ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅನುರಾಧ ಆಯ್ಕೆ
ಶಿಗ್ಗಾವಿ 13: ಪಟ್ಟಣದ ಪುರಸಭೆ ಸಭಾಭವನದಲ್ಲಿ ಅಧ್ಯಕ್ಷ ಸಿದ್ಧಾರ್ಥಗೌಡ್ರ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಸ್ಥಾಯಿ ಸಮಿತಿಗೆ ನೂತನ ಅಧ್ಯಕ್ಷೆರಾಗಿ ಬಿಜೆಪಿ ಸದಸ್ಯೆ ಅನುರಾಧ ಸುಧೀರ ಮಾಳವದೆ ಅವಿರೋಧವಾಗಿ ಆಯ್ಕೆಯಾದರು.
ಸ್ಥಾಯಿ ಸಮಿತಿಗೆಅನುರಾಧ ಮಾಳವದೆ ಅವರಆಯ್ಕೆಯನ್ನು ಸದಸ್ಯರಾದಜಾಫರಖಾನ್ ಪಠಾಣ ಸೂಚಿಸಿ, ಮಂಜುನಾಥ ಬ್ಯಾಹಟ್ಟಿ ಅನುಮೋದಿಸಿದರು.ಉಳಿದಂತೆ ಸದಸ್ಯರಾಗಿರೂಪಾ ಬನ್ನಿಕೊಪ್ಪ.ರೇಖಾಕಂಕಣವಾಡ, ಸಂಗೀತ ವಾಲ್ಮೀಕಿ, ಶೇಕವ್ವ ವಡ್ಡರ, ಮೈಮುನ್ನಿಸಾ ಲಕ್ಷ್ಮೇಶ್ವರ, ರಮೇಶ ವನಹಳ್ಳಿ ಆಯ್ಕೆಯಾಗಿದ್ದಾರೆ.
ನಂತರ ನಡೆದಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಸ್ಥಾಯಿ ಸಮಿತಿ ನೂತನ ಅಧ್ಯಕ್ಷೆ ಅನುರಾಧ ಮಾಳವದೆ, ತಮ್ಮಆಯ್ಕೆಗೆ ಸಹಕರಿಸಿದ ಸಂಸದ ಬಸವರಾಜ ಬೊಮ್ಮಾಯಿ ಮತ್ತು ಪುರಸಭೆಅಧ್ಯಕ್ಷ, ಉಪಾಧ್ಯಕ್ಷೆ, ಸದಸ್ಯರಿಗೆ ಕೃತಜ್ಞನಾಗಿದ್ದು. ತಮ್ಮ ಅಧಿಕಾರ ಅವಧಿಯಲ್ಲಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಯೋಜನಾ ಬದ್ದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಭರವಸೆ ನೀಡಿದರು.
ಉಪಾಧ್ಯಕ್ಷೆ ಶಾಂತಾಬಾಯಿ ಸುಭೇದಾರ, ಸದಸ್ಯರಾದ ಸುಭಾಸಚವ್ಹಾಣ, ಪರಶುರಾಮ ಸೊನ್ನದ, ಮುಖ್ಯಾಧಿಕಾರಿ ಮಲ್ಲೇಶ್ಎನ್. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ನಂತರ ಸಾರ್ವಜನಿಕರು ಸ್ಥಾಯಿ ಸಮಿತಿ ನೂತನ ಅಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಿದರು. ಪುರಸಭೆ ಅಧಿಕಾರಿ ಶೈಲಾ ಪಾಟೀಲ ನಿರೂಪಿಸಿದರು.