿ ಸಾಧನೆಗೆ ಸಂಸ್ಥೆಯ ಅಧ್ಯಕ್ಷೆ ಮಂಗಳಾ ಢಮ್ಮಣಗಿ, ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯ ಹನಮೇಶ ದುಡ್ಯಾಳ, ಆಡಳಿತಾಧಿಕಾರಿ ರಾಜಶೇಖರ ಕೋತಂಬ್ರಿ ಹಾಗೂ ಉಪನ್ಯಾಸಕ ಬಳಗದವರು ಅಭಿನಂದಿಸಿದ್ದಾರೆ.